ಶನಿವಾರ, ನವೆಂಬರ್ 1, 2008

ಮಂಗಳೂರಿನ ಕೆರೆಗಳನ್ನು ರಕ್ಷಿಸೋಣ

ಮಂಗಳೂರು ಸುತ್ತಲಿನ ಪುರಾತನ ಕೆರೆಗಳನ್ನು ಸಂರಕ್ಷಿಸಬೇಕಾದ ತುರ್ತು ಇದೀಗ ಇದೆ. ತುಂಬೆಯ ನೀರು ಮಂಗಳೂರಿನ ಕುಡಿಯುವ ನೀರಿನ ದಾಹವನ್ನು ತೀರಿಸುತ್ತದೆ ನಿಜ, ಆದರೆ ನಗರದ ಅಂತರ್ಜಲವನ್ನು ರಕ್ಷಿಸುವ ನಿಟ್ಟಿನಲ್ಲಿ ಇಲ್ಲಿನ ಕೆರೆಗಳ ಜೀರ್ಣೋದ್ಧಾರ ನಡೆಯಬೇಕಾಗಿದೆ. ಅಲ್ಲದೆ ಪ್ರಾಚೀನ ಕೆರೆಗಳನ್ನು ಸಂರಕ್ಷಿಸುವುದು ನಗರದ ಘನತೆಯನ್ನೂ ಹೆಚ್ಚಿಸುತ್ತದೆ.
ಮಂಗಳೂರಿನ ಸುತ್ತಲೂ ಇರುವ ಪುರಾತನ ಕೆರೆಗಳಾದ ಅತ್ತಾಚರದ ಗುಜ್ಜರ ಕೆರೆ, ಎಮ್ಮೆಕೆರೆ, ಅರೆಕೆರೆ, ತಾವರೆ ಕೆರೆ, ಓಣಿಕೆರೆ, ಮೋಯ್ಲಕೆರೆ, ಕಾವೂರು ಕೆರೆ, ಪಡೀಲಿನ ಬೈರಾಡಿ ಕೆರೆ ಈ ಎಲ್ಲ ಕೆರೆಗಳೂ ಒಂದು ಕಾಲದಲ್ಲಿ ಮಂಗಳೂರಿನ ಕುಡಿಯವ ಹಾಗೂ ಮತ್ತಿತರ ಬಳಕೆಯೆ ನೀರಿನ ದಾಹವನ್ನು ಇಂಗಿಸಿದ ಪುಣ್ಯತಾಣಗಳು. ಆದರೆ ಈಗ ಏನಾಗಿದೆ ?
ಹೆಚ್ಚಿನ ಕೆರೆಗಳು ಹೆಸರಿಗೆ ಮಾತ್ರವೇ ಇವೆ-ಅಥವಾ ಹೆಸರು ಮಾತ್ರ ಇವೆ ಎಂಬಂತಾಗಿದೆ. ಹೂಳು ತೆಗೆಯದೇ ಇರುವುದು, ಒತ್ತುವರಿ ಮಾಡಿರುವುದು, ತ್ಯಾಜ್ಯ ಗುಂಡಿಯಾಗಿ ಈ ಕೆರೆಗಳನ್ನು ಬಸುವುದು ಸೇರಿದಂತೆ ಹಲವಾರು ಬೇಜವಾಬ್ದಾರಿ ಕೆಲಸಗಳಿಂದ ಇವು ಸಂಕಷ್ಟ ಸ್ಥಿತಿಯಲ್ಲಿವೆ.
ಗುಜ್ಜರ ಕೆರೆ :
ಈ ನಿಟ್ಟಿನಲ್ಲಿ ಗುಜ್ಜರ ಕೆರೆಯ ಜೀರ್ಣೋದ್ಧಾರಕ್ಕೆ ನಮ್ಮ ಸಮಿತಿಯ ಆಶರಯದಲ್ಲಿ ಪ್ರಾಥಮಿಕ ಕೆಲಸಗಳು ಆಗಿದ್ದವಾದರೂ, ಇದೀಗ ನೆನೆಗುದಿಗೆ ಬಿದ್ದಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಜಪ್ಪು ಮಾರುಕಟ್ಟೆ ಹತ್ತಿರ `ಗುಜ್ಜರ ಕೆರೆ` ಇದೆ. ಗುರು ಜನರ ಕೆರೆ ಎಂದು ಪುರಾತನ ಕಾಲದಿಂದಲೂ ಈ ಕೆರೆ ಮಂಗಳೂರಿನ ಗತ ವೈಭವಕ್ಕೊಂದು ಸಾಕ್ಷಿ. ಕರ್ನಾಟಕ ಸರಕಾರ ಪಾಳು ಬಿದ್ದ ಕೆರೆಗಳ ಸಂರಕದಷಣೆಗೆ ಹಮ್ಮಿಕೊಂಡ `ನಮ್ಮ ಕೆರೆ ನಮ್ಮ ಹಕ್ಕು' ಎಂಬ ಹೆಸರಿನ ಜಲ ಸಂವರ್ಧನಾ ಯೋಜನೆಯ ಹಿನ್ನೆಲೆಯಲ್ಲಿ ಗುಜ್ಜರ ಕೆರೆಯ ಸಂರಕ್ಷಣೆಗೆ ನಾವು ಕನಸು ಕಂಡೆವು. ಯೋಜನೆಯ ಮಾರ್ಗದರ್ಶನದಂತೆ ಗುಜ್ಜರ ಕೆರೆ ತೀರ್ಥ ಸಂರಕ್ಷಣಾ ವೇದಿಕೆ ಎಂಬ ಹೆಸರಿನಲ್ಲಿ ಒಕ್ಕೂಟ ಮಾಡಿ ಜಿಲ್ಲಾ ನೋಂದಣಾಕಾರಿಗಳ ಸಮ್ಮುಖದಲ್ಲಿ ವೇದಿಕೆಯನ್ನು ರಿಜಿಸ್ಟರ್ ಮಾಡಿಸಲಾಯಿತು. ಸಮಿತಿಯ ಮೂಲಕ ಗುಜ್ಜರ ಕೆರೆ ಸಂರಕ್ಷಣೆಗೆ ಮನವಿ ಅರ್ಪಿಸಿದಾಗ ಸಣ್ಣ ನೀರಾವರಿ ಇಲಾಖೆಯಿಂದ ೨ .೩೦ ಕೋಟಿ ರೂ. ವೆಚ್ಚದಲ್ಲಿ ಅಂದಾಜು ಪಟ್ಟಿಯನ್ನು ತಯಾರಿಸುವಂತೆ ಕೋರಲಾಯಿತು. ೨೦೦೧ರಲ್ಲೇ ಇದೆಲ್ಲ ನಡೆದು ಈ ಭಾಗದ ಸಂಸದರು, ಶಾಸಕರು ಎಲ್ಲರಿಗೂ ಈ ವಿಷಯವನ್ನು ಆಗಾಗ ನೆನಪಿಸುತ್ತ ಇದ್ದೇವೆ. ಆದರೆ ನಾವಂದುಕೊಂಡ ಕೆಲಸ ಮಾತ್ರ ಚುರುಕಾಗಿ ಆಗುತ್ತಿಲ್ಲ.
ವಾಸ್ತವದಲ್ಲಿ ಕೆರೆ ೩.೪೩ ಎಕ್ರೆ ವಿಸ್ತೀರ್ಣ ಇದೆ ಎಂದು ಸರಕಾರಿ ದಾಖಲೆಗಳು ಹೇಳುತ್ತವೆ. ಆದರೆ ಇದೀಗ ಹೂಳು ತುಂಬಿದ್ದು, ಜನರು ತ್ಯಾಜ್ಯವನ್ನು ಎಸೆಯುತ್ತಿದ್ದಾರೆ. ಸಾರ್ವಜನಿಕರ ವಿಚಾರ ಹಾಗಿರಲಿ, ಮಹಾನಗರ ಪಾಲಿಕೆ ಕೂಡ ಈ ಕೆರೆಯ ನಿಟ್ಟಿನಲ್ಲಿ ಒಂದಿಷ್ಟು ಬೇಜವಾಬ್ದಾರಿ ಪ್ರದರ್ಶಿಸಿತು. ಒಮ್ಮೆ ಇಲ್ಲಿ ಹಾದು ಹೋಗುತ್ತಿದ್ದ ಒಳ ಚರಂಡಿ ಪೈಪ್ ಒಡೆದಾಗ ತ್ಯಾಜ್ಯವನ್ನೇ ಇದಕ್ಕೆ ಹರಿಬಿಡಲಾಯಿತು. ಈ ವಿಷಯವನ್ನು ಪಾಲಿಕೆಯ ಗಮನಕ್ಕೂ ತರಲಾಯಿತು.
ಅಷ್ಟೆಲ್ಲ ಆದರೂ ಗುಜ್ಜರ ಕೆರೆಯ ಜೀರ್ಣೋದ್ಧಾರ ಕಾರ್ಯ ಮಾತ್ರ ಯೋಜನೆಯ ರೂಪದಿಂದ ಕಾಮಗಾರಿ ರೂಪಕ್ಕೆ ಬರುತ್ತಿಲ್ಲ.
ಇನ್ನಾದರೂ ಗುಜ್ಜರ ಕೆರೆಯನ್ನು ಯಾರೂ ಯಾವ ಕಾಲಕ್ಕೂ ಅತಿಕ್ರಮಿಸದಂತೆ ನೋಡಿಕೊಳ್ಳುಬೇಕು, ಆದಷ್ಟು ಬೇಗನೆ ಇದನ್ನು ಜೀರ್ಣೋದ್ಧಾರ ಮಾಡಬೇಕು ಎಂಬುದು ಗುಜ್ಜರ ಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಆಗ್ರಹವಾಗಿದೆ.
ವಿಜಯ ಕರ್ನಾಟಕ ಕೈಗೊಂಡ ಮುಂದೆ ಹೋಗೋಣ ಮಂಗಳೂರು ಆಂದೋಲನದ ಮೂಲಕ ಇಲ್ಲಿನ ಪುರಾತನ ಕೆರೆಗಳಿಗೆಲ್ಲ ಕಾಯಕಲ್ಪ ಆಗಲಿ ಎಂದು ನಾವು ಹಾರೈಸುತ್ತೇವೆ.
ಪಿ. ನೇಮು ಕೊಟ್ಟಾರಿ
ಕಾರ್ಯದರ್ಶಿ, ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆ
ಮಂಗಳೂರು

ತುಳುನಾಡವರೇ ತಾಯಿ


ನಾವು ವಿಶ್ವ ಮಾನವರಾಗೋಣ. ರಾಷ್ಟ್ರ ಪ್ರೇಮಿಗಳಾಗುವುದರೊಂದಿಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ಹೋರಾಡೋಣ. ಆದರೆ,ಭಾರತದ ಮುಖ್ಯ ಭಾಷೆಗಳಲ್ಲಿ ಒಂದಾದ ತುಳುನಾಡ ಭಾಷೆಯಾದ ತುಳುವನ್ನು ಪ್ರಾಥಮಿಕ ಹಂತದಲ್ಲಿಯಾದರೂ ಕನ್ನಡ ಅಕ್ಷರದಲ್ಲಿ ಬರೆಯಲು, ತಮಿಳು, ಮಲೆಯಾಳಂ, ಮರಾಟಿ, ಕೊಂಕಣಿ ಮೊದಲಾದ ಭಾಷೆಗಳಂತೆ ಪ್ರತಿಭಾ
ಕಾರಂಜಿಯಲ್ಲಿ ರ್ಸ್ಪಸಲು, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಗಳಂತೆ ಸಂವಹನದಲ್ಲಿ ಮಾತುಕತೆಯಾಡಲು, ಭಾಷಣ ಮಾಡಲು ತುಳು ನಾಡಿನಲ್ಲಾದರೂ ಶಾಲೆ ಕಾಲೇಜುಗಳವರು ಅನುವು ಮಾಡಿಕೊಡುವುದು ಭಾಷೆಗಳ ಅಭಿವೃದ್ಧಿಗೆ, ಸಾಂಸ್ಕೃತಿಕ ಸಮನ್ವಯ ಬೆಳವಣಿಗೆಗೆ, ಜಾಗತೀಕರಣದ ಈ ಸಂದರ್ಭದಲ್ಲಿ ಮಂಗಳೂರು ಎಲ್ಲ ರೀತಿಯಲ್ಲಿ ಮುಂದುವರಿಯಲು ಖಂಡಿತ ಸಹಾಯವಾಗುತ್ತದೆ.
ತುಳು/ಕನ್ನಡ ಭಾಷೆಗಳಲ್ಲಿ ಯಕ್ಷಗಾನ ರಾಷ್ಟ್ರೀಯ ನೃತ್ಯ ಪ್ರಕಾರವಾಗಿ, ಕಥಕ್ಕಳಿ, ಕೂಚುಪುಡಿ ನಾಟ್ಯ ಪ್ರಕಾರಗಳಂತೆ ಮಾನ್ಯತೆ ಪಡೆಯುವುದಕ್ಕೆ, ಅರ್ಹತೆ ಪಡೆಯುವುದಕ್ಕೆ ನಮ್ಮ ಮುಂದಾಳುಗಳಲ್ಲಿ ಇಚ್ಛಾ ಶಕ್ತಿ ಕೂಡಿಬರಲೆಂದು ನಮ್ಮ ಹಾರೈಕೆ. ತುಳು ಅಕಾಡೆಮಿ, ತುಳು ಪೀಠ, ತುಳು ಕೂಟಗಳು, ಸಾಮಾಜಿಕ ಒಕ್ಕೂಟಗಳು, ತಾಯ್ ನುಡಿಗೆ ದುಡಿದು ಮಡಿ ಎಂದು ಕುವೆಂಪು ಅವರು ಹಾಡಿದುದನ್ನು, ಆಡಿದುದನ್ನು ನಾವು ತುಳುನಾಡು ನುಡಿಯ ಕುರಿತು ಮಾಡುವ ಸಂಕಲ್ಪ ಕೈಗೊಂಡರೆ ಅದು ನಮ್ಮ ಗುರಿ. ಅದಕ್ಕೊಬ್ಬ ಗುರು ನಮ್ಮ ಮಾರ್ಗದರ್ಶಿಯಾಗಬೇಕು ಎನ್ನುವುದು ನಮ್ಮ ಆಶಯ.
- ಕುದ್ಕಾಡಿ ವಿಶ್ವನಾಥ ರೈ, ವಿಶ್ವಕಲಾನಿಕೇತನ ಪುತ್ತೂರು

ಪತ್ರಿಕೆಯ ನಡೆ
ಸೂರ್ತಿಯಾಗಲಿ
`ಮುಂದೆ ಹೋಗೋಣ ಮಂಗಳೂರು' ಆಕರ್ಷಕ ಅಂಕಣದ ಮೂಲಕ ಮಂಗಳೂರು ಮಹಾನಗರದ ಸಮಗ್ರ ಅಭಿವೃದ್ಧಿಗೆ ಆಡಳಿತ ವರ್ಗವನ್ನು ಮತ್ತು ಜನತೆಯನ್ನು ಸಜ್ಜುಗೊಳಿಸುವ ವಿಜಯಕರ್ನಾಟಕದ ಬಗ್ಗೆ ಮೆಚ್ಚುಗೆಯುಂಟಾಯಿತು. ಪತ್ರಿಕೆಯೆಂಬುದು ಜನರ ಧ್ವನಿ. ಜನರನ್ನೂ ಸೇರಿಸಿಕೊಂಡು ವಿಜಯಕರ್ನಾಟಕ ನಡೆಸುತ್ತಿರುವ ಇಂತಹ ಅಭಿವೃದ್ಧಿಪರ ಅಭಿಯಾನಗಳು ಖಂಡಿತ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಪತ್ರಿಕೆ ಹಾಗೂ ಓದುಗರೊಂದಿಗೆ ಒಂದು ವಿಶೇಷ ಸಂಬಂಧ ಸೃಷ್ಟಿಯಾಗಲೂ ಈ ಹೊಸ ಅಭಿಯಾನ ಪ್ರೇರಣೆಯಾಗಬಹುದು. ದಿನೇ ದಿನೇ ಅಭಿವೃದ್ಧಿಯ ಉನ್ನತ ಶಿಖರದತ್ತ ನೆಗೆಯುತ್ತಿರುವ ಮಂಗಳೂರು ನಗರವನ್ನು ಸಂಪೂರ್ಣ ಶುಚಿಯಾಗಿಡುವ ಮೂಲಕ ಸ್ವಚ್ಛ ನಗರವನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತಕ್ಕೆ ವಿಜಯಕರ್ನಾಟಕದ ನಡೆ ಸೂರ್ತಿಯಾದರೆ ಇದರ ಹಿಂದಿರುವ ಪತ್ರಿಕಾ ಮಂಡಳಿಯ ಶ್ರಮ ಸಾರ್ಥಕ. ವಿಜಯ ಕರ್ನಾಟಕದ ಹೊಸ ಅಭಿಯಾನದೊಂದಿಗೆ ಓದುಗರಾದ ನಾವೂ ಕೈಜೋಡಿಸೋಣ.
ಕೆ. ಎ. ಅಬ್ದುಲ್ ಅಝೀಝ್ ಝಹ್‌ರಿ, ಪುಣಚ
ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಝಹ್‌ರೀಸ್ ಅಸೋಸಿಯೇಶನ್.
ಬೆಂಗಳೂರಿಗೆ ನೇರ ರೈಲು, ಕೊಣಾಜೆಗೆ ನೇರ ರಸ್ತೆ ಬೇಕು
ಮಂಗಳೂರು ಕರ್ನಾಟಕದ ವಾಣಿಜ್ಯ ನಗರವಾಗಿದ್ದು, ಇದನ್ನು ರಾಜ್ಯದ ಪಶ್ಚಿಮ ಹೆಬ್ಬಾಗಿಲು ಎನ್ನಬಹುದು.ದೇಶದ ಪ್ರಮುಖ ನಗರಗಳು ಹಾಗೂ ಹೊರದೇಶಗಳಿಗೆ ಇಲ್ಲಿಂದ ನಿತ್ಯ ನೇರ ವಿಮಾನಯಾನವಿದೆ. ಮಂಗಳೂರು ಬೆಳೆಯುತ್ತಿರುವ ಬಂದರು. ಇದರ ಬೆಳವಣಿಗೆ ನಾಗಾಲೋಟ. ಇಲ್ಲಿಂದ ೮೮೦ ಕಿ.ಮೀ ದೂರದ ತಮಿಳುನಾಡಿನ ರಾಜಧಾನಿ ಚೆನ್ನೈಗೆ, ೬೬೦ ಕಿ.ಮೀ ದೂರದ ಕೇರಳದ ರಾಜಧಾನಿ ತಿರುವನಂತಪುರಕ್ಕೆ ನೇರ ರೈಲುಗಳು ಓಡುತ್ತವೆ. ಹಾಗೆಯೇ ಮಹಾರಾಷ್ಟ್ರ ರಾಧಾನಿ ಮುಂಬಯಿ ಮತ್ತು ಗೋವಾದ ಮಡಗಾಂವ್‌ಗೂ ನೇರ ರೈಲುಯಾನಗಳಿವೆ.
ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಇಲ್ಲಿಂದ ನೇರ ರೈಲು ಸಂಪರ್ಕವಿಲ್ಲದಿರುವುದು ವಿಪರ್ಯಾಸ. ಇರುವ ಒಂದು ರೈಲು ಹಾಸನ-ಮೈಸೂರಿಗಾಗಿ ಸುತ್ತಿಬಳಸಿ ಬೆಂಗಳೂರು ತಲುಪುತ್ತದೆ. ಈ ದಾರಿಯ ಪ್ರಯಾಣದ ವೆಚ್ಚವೂ ಹೆಚ್ಚು. ಸಮಯವೂ ಜಾಸ್ತಿ. ಬದಲಾಗಿ ಒಂದು ರೈಲು ಅರಸೀಕೆರೆ ಮಾರ್ಗವಾಗಿ ಬೆಂಗಳೂರಿಗೆ ಓಡಿಸಿದರೆ ಹೆಚ್ಚು ಅನುಕೂಲ. ಪ್ರಯಾಣದ ಸಮಯವೂ ಕಡಿಮೆ, ವೆಚ್ಚವೂ ಕಡಿಮೆ. ಅಲ್ಲದೆ ಈ ಮಾರ್ಗ ಬೆಂಗಳೂರು ಮತ್ತು ಹುಬ್ಬಳ್ಳಿ ಕಡೆಗೆ ಪ್ರಯಾಣಿಸುವವರಿಗೆ ತುಂಬಾ ಅನುಕೂಲ. ಆ ಕಡೆಯ ಉತ್ಪನ್ನಗಳಿಗೆ ಮಂಗಳೂರು ಒಂದು ಮಾರುಕಟ್ಟೆ ಮಾತ್ರವಲ್ಲ, ಬಂದರು ಮೂಲಕ ಸಾಗಾಣಿಕೆಗೆ ರಹದಾರಿ. ಹೀಗಾಗಿ ಮಂಗಳೂರು-ಬೆಂಗಳೂರು ನಡುವೆ ಇನ್ನೂ ಹೆಚ್ಚು ರೈಲುಗಳ ಓಡಾಟಕ್ಕೆ ಸಂಬಂಧಪಟ್ಟ ಅಕಾರವುಳ್ಳವರು ಪ್ರಯತ್ನಿಸಬೇಕು.
ಮಂಗಳೂರು ವಿಶ್ವವಿದ್ಯಾಲಯ ನಗರದಿಂದ ದೂರದಲ್ಲಿದೆ. ಈ ದೂರವನ್ನು ಕಡಿಮೆ ಮಾಡಲು ಅಡ್ಯಾರ್‌ನಲ್ಲಿ ನೇತ್ರಾವತಿಗೆ ಒಂದು ಸೇತುವೆ ನಿರ್ಮಾಣವಾಗಬೇಕು. ಇದರಿಂದ ಈ ದೂರ ಅರ್ಧದಷ್ಟು ಕಡಿಮೆಯಾಗುತ್ತದೆ. ಅಲ್ಲದೆ ಯುನಿವರ್ಸಿಟಿಯ ಸುತ್ತಮುತ್ತ ಇರುವ ಮೆಡಿಕಲ್, ಎಂಜಿನಿಯರಿಂಗ್, ದಂತವೈದ್ಯ ಕಾಲೇಜುಗಳು ಮಂಗಳೂರಿಗೆ ಹತ್ತಿರವಾಗುತ್ತವೆ. ಕೊಣಾಜೆಯಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ ಕೇಂದ್ರವೂ ಹತ್ತಿರವಾಗುತ್ತದೆ. ಮುಂದೆ ಮಂಗಳೂರಿನ ಕೆಲವು ವರ್ಗದ ಜನರು ವಸತಿಗಾಗಿ ಈ ಪ್ರದೇಶಕ್ಕೆ ಬರಬಹುದು.
-ಬಿ. ಬಾಬು
ಪಿಂಚಣಿದಾರ
ಶಿವಪೇಟೆ, ಪುತ್ತೂರು.
ದಿಟ್ಟ ಹೆಜ್ಜೆ
ಮಂಗಳೂರು ಅಭಿವೃದ್ಧಿಯ ಹೊಸ ಹರಿಕಾರ
ಮುಂದೆ ಹೋಗೋಣ ಮಂಗಳೂರಿನ ಓ ಓಲೆಗಾರ

ಮುನ್ನಡೆಗೆ ಮುನ್ನುಡಿಯ ಬರೆದ ಬರಹಗಾರ
ಐಟಿ ಬಿಟಿ ಹೈಟೆಕ್ ಸಿಟಿಗಳ ಬಗ್ಗೆ ಆ ವಿವರ
ವಾಣಿಜ್ಯ-ವ್ಯಾಪಾರ ಹೋಟೆಲ್‌ಗಳು ಸುಂದರ
ಸುಜಲಾಂ-ಸುಫಲಾಂ ಸಸ್ಯ ಶ್ಯಾಮಲಾಂ ಪರಿಸರ
ಆರೋಗ್ಯ-ಶಿಕ್ಷಣ-ಬಡವರ ಆಶಾಕಿರಣದ ಸರಕಾರ
ಮಾಂಸೋದ್ಯಮ, ಮತ್ಸ್ಯೋದ್ಯಮ, ಪ್ರವಾಸೋದ್ಯಮ ಬಂದರ
ರಾತ್ರಾಸ್ಥಳ-ಚಾರಣಗಳು-ಜಲಪಾತವು ಪ್ರವಾಸಿಗರ
ಮನ ಸೆಳೆಯುವ ಬಳಿ ಕತೆಯುವ ತಾಣ ಈ ಕಡಲ ತೀರ
ಜನಮನದಲಿ ಸಾಮರಸ್ಯದ ಹಣತೆ ಬೆಳಗಿ ಎಲ್ಲರ
ಸಂಸ್ಕಾರ ಸಂಸ್ಕೃತಿಯ ಬೆಳೆಸೋ ಈ ಮಣ್ಣಿನ ವಿವರ
ತಟ್ಟಿಹುದು ಮುಟ್ಟಿಹುದು ಪತ್ರಿಕೆಯು ಜನರ

ಜಾತಿ ಬೇಧ, ಪಕ್ಷ ಬೇಧ ಮರೆತು ಹೋರಾಡುವವರ
ಮುಂದೆ ಹೋಗೋಣ ಲೇಖನ ನೀಡಲು ಸಹಕಾರ
ಅಭಿವೃದ್ಧಿ ಆದುದನು ಬರೆದು ಹೊಗಳೋ ಅಕಾರ
ಅಭಿವೃದ್ಧಿಯಲಿ ಉಳಿದಿಹುದ ತಿಳಿಸಿ ಹೇಳೋ ಮಮಕಾರ
ಪತ್ರಿಕೆಯ `ದಿಟ್ಟ ಹೆಜ್ಜೆ' ಗುರುತಿಸಲು ಕಾತರ
ಅಭಿಮಾನದಿ ಅಭಿವೃದ್ಧಿಯ ಕಿರೀಟ ತೊಡಿಸೋ ಆತುರ
ಮುನ್ನಡೆಯಲಿ-ಗುರಿ ತಲುಪಲಿ ಕೇಳದಿರಲಿ ಅಪಸ್ವರ
ಹೆಜ್ಜೆ ಹೆಜ್ಜೆ ಒಂದುಗೂಡಿ ಮುನ್ನಡೆಯುವ ನಿರಂತರ
- ಕಲಾವತಿ ಕೃಷ್ಣಾಪುರ,
ಕಾಟಿಪಳ್ಳ


ಮತ್ಸ್ಯೋದ್ಯಮಕ್ಕೆ ದಿಕ್ಸೂಚಿಯಾಗಲಿ

ಮುಂದೆ ಹೋಗೋಣ ಮಂಗಳೂರು ಮಾಲಿಕೆ ಮತ್ಸ್ಯೋದ್ಯಮ ಅಭಿವೃದ್ಧಿಗೆ ದಿಕ್ಸೂಚಿಯಾಗಲಿ. ಪತ್ರಿಕೆಯ ಅಭಿಯಾನ ಸ್ವಾಗತಾರ್ಹ.
ಕರಾವಳಿಯ ಮೀನುಗಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಇದು ಪ್ರೇರಣೆಯಾಗಿ ಇನ್ನಾದರೂ ಸರಕಾರ ಕೇವಲ ಆಶ್ವಾಸನೆಗೆ ಸೀಮಿತವಾಗದೆ ಅಭಿವೃದ್ಧಿ ಕೆಲಸಗಳ ಕಾರ್ಯಗತಕ್ಕೆ ಸಿದ್ಧವಾಗಬೇಕು. ಸಂಕಷ್ಟದಲ್ಲಿರುವ ಮತ್ಸ್ಯೋದ್ಯಮಕ್ಕೆ ಸ್ಪಂದಿಸಿ ಬಡ ಮೀನುಗಾರರ ಜೀವನ ಸುಧಾರಣೆಗೆ ಪ್ರಯತ್ನಿಸಬೇಕು.
ಸರಕಾರ ಮತ್ಸ್ಯಾಶ್ರಯ ಮನೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು, ಅನೇಕ ವರ್ಷಗಳಿಂದ ದುರವಸ್ಥೆಯಲ್ಲಿರುವ ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿಯತ್ತ ಗಮನ ಹರಿಸಬೇಕು, ಮಾರುಕಟ್ಟೆಗಳಲ್ಲಿ ಶೌಚಾಲಯ ವ್ಯವಸ್ಥೆ ಸಹಿತ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಮೀನುಗಾರರ ಸಂಕಷ್ಟ ಪರಿಹಾರ ನಿಯನ್ನು ಹೆಚ್ಚಿಸಬೇಕು.
ಈ ವಿಷಯಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಮಾಲಿಕೆ ಪ್ರಶಂಸನೀಯ. ವಿಜಯ ಕರ್ನಾಟಕ ಜನರು ಮತ್ತು ಸರಕಾರದ ನಡುವೆ ಕೊಂಡಿಯಾಗಿ ಪ್ರಕಾಶಿಸಲಿ ಎಂದು ಹಾರೈಸುತ್ತೇನೆ.
- ಬಿ. ರಾಜು ತೋಟದಬೆಟ್ಟು,
ತೆಕ್ಕಟ್ಟೆ ಗ್ರಾ.ಪಂ. ಸದಸ್ಯ


ನಮಗೂ ಬೇಕು
`ಅಬ್ಬಕ್ಕ ಉತ್ಸವ'
`ಮಂಗಳೂರಿನ ರಾಣಿ ಅಬ್ಬಕ್ಕನ ನೆನಪಿಗಾಗಿ ಮಾಡುತ್ತಿದ್ದ `ಅಬ್ಬಕ್ಕ ಉತ್ಸವ' ಈಗ ತೆರೆ ಮರೆಗೆ ಸರಿದಿದೆ. ಆದರೆ ಮಂಗಳೂರಿನ ಬೆಳವಣಿಗೆಗೆ ಇಂತಹ ಉತ್ಸವ ಅಗತ್ಯ. ರಾಜ್ಯ,ದೇಶ ಮಟ್ಟದಲ್ಲಿ ಜನರ ಆಕರ್ಷಣೆ ಮಾಡಲು ಉತ್ಸವದ ಅಗತ್ಯವಿದೆ. ತುಳು ನಾಡಿನ ಸಂಸ್ಕೃತಿ, ಕಲೆ, ಜಾನಪದದ ಶ್ರೀ ಮಂತಿಕೆಗೆ ಇದೊಂದು ಉತ್ತಮ ವೇದಿಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ರಾಜ್ಯದ ಬೇರೆ ಜಿಲ್ಲೆಗಳು ಹಂಪಿ, ಕಿತ್ತೂರು ಉತ್ಸವದಂತೆ ಕರಾವಳಿಯಲ್ಲಿ ಅಬ್ಬಕ್ಕ ಉತ್ಸವ ಬರಲಿ. ಇದಕ್ಕೆ ಜಿಲ್ಲಾಡಳಿತ ಹಾಗೂ ಸರಕಾರ ಕೂಡ ಪ್ರೋತ್ಸಾಹ ನೀಡುವುದು ಅವಶ್ಯಕ'
ಮಂಜುನಾಥ ಹೂಗಾರ್
ರಂಗಭೂಮಿ ಕಲಾವಿದ

`ಕೋಳಿಗಳಿಗೂ
ತೆರಿಗೆ ಬೀಳಬೇಕು'
`ರಾಜ್ಯದಿಂದ ಕೋಳಿ ಹಾಗೂ ಅದರ ಇತರ ಉತ್ಪನ್ನಗಳು ಕೇರಳದ ಗಡಿ ದಾಟಬೇಕಾದರೆ ಶೇ.೨೦ ರಷ್ಟು ತೆರಿಗೆಯನ್ನು ವಿಸಲಾಗುತ್ತದೆ. ಆದರೆ ಅಲ್ಲಿಂದ ಬರುವ ಕೋಳಿಗಳ ಮೇಲೆ ಯಾವುದೇ ತೆರಿಗೆ ಇಲ್ಲ. ಆಂಧ್ರಪ್ರದೇಶ, ಪುಣೆ, ತಮಿಳುನಾಡಿನಿಂದ ಬರುವ ಕೋಳಿಗಳಿಗೆ ಬೆಲೆ ಕೂಡ ಕಡಿಮೆ. ಇಲ್ಲಿಯ ಕೋಳಿ ಸಾಕಾಣೆದಾರರಿಗೆ ಇದರಿಂದ ದೊಡ್ಡ ಹೊಡೆತ ಬೀಳುತ್ತಿದೆ. ದೊಡ್ಡ ಮಟ್ಟದ ಕೋಳಿ ಸಾಕಾಣೆದಾರರಿಗೆ ಮಾತ್ರ ಇಲ್ಲಿ ಬದುಕಲು ಅವಕಾಶ. ಸಣ್ಣ ಮಟ್ಟದ ಕೋಳಿ ಸಾಕಾಣೆಗೆ ಇಲ್ಲಿ ಅವಕಾಶವೇ ಇಲ್ಲದೇ ಹೋಗುತ್ತದೆ'
ದೀಪಕ್ ಡಿ ಸೋಜಾ
ಮರಿಯಾ ಹ್ಯಾಚರೀಸ್

ಸಾಮರಸ್ಯ ಹೃದಯದಿಂದ ಅರಳಲಿ

ಶತಮಾನಗಳಿಂದ ಯುಗಾಂಡ ಮತ್ತು ಸೊಮಾಲಿಯಾ ಅದೇ ರೀತಿ ಇದೆ. ಯಾಕೆಂದರೆ ಅಲ್ಲಿನ ಅರಾಜಕತೆ. ವರ್ಗ ಸಂಘರ್ಷ, ಜನಾಂಗೀಯ ಗಲಭೆ, ಭಯೋತ್ಪಾದನೆ ಅಲ್ಲಿನ ಜನರನ್ನು ನರಕಕ್ಕೆ ತಳ್ಳುವಂತೆ ಮಾಡಿದೆ.
ಕೋಮು ಗಲಭೆ, ಜನಾಂಗೀಯ ಘರ್ಷಣೆ, ಭಯೋತ್ಪಾದನೆ ಎನ್ನುವುದು ಕೇವಲ ಸೊಮಾಲಿಯಾ ಅಥವಾ ಯುಗಾಂಡಕ್ಕೆ ಮಾತ್ರ ಸೀಮಿತವಾದ ವಿಷಯವಲ್ಲ. ಅಭಿವೃದ್ಧಿಶೀಲ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ ಮುಂತಾದ ದೇಶಗಳನ್ನೂ ಇದು ಬಿಟ್ಟಿಲ್ಲ. ಆಹಾರ, ಸಾಕ್ಷರತೆ, ಆರೋಗ್ಯಕ್ಕಾಗಿ ನಡೆಯಬೇಕಾದ ಚಳವಳಿ ಜೀವವಿರೋಗಳ ಕೈಗೆ ಸಿಕ್ಕಿದಾಗ ಕೋಮು ಗಲಭೆ, ಜನಾಂಗೀಯ ಘರ್ಷಣೆ, ಭಯೋತ್ಪಾದನೆ ತಲೆ ಎತ್ತುತ್ತದೆ. ಮನುಷ್ಯ- ಮನುಷ್ಯರ ನಡುವಿನ ಸಂಬಂಧಕ್ಕೆ ಮೊದಲ ಆದ್ಯತೆ ನೀಡಬೇಕಾದ ನಾವು ಮನುಷ್ಯ- ದೇವರ ನಡುವಿನ ಸಂಬಂಧಕ್ಕೆ ಮೊದಲ ಆದ್ಯತೆ ನೀಡುವುದೇ ಇದಕ್ಕೆ ಮುಖ್ಯ ಕಾರಣ. ನಾವು ಏನಿದ್ದರೂ ಮೊದಲು ಮಾನವ ಸಂಬಂಧಕ್ಕೆ ಮೊದಲ ಪ್ರಾಮುಖ್ಯತೆ ನೀಡಬೇಕು, ಎರಡನೆಯದಾಗಿ ಮನುಷ್ಯ- ಪ್ರಕೃತಿ ನಡುವಿನ ಸಂಬಂಧಕ್ಕೆ ಗಮನ ನೀಡಬೇಕು. ಹಸಿರು ಉಳಿದಾಗ ಮಾತ್ರ ನಾವು ಉಸಿರಾಡಲು ಸಾಧ್ಯ. ಮೂರನೆ ಯದು ಮನುಷ್ಯ- ದೇವರ ನಡುವಿನ ಸಂಬಂಧ. ಆದರೆ ಬಡ ಹಾಗೂ ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ನಾವು ಮನುಷ್ಯ- ಮನುಷ್ಯರ ನಡುವಿನ ಸಂಬಂಧಕ್ಕೆ ಬದಲಾಗಿ ಮನುಷ್ಯ- ದೇವರ ನಡುವಿನ ಸಂಬಂಧಕ್ಕೆ ಮೊದಲ ಆದ್ಯತೆ ನೀಡುತ್ತೇವೆ. ನಮ್ಮದೇ ಧರ್ಮ ಶ್ರೇಷ್ಠ ಅಂಥ ಹೊಡೆದಾಡಿಕೊಳ್ಳುತ್ತೇವೆ. ವಾಸ್ತವವಾಗಿ ಯಾರೇ ಆಗಲಿ ಯಾವುದೇ ಜಾತಿ ಅಥವಾ ಧರ್ಮದಲ್ಲಿ ಅರ್ಜಿ ಹಾಕಿ ಹುಟ್ಟುವುದಿಲ್ಲ. ಹ೨ಟ್ಟು ಎನ್ನುವುದು ಆಕಸ್ಮಿಕ. ಇದನ್ನು ಮೊದಲು ಅರಿತುಕೊಂಡರೆ ಯಾವುದೇ ಕೋಮುಗಲಭೆ, ಜನಾಂಗೀಯ ಕಲಹ, ಭಯೋತ್ಪಾದನೆಗೆ ಅವಕಾಶ ಸಿಗುವುದಿಲ್ಲ.
ವಿಜಯ ಕರ್ನಾಟಕದ 'ಮುಂದೆ ಸಾಗೋಣ ಮಂಗಳೂರು' ಅಭಿಯಾನದ ಅಂಗವಾಗಿ ಅ. ೨೪ರಂದು ಪ್ರಕಟವಾದ 'ಐಕ್ಯವೊಂದೇ ಮಂತ್ರ' ಪುಟ ಈ ನಿಟ್ಟಿನಲ್ಲಿ ಶ್ಲಾಘನೀಯ ಪ್ರಯತ್ನ. ಗಲಭೆ, ದೊಂಬಿ, ಭಯೋತ್ಪಾದನೆಯಿಂದ ಯಾವುದೇ ನಗರವಾಗಲಿ, ರಾಜ್ಯವಾಗಲಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ವರ್ಷಕ್ಕೆ ಒಂದು ಬಾರಿ ನಡೆಯುವ ಕೋಮುಗಲಭೆಯಿಂದ ನಾವು ಅಭಿವೃದ್ಧಿ ದೃಷ್ಟಿಯಲ್ಲಿ ಕನಿಷ್ಠ ೧೦ ವರ್ಷಗಳಷ್ಟು ಹಿಂದೆ ಹೋಗುತ್ತೇವೆ. ಸೌಹಾರ್ದ ಎನ್ನುವುದು ಮನುಷ್ಯನ ಹೃದ ಯದಿಂದ ಹುಟ್ಟುವಂತದ್ದು. ಇದು ಬೆಂಕಿ ಹಚ್ಚುವ ಗಣ್ಯರು ಶಾಂತಿ ಸಭೆಯಲ್ಲಿ ಸೌಹಾರ್ದ ಕುರಿತು ಮಾತನಾಡಿದಂತಾಗ ಬಾರದು. ಕಟ್ಟಾ ಮೂಲಭೂತವಾದಿ ಯೊಬ್ಬ ವೇದಿಕೆ ಸಿಕ್ಕಿದಾಗ ಸಾಮgಸ್ಯದ ಕುರಿತು ಭಾಷಣ ಬಿಗಿದಂತಾಗಬಾರದು. ನಮ್ಮ ದೇಶದಲ್ಲಿ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡುವ ಸಾಕಷ್ಟು ಕೋರ್ಸ್‌ಗಳು ಈಗಾಗಲೇ ಇವೆ. ಇನ್ನು ನಮಗೆ ಬೇಕಾಗಿ ರುವುದು ಏನಿದ್ದರೂ ಮಾನವೀಯತೆ ಯನ್ನು ಕಲಿಸುವ ಕೋರ್ಸ್ ಮಾತ್ರ.
- ಲತಾ ಎ. ಕಲ್ಲಡ್ಕ, ನಿರ್ದೇಶಕಿ, ಕಿನ್ನರಿ ಕಿಂಡರ್‌ಗಾರ್ಟನ್, ಕೊಂಚಾಡಿ


ಖಾಸಗಿ ಹೂಡಿಕೆ ನಡೆಯಬೇಕು
ಕಳೆದ ೧೫ ವರ್ಷಗಳಿಂದ ಈಚೆಗೆ ಖಾಸಗಿ ಬಂಡವಾಳದಾರರು ತಮ್ಮ ಹೂಡಿಕೆಯನ್ನು ಕೇವಲ ಶಿಕ್ಷಣ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಅಂದರೆ ಇಲ್ಲಿನ ಶಿಕ್ಷಣ ಒಂದು ಬೆಳೆಯುತ್ತಿರುವ ಉದ್ಯಮವಾಗುತ್ತಿದೆ. ಬಂಡವಾಳದಾರರು ತಮ್ಮ ಹೂಡಿಕೆಗೆ ಬೇಗನೆ ಲಾಭ ಬರಬೇಕೆನ್ನುವ ಉದ್ದೇಶ ದಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟುವ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ. ಆದರೆ ಇದೇ ರೀತಿಯ ಬಂಡವಾಳ ಹೂಡಿಕೆ ಪ್ರವಾಸೋದ್ಯಮ ಕ್ಷೇತ್ರದಲ್ಲೂ ನಡೆದರೇ ನಿಜಕ್ಕೂ ಟೂರಿಸಂ ಕ್ಲಿಕ್ ಆಗುವುದರಲ್ಲಿ ಡೌಟ್ ಇಲ್ಲ. ಬೆಳೆಯುತ್ತಿರುವ ಮಂಗಳೂರಿಗೆ ಜನರ ವಲಸೆ ಹೆಚ್ಚದಂತೆ ಟೂರಿಸಂ ಕೂಡ ಬೆಳೆಯಬೇಕೆನ್ನುವುದು ಒಂದು ವಾದ . ಆದರೆ ಇಂತಹ ಬೆಳವಣಿಗೆ ಆಗುತ್ತಿಲ್ಲ ಎನ್ನೋದೇ ದುರದೃಷ್ಟಕರ.
- ಮೇರಿವೇಲು, ಪತ್ರಕರ್ತರು


ನೀತಿ ನಿಯಮ ಜಾರಿಯಾಗಲಿ
ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಹೆಚ್ಚಿನ ಅವಕಾಶವಿದೆ. ಆದರೆ ಈ ಬೆಳವಣಿಗೆ ಪರಿಸರಕ್ಕೆ ಪೂರಕವಾಗಿ ನಡೆಯಬೇಕು. ಸ್ಥಳೀಯ ಜನರನ್ನು ಇದರಲ್ಲಿ ಭಾಗವಹಿ ಸುವಂತೆ ಮಾಡಬೇಕು. ಇದಕ್ಕಾಗಿ ಸರಕಾರ ಹಾಗೂ ಖಾಸಗಿ ವಲಯದಲ್ಲೂ ಸರಿಯಾದ ಚರ್ಚೆಗಳು, ಯೋಜನೆಗಳು ಕಾರ್ಯ ರೂಪಕ್ಕೆ ತರುವಂತಹ ಕೆಲಸ ನಡೆಯಬೇಕು. ಸರಕಾರದ ಕಡೆಯಿಂದ ಪ್ರವಾಸೋದ್ಯಮ ನೀತಿ- ನಿಯಮಾ ವಳಿಗಳನ್ನು ಜಾರಿಗೆ ತರುವ ಅಗತ್ಯವಿದೆ.
ಟಿ.ಎನ್. ಶ್ರೀಧರ್, ಮುಖ್ಯಸ್ಥರು, ಎಂಟಿಎ ವಿಭಾಗ


ಮಂಗಳೂರಿನ ಮುನ್ನಡೆಗೆ ಬೇಕು ದಕ್ಷ ಅಕಾರಿಗಳ ಪಡೆ
`ಮಂಗಳೂರಿನ ಮುನ್ನಡೆಗೆ ವಿಜಯಕರ್ನಾಟಕದ ನಡೆ' ಕರಾವಳಿಯ ಪತ್ರಿಕಾ ರಂಗದಲ್ಲಿ ಮಹತ್ವದ ಮೈಲಿಗಲ್ಲು . ಅವಿಭಜಿತ ದ.ಕ ಜಿಲ್ಲೆಗೆ ವಿಜಯಕರ್ನಾಟಕ ಪ್ರವೇಶಿಸಿದ ದಿನದಿಂದಲೇ ಜನಸಾಮಾನ್ಯರು ವಿಜಯಿಗಳಾಗಲು ಹಾತೊರೆದರು. ಪತ್ರಿಕೆ ಕರಾವಳಿಯ ಓದುಗರಿಗೆ ದಾರಿದೀಪ, ಮಾರ್ಗದರ್ಶಕ ಹಾಗೂ ಬಂಧುವಾಗಿ ಸಾರ್ಥಕ ದಶವರ್ಷಗಳನ್ನು ಪೂರೈಸಿದೆ. ಪತ್ರಿಕೆ ಈಗ ಆರಂಭಿಸಿರುವ `ಮುಂದೆ ಹೋಗೋಣ ಮಂಗಳೂರು' ಲೇಖನ ಮಾಲಿಕೆಯಂತೂ ಉತ್ಕೃಷ್ಟ ಹೆಜ್ಜೆ! ಈ ಯೋಜನೆಯನ್ನು ರೂಪಿಸಿ ಮುನ್ನಡೆಸಿದ ಎಲ್ಲಾ ವಿಜಯಕರ್ನಾಟಕದ ಲೇಖಕ ಮಂಡಳಿಯನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಅದರಲ್ಲೂ ನಮ್ಮತನ ಮರೆಯಬಾರದು ಎಂದು ಎಚ್ಚರಿಸುವ ಮೂಲಕ ಇದರ ನೇತೃತ್ವ ವಹಿಸಿದ ಸ್ಥಾನೀಯ ಸಂಪಾದಕರ ನುಡಿ ಅಭಿನಂದನೀಯ.
ಹಲವು ವರ್ಷಗಳಿಂದ ಹವ್ಯಾಸಿ ಬರಹಗಾರ, ರೇಡಿಯೋ ಕಲಾವಿದನಾಗಿ ನನ್ನ ಆಲೋಚನೆ - ಯೋಜನೆ- ಯೋಜನೆಗಳನ್ನು ಅಭಿವ್ಯಕ್ತಗೊಳಿಸಿದ್ದೇನೆ. ಪ್ರಸ್ತುತ ಜಿಲ್ಲೆಯ ಅದರಲ್ಲೂ ಮಂಗಳೂರಿನ ನಗರ ರಸ್ತೆ ಸಂಚಾರದ ಬಗ್ಗೆ ಸಂಶೋಧನಾ ಕಾರ್ಯದಲ್ಲಿ ಮಗ್ನನಾಗಿದ್ದೇನೆ. ನಗರ ಸಮಾಜಶಾಸ್ತ್ರದ ನಗರ ಸಾರಿಗೆ ಅದರಲ್ಲೂ ರಸ್ತೆಗಳ ವ್ಯವಸ್ಥೆ ಬಗ್ಗೆ ಎಂ.ಫಿಲ್ ಅಧ್ಯಯನಕ್ಕೆ ಆಯ್ಕೆ ಮಾಡಿದ್ದೇನೆ. ಬಹಳಷ್ಟು ವಾಸ್ತವ ಸಂಗತಿಗಳು `ಮಂಗಳೂರು ಮುನ್ನಡೆ'ಯಲ್ಲಿ ಪ್ರಕಟವಾಗಿದೆ. ಸಂತೋಷ. ಜನಪ್ರತಿನಿ ಮತ್ತು ಜನಸಾಮಾನ್ಯರಲ್ಲಿ ಪ್ರಜ್ಞೆ ಮೂಡಿಸಿ ಚಿಂತಿಸಲು ಕಾರ್ಯೋನ್ಮುಖರಾಗಲು ಪ್ರೇರಣೆ ನೀಡಿದೆ.
ಆದರೆ, ಮಂಗಳೂರಿನ ಬೆಳವಣಿಗೆ - ಅಭಿವೃದ್ಧಿ ಏಕೆ ಪಕ್ಷೀಯವಾಗಿದೆ. ದೇಹದ ಯಾವುದೇ ಒಂದು ಭಾಗ ವಿಪರೀತ ಬೆಳೆದಂತೆ ಉಂಟಾಗುವ ದುಷ್ಪರಿಣಾಮಗಳೇ ಇಂದು ಮಂಗಳೂರನ್ನು ಕಾಡುತ್ತಿವೆ. ಬೆಳವಣಿಗೆ - ಅಭಿವೃದ್ಧಿ ಒಂದೇ ಕಡೆ ಆಗಿರುವುದರಿಂದ ಹಂಪನಕಟ್ಟೆ ಯ ಸರಹದ್ದು ಮಾತ್ರ ಮಂಗಳೂರು ಆಗಿದೆ. ಇದರ ಪರಿಣಾಮಗಳ ಕೆಲವು ಸ್ಯಾಂಪಲ್‌ಗಳು ಇಲ್ಲಿವೆ:
ನನ್ನ ಗೆಳೆಯರೊಬ್ಬರು ಕೆಲವು ವರ್ಷಗಳ ಹಿಂದೆ ಕೇಂದ್ರ ತರಕಾರಿ ಮಾರುಕಟ್ಟೆಯಲ್ಲಿ ನುಗ್ಗೇಕಾಯಿಯ ಬೆಲೆ ತಿಳಿದು ಹೌಹಾರಿದರು. ಕಾರಣ ಅವರು ವಾಸಿಸುವ ಪುತ್ತೂರು ಕಡಬದಲ್ಲಿ ನುಗ್ಗೆ ಸುಮ್ಮನೆ ಬಿದ್ದು ಹಾಳಾಗಿ ಹೋಗುತ್ತದೆ. ಮಾರಾಟಗಾರರಲ್ಲಿ ಮಾತಾಡಿ ರೂಪಾಯಿ ೫೦/- ಕೆ.ಜಿ. ಒಂದಕ್ಕೆ ಪಡೆಯುವನೆಂಬ ಹುರುಪಿನಿಂದ (ಮಾರುಕಟ್ಟೆ ಬೆಲೆ ರೂಪಾಯಿ ೬೫/- ಇತ್ತು) ೨-೩ ಗೋಣಿಗಳಲ್ಲಿ ನುಗ್ಗೇಕಾಯಿ ತಂದರು. ಮಾರುಕಟ್ಟೆಯ ಎಲ್ಲಾ ಮಾರಾಟಗಾರರು ತಮ್ಮ ತಮ್ಮಲ್ಲಿ ಮಾತಾಡಿ ರೂಪಾಯಿ ೫೦/- ಬೆಲೆ ನೀಡಲು ನಿರಾಕರಿಸಿದರು. ಕೊನೆಗೆ ಸಾಗಣಿಕೆ ಖರ್ಚು ವೆಚ್ಚ ಸರಿಯಾಗಿಸಲು ಇತರರ ಸಲಹೆಯಂತೆ ಕೃಷಿ ಸಹಕಾರಿ ಕೇಂದ್ರಕ್ಕೆ ನುಗ್ಗೇಕಾಯಿ ಮಾರಿ ಶ್ರಮ, ಸಮಯ ಉಳಿಸಿಕೊಂಡರು. ಲಾಭವೇನೂ ಅವರಿಗೆ ದೊರೆಯಲಿಲ್ಲ
ಪಂಪ್‌ವೆಲ್‌ನಿಂದ ಎರಡೂವರೆ ಕಿ.ಮೀ. ದೂರವಿರುವ ಬಜಾಲ್‌ನ (ಮೂಡಾ) ಮಂಗಳೂರು ನಗರಾಭಿವೃದ್ಧಿ ಪ್ರಾಕಾರದ ಪ್ರಗತಿ ನಗರ ಬಡಾವಣೆಗೆ ಹಲವು ವರ್ಷಗಳಿಂದ ಒಂದೇ ಒಂದು ಸಿಟಿ ಬಸ್ ಓಡುತ್ತಿದೆ. ಜನಸಂಖ್ಯೆ ಏರಿದೆ. ಕೇವಲ ಎರಡೂವರೆ ಕಿ.ಮೀ ದೂರ ಕ್ರಮಿಸಲು ರಿಕ್ಷಾದವರು ಹಗಲು ಹೊತ್ತಿನಲ್ಲೇ ೫೦ ರೂಪಾಯಿ ಪೀಕಿಸುತ್ತಾರೆ. ಪ್ರಯಾಣಿಕರ ಸಂಖ್ಯೆ ವೃದ್ಧಿಸಿದ್ದರೂ ಅದಕ್ಕೆ ಅನುಗುಣ ಸಾರಿಗೆ ಇಡೀ ನಗರದ ಎಲ್ಲಾ ವಿಭಾಗಗಳಲ್ಲಿ ವ್ಯವಸ್ಥೆಯಾಗಿಲ್ಲ. ವ್ಯವಸ್ಥೆಯಾಗಿರುವುದು ಎಲ್ಲಾ ಹಂಪನಕಟ್ಟೆಯ ಸರಹದ್ದಿನ ವಿಭಾಗಗಳಲ್ಲಿ ಮಾತ್ರ.
ನೀರಿನ ವ್ಯವಸ್ಥೆ : ಇಂದಿಗೂ ಬಜಾಲ್‌ನ ಪ್ರಗತಿ ನಗರದಲ್ಲಿ ಕೊಳವೆ ಬಾವಿಯ ಕೆಸರು ನೀರು ಸರಬರಾಜು ಆಗುತ್ತಿದೆ. ನಗರದ ಇತರ ವಿಭಾಗಗಳಲ್ಲೂ ನೀರು ಪೂರೈಕೆ ಸರಿಯಾಗಿಲ್ಲ.
ಮೇಲಿನ ಮೂರು ಘಟನೆಗಳು ನಗರ ಅಭಿವೃದ್ಧಿಯ ಪಕ್ಷಿನೋಟ ನೀಡುತ್ತವೆ. ಒಟ್ಟು ೬೦ ವಾರ್ಡ್‌ಗಳ ಪೈಕಿ ಬಹುತೇಕ ವಾರ್ಡ್‌ಗಳು ಮಹಾನಗರಪಾಲಿಕೆ ಆಡಳಿತ ವ್ಯವಸ್ಥೆ ಬಂದ ಬಳಿಕ ನಿರೀಕ್ಷಿತ ಅಭಿವೃದ್ಧಿ ಸಾಸಿಲ್ಲ. ಯೋಜನೆ ಅಭಿವೃದ್ಧಿಯ ಬಗ್ಗೆ ಬಹಳಷ್ಟು ಕಾರ್ಯಗಳು ನಗರ ಕೇಂದ್ರಕ್ಕೆ ಸೀಮಿತವಾಗಿದೆ. ಹಂಪನಕಟ್ಟೆಯಿಂದ ೪-೫ ಕಿ.ಮೀ. ದೂರವಿರುವ ವಿಭಾಗದಲ್ಲಿ ಬೆಳೆಯುವ ತರಕಾರಿ ಉತ್ತಮ ಬೆಲೆ ಪಡೆಯಬೇಕಾದರೆ ಹಂಪನಕಟ್ಟೆಗೆ ಬರಬೇಕು.
ನಗರ ಯೋಜನೆ ಕ್ರಮಬದ್ಧವಾಗಿರದೆ ಹಲವು ಸಮಸ್ಯೆಗಳು ತಾಂಡವವಾಡುತ್ತಿವೆ. ನಗರ ಕೇಂದ್ರದಲ್ಲಿರುವ ಒತ್ತಡದ ಸಮೂಹಗಳು (Pಛಿooಛಿ ಎಟ್ಠmo) ಯೋಜನಾ - ಆಡಳಿತದ ಮೇಲೆ ಪ್ರಭಾವ ಬೀರಿ ಸ್ವಂತ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುತ್ತ್ತವೆ. ಪ್ರಸ್ತುತ ಬೆಳೆಯುತ್ತಿರುವ ಮಂಗಳೂರು ಹಲವು ಮಂದಿಯನ್ನು ತನ್ನೆಡೆಗೆ ಸೆಳೆದಿದೆ. ಈ ಹಿಂದೆ ಇದ್ದ ಏಕಸ್ವಾಮ್ಯದ ಮಾರುಕಟ್ಟೆ ನಿಧಾನಗತಿಯಲ್ಲಿ ಬದಲಾಗುತ್ತಿದೆ. ಆದರೆ ಇದರಿಂದಾಗಿ ಮಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಯಾಗುವುದಿಲ್ಲ. ನಗರ ಕೇಂದ್ರದ ಸುತ್ತ ಎಲ್ಲರೂ ಗಿರಕಿ ಹೊಡೆಯುತ್ತಿರುವುದರಿಂದ ಇಲ್ಲಿನ ಭೂಮಿ, ಸೇವೆ, ಮನೆ, ಕಚೇರಿ ಇತ್ಯಾದಿ ಇತ್ಯಾದಿ ದುಬಾರಿಯಾಗಿದೆ.
ಕಾರಿಡಾರ್ ಯೋಜನೆ, ಸ್ಕೈಬಸ್ ಮೊದಲಾದ ಆಕರ್ಷಕ ಕಾರ್ಯಕ್ರಮಗಳು ಅರ್ಥಪೂರ್ಣವಾಗಿ ಮಹತ್ವ ಪಡೆಯಬೇಕಾದರೆ ಮಂಗಳೂರಿನ ಸಮಗ್ರ ಅಭಿವೃದ್ಧಿಯಾಗಬೇಕು. ಅಕ್ಷಯಮಯವಾಗಬೇಕಾದ ಪ್ರಾಕೃತಿಕ, ಆರ್ಥಿಕ ಹಾಗೂ ಮಾನವ ಸಂಪನ್ಮೂಲಗಳು ಕೇವಲ ಕೆಲವು ಯೋಜನೆಗಳಿಂದ ಮಾತ್ರ ಸಾಧ್ಯವಾಗುವುದಿಲ್ಲ. ಸಮಗ್ರ ಅಂಶಗಳು ಅಥವಾ ಕ್ಷೇತ್ರಗಳನ್ನು ಒಗ್ಗೂಡಿಸಿ ಅಭಿವೃದ್ಧಿಯಾಗಬೇಕು.
ನೀರು, ರಸ್ತೆ, ಕೈಗಾರಿಕೆ, ಪ್ರವಾಸ ಉದ್ಯಮ, ಕಲೆ- ಸಂಸ್ಕೃತಿ ಇತ್ಯಾದಿ ಕ್ಷೇತ್ರಗಳು ಬಿಡಿಬಿಡಿಯಾಗಿ ಅಭಿವೃದ್ಧಿ ಸಾಸಲು ಸಾಧ್ಯವಿಲ್ಲ. ಒಂದಕ್ಕೊಂದು ಸಂಬಂಧವಿರುವ ಎಲ್ಲ ಕ್ಷೇತ್ರಗಳ ಸಮೃದ್ಧಿ ಯಾಗಬೇಕು. ನಮ್ಮಲ್ಲಿರುವ ಪ್ರಾಕೃತಿಕ ಸಂಪನ್ಮೂಲ ಉಳಿಸುವ - ಬೆಳೆಸುವ, ಆರ್ಥಿಕ ಸಂಪನ್ಮೂಲ ಆಕರ್ಷಿಸುವ ಮತ್ತು ಮಾನವ ಸಂಪನ್ಮೂಲ ತೊಡಗಿಸಿಕೊಳ್ಳುವ ಬಗ್ಗೆ ಎಲ್ಲರಲ್ಲೂ ಕಳಕಳಿಯಿದ್ದಲ್ಲಿ ನಮ್ಮ ಕರಾವಳಿ ಜಪಾನ್ ಮಾದರಿಯ ಅಭಿವೃದ್ಧಿ ಸಾಸಲು ಸಾಧ್ಯವಿದೆ.
ಕಾಲಮಿತಿಯ ಯೋಜನಾಬದ್ಧ ಕಾರ್ಯಗಳು ಜಾರಿಗೆ ಬರುವಂತೆ ಪ್ರಾಮಾಣಿಕ ಪ್ರಯತ್ನಗಳಾಗಬೇಕು. ಅಭಿವೃದ್ಧಿ ಮೂಲಕ ಸಮೃದ್ಧಿ ಸಾಸಿ ಇಂದು - ನಾಳೆಯ ಜನಾಂಗಗಳಿಗೆ ನೆರವಾಗುವ - ಆಧಾರವಾಗುವ ಕೆಲಸಗಳು ಆಗಬೇಕಾಗಿದೆ. ಉದಾಹರಣೆಗೆ ಬ್ರಿಟಿಷರು ಈ ದೇಶವನ್ನು ಕೊಳ್ಳೆ ಹೊಡೆದರು. ಪ್ರಾಕೃತಿಕ ಸಂಪತ್ತನ್ನು ದೋಚಿದರು. ಆದರೆ ಅವರು ಸಮೃದ್ಧಿ (ವೈಯಕ್ತಿಕ) ಒಳ್ಳೆಯ ಕಟ್ಟಡ, ರಸ್ತೆ, ಸೇತುವೆ ಇತ್ಯಾದಿ ಕಟ್ಟಿದರು. ಅವು ಇಂದಿಗೂ ನಮ್ಮನ್ನು ಅಣಕಿಸುತ್ತವೆ. ಅವರಲ್ಲಿ ದೂರದೃಷ್ಟಿಯಿತ್ತು. ನಮ್ಮಲ್ಲಿ...?
- ವಾಸುದೇವ ಕಾಮತ್ ಕೆ.


ರಸ್ತೆ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಹಾಕರ್ಸ್ ಝೋನ್
`ಮುಂದೆ ಹೋಗೋಣ ಮಂಗಳೂರು' ಲೇಖನ ಮಾಲಿಕೆ ಅತಿ ಶ್ಲಾಘನೀಯ. ಇವೆಲ್ಲವೂ ಕಾರ್ಯಗತವಾಗಬೇಕಾದರೆ ಕೇಂದ್ರ, ರಾಜ್ಯ, ಮತ್ತು ಸ್ಥಳೀಯ ಸರಕಾರಗಳು, ಅವರೊಂದಿಗೆ ಊರ ಜನರು ಮುಂದೆ ಬಂದರೆ ಮಾತ್ರ ಸಾಧ್ಯ. ಯಾವುದೇ ನಗರದ ಅಭಿವೃದ್ಧಿಯನ ಅಳೆಯುವುದು ಅಲ್ಲಿನ ರಸ್ತೆಗಳ ಗುಣಮಟ್ಟ ಮತ್ತು ಪ್ರಮಾಣತೆಯನ್ನು ನೋಡಿ. ಮಾರ್ಗಗಳು ಎಷ್ಟೇ ಉತ್ತಮವಿದ್ದರೂ ಅವು ಬೀದಿ ಬದಿ (eZಡಿhಛ್ಟಿo) ವ್ಯಾಪಾರಿಗಳಿಂದ ತುಂಬಿದ್ದು, ಪಾದಚಾರಿಗಳಿಗೆ, ವಾಹನಮಾಲಿಕರಿಗೆ ಉಪದ್ರವಗಳನ್ನು ನೀಡುವುದಾದರೆ ಅಂತಹ ನಗರಗಳ ಗುಣಮಾಪನೆ ಅನವಶ್ಯಕ. ಅಂತಹ ನಗರಗಳು ಅಭಿವೃದ್ದಿ ಹೊಂದಲು ಸಾಧ್ಯವೇ ಇಲ್ಲ. ಮುಂಬಯಿ ನಗರ ಅಂತಹ ಬೀದಿ ಬದಿಗಳಿಂದ ಮುಕ್ತರಾಗಬೇಕಾದರೆ ೫೦ ವರ್ಷಗಳು ಬೇಕಾಯಿತು. ಮಂಗಳೂರು ನಗರಾಕಾರಿಗಳು ರಾಜಕೀಯ, ಮತ್ತಿತರ ಜಾತಿ ಧರ್ಮಗಳ ಒತ್ತಡಕ್ಕೆ ಮಣಿದು ಬೀದಿಬದಿ ವ್ಯಾಪಾರಿಗಳನ್ನು ಖಾಲಿ ಮಾಡಲು ಮೀನ ಮೇಷ ಎಣಿಸುತ್ತಿದ್ದಾರೆ. ಮುಖ್ಯ ರಸ್ತೆಗಳು ಈ ವ್ಯಾಪಾರಿಗಳಿಂದ ಮುಕ್ತವಾಗಲೇಬೇಕು. ಸರಕಾರ ಮತ್ತು ಇತರ ನಾಗರಿಕ ಸಂಸ್ಥೆಗಳು ಈಗಿನಿಂದಲೇ ಒತ್ತಡವನ್ನು ತರದಿದ್ದರೆ ವಾಹನಗಳು ಚಲಿಸಲು ಸಾಧ್ಯವೇ ಇಲ್ಲ. ಪಾದಚಾರಿಗಳಿಗಂತೂ ನಡಿಗೆ ಬಲುಕಷ್ಟ.
ಅಂತಹ ವ್ಯಾಪಾರಿಗಳಿಗಾಗಿ, ಸರಕಾರ ಖಾಲಿ ಜಾಗವನ್ನು ನಿಗದಿ ಮಾಡಿ ಅಲ್ಲಿ ಅವರನ್ನು ಸ್ಥಳಾಂತರಿಸುವುದು ಉಚಿತ. ಅಂತಹ ಸ್ಥಳಗಳನ್ನು (eZಡಿhಛ್ಟಿo ಟ್ಞಛಿ) ನಗರದ ನಾನಾ ಕಡೆಗಳಲ್ಲಿ ಸ್ಥಾಪಿಸಿದರೆ, ಸಾಮಾನ್ಯ ಜರಿಗೆ, ವಾಹನ ಮಾಲಿಕರಿಗೆ ಮಾತ್ರ ಸಹಾಯವಾಗುವುದಲ್ಲದೆ ನಗರದ ಸೌಂದರ್ಯವನ್ನೂ ಹೆಚ್ಚಿಸಬಹುದು. ಮುಖ್ಯವಾಗಿ ಅಂತಹ ಬೀದಿಬದಿ ವ್ಯಾಪಾರಿಗಳನ್ನು ಗೌರವದಿಂದ ಸ್ಥಳಾಂತರಿಸಿದಂತಾಗುವುದು. ಎರಡನೆಯದಾಗಿ, ಸ್ಥಳಾಂತರಗೊಳಿಸಿದ ಆ ಸ್ಥಳಗಳಲ್ಲಿ, ಬೀದಿ ಬದಿ ವ್ಯಾಪಾರಿಗಳ ಮೇಲೆ ತೆರಿಗೆಯನ್ನೂ ಹೇರಿಸುವುದರಿಂದ ಖಜಾನೆಗೂ ಲಾಭವಿದೆ.
ರವೀಂದ್ರ ಕಾಸರಗೋಡು, ಕ್ಯಾಪ್ಟನ್, (ನಿವೃತ್ತ )ಅಶೋಕನಗರ ಮಂಗಳೂರು.

ಪತ್ರಿಕೆಯ ನಡೆ ಸ್ಪೂರ್ತಿಯಾಗಲಿ

`ಮುಂದೆ ಹೋಗೋಣ ಮಂಗಳೂರು' ಆಕರ್ಷಕ ಅಂಕಣದ ಮೂಲಕ ಮಂಗಳೂರು ಮಹಾನಗರದ ಸಮಗ್ರ ಅಭಿವೃದ್ಧಿಗೆ ಆಡಳಿತ ವರ್ಗವನ್ನು ಮತ್ತು ಜನತೆಯನ್ನು ಸಜ್ಜುಗೊಳಿಸುವ ವಿಜಯಕರ್ನಾಟಕದ ಬಗ್ಗೆ ಮೆಚ್ಚುಗೆಯುಂಟಾಯಿತು. ಪತ್ರಿಕೆಯೆಂಬುದು ಜನರ ಧ್ವನಿ. ಜನರನ್ನೂ ಸೇರಿಸಿಕೊಂಡು ವಿಜಯಕರ್ನಾಟಕ ನಡೆಸುತ್ತಿರುವ ಇಂತಹ ಅಭಿವೃದ್ಧಿಪರ ಅಭಿಯಾನಗಳು ಖಂಡಿತ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಪತ್ರಿಕೆ ಹಾಗೂ ಓದುಗರೊಂದಿಗೆ ಒಂದು ವಿಶೇಷ ಸಂಬಂದ ಸೃಷ್ಟಿಯಾಗಲೂ ಈ ಹೊಸ ಅಭಿಯಾನ ಪ್ರೇರಣೆಯಾಗಬಹುದು. ದಿನೇ ದಿನೇ ಅಭಿವೃದ್ಧಿಯ ಉನ್ನತ ಶಿಖರದತ್ತ ನೆಗೆಯುತ್ತಿರುವ ಮಂಗಳೂರು ನಗರವನ್ನು ಸಂಪೂರ್ಣ ಶುಚಿಯಾಗಿಡುವ ಮೂಲಕ ಸ್ವಚ್ಛ ನಗರವನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತಕ್ಕೆ ವಿಜಯಕರ್ನಾಟಕದ ನಡೆ ಸೂರ್ತಿಯಾದರೆ ಇದರ ಹಿಂದಿರುವ ಪತ್ರಿಕಾ ಮಂಡಳಿಯ ಶ್ರಮ ಸಾರ್ಥಕ. ವಿಜಯ ಕರ್ನಾಟಕದ ಹೊಸ ಅಭಿಯಾನದೊಂದಿಗೆ ಓದುಗರಾದ ನಾವೂ ಕೈಜೋಡಿಸೋಣ.
ಕೆ. ಎ. ಅಬ್ದುಲ್ ಅಝೀಝ್ ಝಹ್‌ರಿ, ಪುಣಚ.
ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಝಹ್‌ರೀಸ್ ಅಸೋಸಿಯೇಶನ್.

ಬೆಂಗಳೂರಿಗೆ ನೇರ ರೈಲು, ಕೊಣಾಜೆಗೆ ನೇರ ರಸ್ತೆ ಬೇಕು
ಮಂಗಳೂರು ಕರ್ನಾಟಕದ ವಾಣಿಜ್ಯ ನಗರವಾಗಿದ್ದು, ಇದನ್ನು ರಾಜ್ಯದ ಪಶ್ಚಿಮ ಹೆಬ್ಬಾಗಿಲು ಎನ್ನಬಹುದು.ದೇಶದ ಪ್ರಮುಖ ನಗರಗಳು ಹಾಗೂ ಹೊರದೇಶಗಳಿಗೆ ಇಲ್ಲಿಂದ ನಿತ್ಯ ನೇರ ವಿಮಾನಯಾನವಿದೆ. ಮಂಗಳೂರು ಬೆಳೆಯುತ್ತಿರುವ ಬಂದರು. ಇದರ ಬೆಳವಣಿಗೆ ನಾಗಾಲೋಟ. ಇಲ್ಲಿಂದ ೮೮೦ ಕಿ.ಮೀ ದೂರದ ತಮಿಳುನಾಡಿನ ರಾಜಧಾನಿ ಚೆನ್ನೈಗೆ, ೬೬೦ ಕಿ.ಮೀ ದೂರದ ಕೇರಳದ ರಾಜಧಾನಿ ತಿರುವನಂತಪುರಕ್ಕೆ ನೇರ ರೈಲುಗಳು ಓಡುತ್ತವೆ. ಹಾಗೆಯೇ ಮಹಾರಾಷ್ಟ್ರ ರಾಧಾನಿ ಮುಂಬಯಿ ಮತ್ತು ಗೋವಾದ ಮಡಗಾಂವ್‌ಗೂ ನೇರ ರೈಲುಯಾನಗಳಿವೆ.
ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಇಲ್ಲಿಂದ ನೇರ ರೈಲು ಸಂಪರ್ಕವಿಲ್ಲದಿರುವುದು ವಿಪರ್ಯಾಸ. ಇರುವ ಒಂದು ರೈಲು ಹಾಸನ-ಮೈಸೂರಿಗಾಗಿ ಸುತ್ತಿಬಳಸಿ ಬೆಂಗಳೂರು ತಲುಪುತ್ತದೆ. ಈ ದಾರಿಯ ಪ್ರಯಾಣದ ವೆಚ್ಚವೂ ಹೆಚ್ಚು. ಸಮಯವೂ ಜಾಸ್ತಿ. ಬದಲಾಗಿ ಒಂದು ರೈಲು ಅರಸೀಕೆರೆ ಮಾರ್ಗವಾಗಿ ಬೆಂಗಳೂರಿಗೆ ಓಡಿಸಿದರೆ ಹೆಚ್ಚು ಅನುಕೂಲ. ಪ್ರಯಾಣದ ಸಮಯವೂ ಕಡಿಮೆ, ವೆಚ್ಚವೂ ಕಡಿಮೆ. ಅಲ್ಲದೆ ಈ ಮಾರ್ಗ ಬೆಂಗಳೂರು ಮತ್ತು ಹುಬ್ಬಳ್ಳಿ ಕಡೆಗೆ ಪ್ರಯಾಣಿಸುವವರಿಗೆ ತುಂಬಾ ಅನುಕೂಲ. ಆ ಕಡೆಯ ಉತ್ಪನ್ನಗಳಿಗೆ ಮಂಗಳೂರು ಒಂದು ಮಾರುಕಟ್ಟೆ ಮಾತ್ರವಲ್ಲ, ಬಂದರು ಮೂಲಕ ಸಾಗಾಣಿಕೆಗೆ ರಹದಾರಿ. ಹೀಗಾಗಿ ಮಂಗಳೂರು-ಬೆಂಗಳೂರು ನಡುವೆ ಇನ್ನೂ ಹೆಚ್ಚು ರೈಲುಗಳ ಓಡಾಟಕ್ಕೆ ಸಂಬಂಧಪಟ್ಟ ಅಕಾರವುಳ್ಳವರು ಪ್ರಯತ್ನಿಸಬೇಕು.
ಮಂಗಳೂರು ವಿಶ್ವವಿದ್ಯಾಲಯ ನಗರದಿಂದ ದೂರದಲ್ಲಿದೆ. ಈ ದೂರವನ್ನು ಕಡಿಮೆ ಮಾಡಲು ಅಡ್ಯಾರ್‌ನಲ್ಲಿ ನೇತ್ರಾವತಿಗೆ ಒಂದು ಸೇತುವೆ ನಿರ್ಮಾಣವಾಗಬೇಕು. ಇದರಿಂದ ಈ ದೂರ ಅರ್ಧದಷ್ಟು ಕಡಿಮೆಯಾಗುತ್ತದೆ. ಅಲ್ಲದೆ ಯುನಿವರ್ಸಿಟಿಯ ಸುತ್ತಮುತ್ತ ಇರುವ ಮೆಡಿಕಲ್, ಎಂಜಿನಿಯರಿಂಗ್, ದಂತವೈದ್ಯ ಕಾಲೇಜುಗಳು ಮಂಗಳೂರಿಗೆ ಹತ್ತಿರವಾಗುತ್ತವೆ. ಕೊಣಾಜೆಯಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ ಕೇಂದ್ರವೂ ಹತ್ತಿರವಾಗುತ್ತದೆ. ಮುಂದೆ ಮಂಗಳೂರಿನ ಕೆಲವು ವರ್ಗದ ಜನರು ವಸತಿಗಾಗಿ ಈ ಪ್ರದೇಶಕ್ಕೆ ಬರಬಹುದು.

-ಬಿ. ಬಾಬು
ಪಿಂಚಣಿದಾರ
ಶಿವಪೇಟೆ, ಪುತ್ತೂರು.