ನಾವು ವಿಶ್ವ ಮಾನವರಾಗೋಣ. ರಾಷ್ಟ್ರ ಪ್ರೇಮಿಗಳಾಗುವುದರೊಂದಿಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನಕ್ಕೆ ಹೋರಾಡೋಣ. ಆದರೆ,ಭಾರತದ ಮುಖ್ಯ ಭಾಷೆಗಳಲ್ಲಿ ಒಂದಾದ ತುಳುನಾಡ ಭಾಷೆಯಾದ ತುಳುವನ್ನು ಪ್ರಾಥಮಿಕ ಹಂತದಲ್ಲಿಯಾದರೂ ಕನ್ನಡ ಅಕ್ಷರದಲ್ಲಿ ಬರೆಯಲು, ತಮಿಳು, ಮಲೆಯಾಳಂ, ಮರಾಟಿ, ಕೊಂಕಣಿ ಮೊದಲಾದ ಭಾಷೆಗಳಂತೆ ಪ್ರತಿಭಾ
ಕಾರಂಜಿಯಲ್ಲಿ ರ್ಸ್ಪಸಲು, ಇಂಗ್ಲಿಷ್, ಹಿಂದಿ, ಸಂಸ್ಕೃತ ಭಾಷೆಗಳಂತೆ ಸಂವಹನದಲ್ಲಿ ಮಾತುಕತೆಯಾಡಲು, ಭಾಷಣ ಮಾಡಲು ತುಳು ನಾಡಿನಲ್ಲಾದರೂ ಶಾಲೆ ಕಾಲೇಜುಗಳವರು ಅನುವು ಮಾಡಿಕೊಡುವುದು ಭಾಷೆಗಳ ಅಭಿವೃದ್ಧಿಗೆ, ಸಾಂಸ್ಕೃತಿಕ ಸಮನ್ವಯ ಬೆಳವಣಿಗೆಗೆ, ಜಾಗತೀಕರಣದ ಈ ಸಂದರ್ಭದಲ್ಲಿ ಮಂಗಳೂರು ಎಲ್ಲ ರೀತಿಯಲ್ಲಿ ಮುಂದುವರಿಯಲು ಖಂಡಿತ ಸಹಾಯವಾಗುತ್ತದೆ.
ತುಳು/ಕನ್ನಡ ಭಾಷೆಗಳಲ್ಲಿ ಯಕ್ಷಗಾನ ರಾಷ್ಟ್ರೀಯ ನೃತ್ಯ ಪ್ರಕಾರವಾಗಿ, ಕಥಕ್ಕಳಿ, ಕೂಚುಪುಡಿ ನಾಟ್ಯ ಪ್ರಕಾರಗಳಂತೆ ಮಾನ್ಯತೆ ಪಡೆಯುವುದಕ್ಕೆ, ಅರ್ಹತೆ ಪಡೆಯುವುದಕ್ಕೆ ನಮ್ಮ ಮುಂದಾಳುಗಳಲ್ಲಿ ಇಚ್ಛಾ ಶಕ್ತಿ ಕೂಡಿಬರಲೆಂದು ನಮ್ಮ ಹಾರೈಕೆ. ತುಳು ಅಕಾಡೆಮಿ, ತುಳು ಪೀಠ, ತುಳು ಕೂಟಗಳು, ಸಾಮಾಜಿಕ ಒಕ್ಕೂಟಗಳು, ತಾಯ್ ನುಡಿಗೆ ದುಡಿದು ಮಡಿ ಎಂದು ಕುವೆಂಪು ಅವರು ಹಾಡಿದುದನ್ನು, ಆಡಿದುದನ್ನು ನಾವು ತುಳುನಾಡು ನುಡಿಯ ಕುರಿತು ಮಾಡುವ ಸಂಕಲ್ಪ ಕೈಗೊಂಡರೆ ಅದು ನಮ್ಮ ಗುರಿ. ಅದಕ್ಕೊಬ್ಬ ಗುರು ನಮ್ಮ ಮಾರ್ಗದರ್ಶಿಯಾಗಬೇಕು ಎನ್ನುವುದು ನಮ್ಮ ಆಶಯ.
- ಕುದ್ಕಾಡಿ ವಿಶ್ವನಾಥ ರೈ, ವಿಶ್ವಕಲಾನಿಕೇತನ ಪುತ್ತೂರು
ಪತ್ರಿಕೆಯ ನಡೆ
ಸೂರ್ತಿಯಾಗಲಿ
`ಮುಂದೆ ಹೋಗೋಣ ಮಂಗಳೂರು' ಆಕರ್ಷಕ ಅಂಕಣದ ಮೂಲಕ ಮಂಗಳೂರು ಮಹಾನಗರದ ಸಮಗ್ರ ಅಭಿವೃದ್ಧಿಗೆ ಆಡಳಿತ ವರ್ಗವನ್ನು ಮತ್ತು ಜನತೆಯನ್ನು ಸಜ್ಜುಗೊಳಿಸುವ ವಿಜಯಕರ್ನಾಟಕದ ಬಗ್ಗೆ ಮೆಚ್ಚುಗೆಯುಂಟಾಯಿತು. ಪತ್ರಿಕೆಯೆಂಬುದು ಜನರ ಧ್ವನಿ. ಜನರನ್ನೂ ಸೇರಿಸಿಕೊಂಡು ವಿಜಯಕರ್ನಾಟಕ ನಡೆಸುತ್ತಿರುವ ಇಂತಹ ಅಭಿವೃದ್ಧಿಪರ ಅಭಿಯಾನಗಳು ಖಂಡಿತ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಪತ್ರಿಕೆ ಹಾಗೂ ಓದುಗರೊಂದಿಗೆ ಒಂದು ವಿಶೇಷ ಸಂಬಂಧ ಸೃಷ್ಟಿಯಾಗಲೂ ಈ ಹೊಸ ಅಭಿಯಾನ ಪ್ರೇರಣೆಯಾಗಬಹುದು. ದಿನೇ ದಿನೇ ಅಭಿವೃದ್ಧಿಯ ಉನ್ನತ ಶಿಖರದತ್ತ ನೆಗೆಯುತ್ತಿರುವ ಮಂಗಳೂರು ನಗರವನ್ನು ಸಂಪೂರ್ಣ ಶುಚಿಯಾಗಿಡುವ ಮೂಲಕ ಸ್ವಚ್ಛ ನಗರವನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತಕ್ಕೆ ವಿಜಯಕರ್ನಾಟಕದ ನಡೆ ಸೂರ್ತಿಯಾದರೆ ಇದರ ಹಿಂದಿರುವ ಪತ್ರಿಕಾ ಮಂಡಳಿಯ ಶ್ರಮ ಸಾರ್ಥಕ. ವಿಜಯ ಕರ್ನಾಟಕದ ಹೊಸ ಅಭಿಯಾನದೊಂದಿಗೆ ಓದುಗರಾದ ನಾವೂ ಕೈಜೋಡಿಸೋಣ.
ಕೆ. ಎ. ಅಬ್ದುಲ್ ಅಝೀಝ್ ಝಹ್‌ರಿ, ಪುಣಚ
ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಝಹ್‌ರೀಸ್ ಅಸೋಸಿಯೇಶನ್.
ಬೆಂಗಳೂರಿಗೆ ನೇರ ರೈಲು, ಕೊಣಾಜೆಗೆ ನೇರ ರಸ್ತೆ ಬೇಕು
ಮಂಗಳೂರು ಕರ್ನಾಟಕದ ವಾಣಿಜ್ಯ ನಗರವಾಗಿದ್ದು, ಇದನ್ನು ರಾಜ್ಯದ ಪಶ್ಚಿಮ ಹೆಬ್ಬಾಗಿಲು ಎನ್ನಬಹುದು.ದೇಶದ ಪ್ರಮುಖ ನಗರಗಳು ಹಾಗೂ ಹೊರದೇಶಗಳಿಗೆ ಇಲ್ಲಿಂದ ನಿತ್ಯ ನೇರ ವಿಮಾನಯಾನವಿದೆ. ಮಂಗಳೂರು ಬೆಳೆಯುತ್ತಿರುವ ಬಂದರು. ಇದರ ಬೆಳವಣಿಗೆ ನಾಗಾಲೋಟ. ಇಲ್ಲಿಂದ ೮೮೦ ಕಿ.ಮೀ ದೂರದ ತಮಿಳುನಾಡಿನ ರಾಜಧಾನಿ ಚೆನ್ನೈಗೆ, ೬೬೦ ಕಿ.ಮೀ ದೂರದ ಕೇರಳದ ರಾಜಧಾನಿ ತಿರುವನಂತಪುರಕ್ಕೆ ನೇರ ರೈಲುಗಳು ಓಡುತ್ತವೆ. ಹಾಗೆಯೇ ಮಹಾರಾಷ್ಟ್ರ ರಾಧಾನಿ ಮುಂಬಯಿ ಮತ್ತು ಗೋವಾದ ಮಡಗಾಂವ್‌ಗೂ ನೇರ ರೈಲುಯಾನಗಳಿವೆ.
ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಇಲ್ಲಿಂದ ನೇರ ರೈಲು ಸಂಪರ್ಕವಿಲ್ಲದಿರುವುದು ವಿಪರ್ಯಾಸ. ಇರುವ ಒಂದು ರೈಲು ಹಾಸನ-ಮೈಸೂರಿಗಾಗಿ ಸುತ್ತಿಬಳಸಿ ಬೆಂಗಳೂರು ತಲುಪುತ್ತದೆ. ಈ ದಾರಿಯ ಪ್ರಯಾಣದ ವೆಚ್ಚವೂ ಹೆಚ್ಚು. ಸಮಯವೂ ಜಾಸ್ತಿ. ಬದಲಾಗಿ ಒಂದು ರೈಲು ಅರಸೀಕೆರೆ ಮಾರ್ಗವಾಗಿ ಬೆಂಗಳೂರಿಗೆ ಓಡಿಸಿದರೆ ಹೆಚ್ಚು ಅನುಕೂಲ. ಪ್ರಯಾಣದ ಸಮಯವೂ ಕಡಿಮೆ, ವೆಚ್ಚವೂ ಕಡಿಮೆ. ಅಲ್ಲದೆ ಈ ಮಾರ್ಗ ಬೆಂಗಳೂರು ಮತ್ತು ಹುಬ್ಬಳ್ಳಿ ಕಡೆಗೆ ಪ್ರಯಾಣಿಸುವವರಿಗೆ ತುಂಬಾ ಅನುಕೂಲ. ಆ ಕಡೆಯ ಉತ್ಪನ್ನಗಳಿಗೆ ಮಂಗಳೂರು ಒಂದು ಮಾರುಕಟ್ಟೆ ಮಾತ್ರವಲ್ಲ, ಬಂದರು ಮೂಲಕ ಸಾಗಾಣಿಕೆಗೆ ರಹದಾರಿ. ಹೀಗಾಗಿ ಮಂಗಳೂರು-ಬೆಂಗಳೂರು ನಡುವೆ ಇನ್ನೂ ಹೆಚ್ಚು ರೈಲುಗಳ ಓಡಾಟಕ್ಕೆ ಸಂಬಂಧಪಟ್ಟ ಅಕಾರವುಳ್ಳವರು ಪ್ರಯತ್ನಿಸಬೇಕು.
ಮಂಗಳೂರು ವಿಶ್ವವಿದ್ಯಾಲಯ ನಗರದಿಂದ ದೂರದಲ್ಲಿದೆ. ಈ ದೂರವನ್ನು ಕಡಿಮೆ ಮಾಡಲು ಅಡ್ಯಾರ್‌ನಲ್ಲಿ ನೇತ್ರಾವತಿಗೆ ಒಂದು ಸೇತುವೆ ನಿರ್ಮಾಣವಾಗಬೇಕು. ಇದರಿಂದ ಈ ದೂರ ಅರ್ಧದಷ್ಟು ಕಡಿಮೆಯಾಗುತ್ತದೆ. ಅಲ್ಲದೆ ಯುನಿವರ್ಸಿಟಿಯ ಸುತ್ತಮುತ್ತ ಇರುವ ಮೆಡಿಕಲ್, ಎಂಜಿನಿಯರಿಂಗ್, ದಂತವೈದ್ಯ ಕಾಲೇಜುಗಳು ಮಂಗಳೂರಿಗೆ ಹತ್ತಿರವಾಗುತ್ತವೆ. ಕೊಣಾಜೆಯಲ್ಲಿರುವ ಕೇಂದ್ರ ಮೀಸಲು ಪೊಲೀಸ್ ಪಡೆ ಕೇಂದ್ರವೂ ಹತ್ತಿರವಾಗುತ್ತದೆ. ಮುಂದೆ ಮಂಗಳೂರಿನ ಕೆಲವು ವರ್ಗದ ಜನರು ವಸತಿಗಾಗಿ ಈ ಪ್ರದೇಶಕ್ಕೆ ಬರಬಹುದು.
-ಬಿ. ಬಾಬು
ಪಿಂಚಣಿದಾರ
ಶಿವಪೇಟೆ, ಪುತ್ತೂರು.
ದಿಟ್ಟ ಹೆಜ್ಜೆ
ಮಂಗಳೂರು ಅಭಿವೃದ್ಧಿಯ ಹೊಸ ಹರಿಕಾರ
ಮುಂದೆ ಹೋಗೋಣ ಮಂಗಳೂರಿನ ಓ ಓಲೆಗಾರ
ಮುನ್ನಡೆಗೆ ಮುನ್ನುಡಿಯ ಬರೆದ ಬರಹಗಾರ
ಐಟಿ ಬಿಟಿ ಹೈಟೆಕ್ ಸಿಟಿಗಳ ಬಗ್ಗೆ ಆ ವಿವರ
ವಾಣಿಜ್ಯ-ವ್ಯಾಪಾರ ಹೋಟೆಲ್‌ಗಳು ಸುಂದರ
ಸುಜಲಾಂ-ಸುಫಲಾಂ ಸಸ್ಯ ಶ್ಯಾಮಲಾಂ ಪರಿಸರ
ಆರೋಗ್ಯ-ಶಿಕ್ಷಣ-ಬಡವರ ಆಶಾಕಿರಣದ ಸರಕಾರ
ಮಾಂಸೋದ್ಯಮ, ಮತ್ಸ್ಯೋದ್ಯಮ, ಪ್ರವಾಸೋದ್ಯಮ ಬಂದರ
ರಾತ್ರಾಸ್ಥಳ-ಚಾರಣಗಳು-ಜಲಪಾತವು ಪ್ರವಾಸಿಗರ
ಮನ ಸೆಳೆಯುವ ಬಳಿ ಕತೆಯುವ ತಾಣ ಈ ಕಡಲ ತೀರ
ಜನಮನದಲಿ ಸಾಮರಸ್ಯದ ಹಣತೆ ಬೆಳಗಿ ಎಲ್ಲರ
ಸಂಸ್ಕಾರ ಸಂಸ್ಕೃತಿಯ ಬೆಳೆಸೋ ಈ ಮಣ್ಣಿನ ವಿವರ
ತಟ್ಟಿಹುದು ಮುಟ್ಟಿಹುದು ಪತ್ರಿಕೆಯು ಜನರ
ಜಾತಿ ಬೇಧ, ಪಕ್ಷ ಬೇಧ ಮರೆತು ಹೋರಾಡುವವರ
ಮುಂದೆ ಹೋಗೋಣ ಲೇಖನ ನೀಡಲು ಸಹಕಾರ
ಅಭಿವೃದ್ಧಿ ಆದುದನು ಬರೆದು ಹೊಗಳೋ ಅಕಾರ
ಅಭಿವೃದ್ಧಿಯಲಿ ಉಳಿದಿಹುದ ತಿಳಿಸಿ ಹೇಳೋ ಮಮಕಾರ
ಪತ್ರಿಕೆಯ `ದಿಟ್ಟ ಹೆಜ್ಜೆ' ಗುರುತಿಸಲು ಕಾತರ
ಅಭಿಮಾನದಿ ಅಭಿವೃದ್ಧಿಯ ಕಿರೀಟ ತೊಡಿಸೋ ಆತುರ
ಮುನ್ನಡೆಯಲಿ-ಗುರಿ ತಲುಪಲಿ ಕೇಳದಿರಲಿ ಅಪಸ್ವರ
ಹೆಜ್ಜೆ ಹೆಜ್ಜೆ ಒಂದುಗೂಡಿ ಮುನ್ನಡೆಯುವ ನಿರಂತರ
- ಕಲಾವತಿ ಕೃಷ್ಣಾಪುರ,
ಕಾಟಿಪಳ್ಳ
ಮತ್ಸ್ಯೋದ್ಯಮಕ್ಕೆ ದಿಕ್ಸೂಚಿಯಾಗಲಿ
ಮುಂದೆ ಹೋಗೋಣ ಮಂಗಳೂರು ಮಾಲಿಕೆ ಮತ್ಸ್ಯೋದ್ಯಮ ಅಭಿವೃದ್ಧಿಗೆ ದಿಕ್ಸೂಚಿಯಾಗಲಿ. ಪತ್ರಿಕೆಯ ಅಭಿಯಾನ ಸ್ವಾಗತಾರ್ಹ.
ಕರಾವಳಿಯ ಮೀನುಗಾರರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಇದು ಪ್ರೇರಣೆಯಾಗಿ ಇನ್ನಾದರೂ ಸರಕಾರ ಕೇವಲ ಆಶ್ವಾಸನೆಗೆ ಸೀಮಿತವಾಗದೆ ಅಭಿವೃದ್ಧಿ ಕೆಲಸಗಳ ಕಾರ್ಯಗತಕ್ಕೆ ಸಿದ್ಧವಾಗಬೇಕು. ಸಂಕಷ್ಟದಲ್ಲಿರುವ ಮತ್ಸ್ಯೋದ್ಯಮಕ್ಕೆ ಸ್ಪಂದಿಸಿ ಬಡ ಮೀನುಗಾರರ ಜೀವನ ಸುಧಾರಣೆಗೆ ಪ್ರಯತ್ನಿಸಬೇಕು.
ಸರಕಾರ ಮತ್ಸ್ಯಾಶ್ರಯ ಮನೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು, ಅನೇಕ ವರ್ಷಗಳಿಂದ ದುರವಸ್ಥೆಯಲ್ಲಿರುವ ಮೀನುಗಾರಿಕಾ ರಸ್ತೆಗಳ ಅಭಿವೃದ್ಧಿಯತ್ತ ಗಮನ ಹರಿಸಬೇಕು, ಮಾರುಕಟ್ಟೆಗಳಲ್ಲಿ ಶೌಚಾಲಯ ವ್ಯವಸ್ಥೆ ಸಹಿತ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು. ಮೀನುಗಾರರ ಸಂಕಷ್ಟ ಪರಿಹಾರ ನಿಯನ್ನು ಹೆಚ್ಚಿಸಬೇಕು.
ಈ ವಿಷಯಗಳನ್ನು ಮನವರಿಕೆ ಮಾಡಿಕೊಡುವಲ್ಲಿ ಮಾಲಿಕೆ ಪ್ರಶಂಸನೀಯ. ವಿಜಯ ಕರ್ನಾಟಕ ಜನರು ಮತ್ತು ಸರಕಾರದ ನಡುವೆ ಕೊಂಡಿಯಾಗಿ ಪ್ರಕಾಶಿಸಲಿ ಎಂದು ಹಾರೈಸುತ್ತೇನೆ.
- ಬಿ. ರಾಜು ತೋಟದಬೆಟ್ಟು,
ತೆಕ್ಕಟ್ಟೆ ಗ್ರಾ.ಪಂ. ಸದಸ್ಯ
ನಮಗೂ ಬೇಕು
`ಅಬ್ಬಕ್ಕ ಉತ್ಸವ'
`ಮಂಗಳೂರಿನ ರಾಣಿ ಅಬ್ಬಕ್ಕನ ನೆನಪಿಗಾಗಿ ಮಾಡುತ್ತಿದ್ದ `ಅಬ್ಬಕ್ಕ ಉತ್ಸವ' ಈಗ ತೆರೆ ಮರೆಗೆ ಸರಿದಿದೆ. ಆದರೆ ಮಂಗಳೂರಿನ ಬೆಳವಣಿಗೆಗೆ ಇಂತಹ ಉತ್ಸವ ಅಗತ್ಯ. ರಾಜ್ಯ,ದೇಶ ಮಟ್ಟದಲ್ಲಿ ಜನರ ಆಕರ್ಷಣೆ ಮಾಡಲು ಉತ್ಸವದ ಅಗತ್ಯವಿದೆ. ತುಳು ನಾಡಿನ ಸಂಸ್ಕೃತಿ, ಕಲೆ, ಜಾನಪದದ ಶ್ರೀ ಮಂತಿಕೆಗೆ ಇದೊಂದು ಉತ್ತಮ ವೇದಿಕೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ರಾಜ್ಯದ ಬೇರೆ ಜಿಲ್ಲೆಗಳು ಹಂಪಿ, ಕಿತ್ತೂರು ಉತ್ಸವದಂತೆ ಕರಾವಳಿಯಲ್ಲಿ ಅಬ್ಬಕ್ಕ ಉತ್ಸವ ಬರಲಿ. ಇದಕ್ಕೆ ಜಿಲ್ಲಾಡಳಿತ ಹಾಗೂ ಸರಕಾರ ಕೂಡ ಪ್ರೋತ್ಸಾಹ ನೀಡುವುದು ಅವಶ್ಯಕ'
ಮಂಜುನಾಥ ಹೂಗಾರ್
ರಂಗಭೂಮಿ ಕಲಾವಿದ
`ಕೋಳಿಗಳಿಗೂ
ತೆರಿಗೆ ಬೀಳಬೇಕು'
`ರಾಜ್ಯದಿಂದ ಕೋಳಿ ಹಾಗೂ ಅದರ ಇತರ ಉತ್ಪನ್ನಗಳು ಕೇರಳದ ಗಡಿ ದಾಟಬೇಕಾದರೆ ಶೇ.೨೦ ರಷ್ಟು ತೆರಿಗೆಯನ್ನು ವಿಸಲಾಗುತ್ತದೆ. ಆದರೆ ಅಲ್ಲಿಂದ ಬರುವ ಕೋಳಿಗಳ ಮೇಲೆ ಯಾವುದೇ ತೆರಿಗೆ ಇಲ್ಲ. ಆಂಧ್ರಪ್ರದೇಶ, ಪುಣೆ, ತಮಿಳುನಾಡಿನಿಂದ ಬರುವ ಕೋಳಿಗಳಿಗೆ ಬೆಲೆ ಕೂಡ ಕಡಿಮೆ. ಇಲ್ಲಿಯ ಕೋಳಿ ಸಾಕಾಣೆದಾರರಿಗೆ ಇದರಿಂದ ದೊಡ್ಡ ಹೊಡೆತ ಬೀಳುತ್ತಿದೆ. ದೊಡ್ಡ ಮಟ್ಟದ ಕೋಳಿ ಸಾಕಾಣೆದಾರರಿಗೆ ಮಾತ್ರ ಇಲ್ಲಿ ಬದುಕಲು ಅವಕಾಶ. ಸಣ್ಣ ಮಟ್ಟದ ಕೋಳಿ ಸಾಕಾಣೆಗೆ ಇಲ್ಲಿ ಅವಕಾಶವೇ ಇಲ್ಲದೇ ಹೋಗುತ್ತದೆ'
ದೀಪಕ್ ಡಿ ಸೋಜಾ
ಮರಿಯಾ ಹ್ಯಾಚರೀಸ್
ಶನಿವಾರ, ನವೆಂಬರ್ 1, 2008
ತುಳುನಾಡವರೇ ತಾಯಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ