ಭಾನುವಾರ, ಅಕ್ಟೋಬರ್ 26, 2008
ಶನಿವಾರ, ಅಕ್ಟೋಬರ್ 25, 2008
ನಕಲಿ ವೈದ್ಯರು
ಬುದ್ಧಿವಂತರ ನಾಡು ಕರ್ನಾಟಕ. ಅದರಲ್ಲೂ ಮಂಗಳೂರು ಹಾಗೂ ಸುತ್ತಮುತ್ತಲಿನ ಕರಾವಳಿ ಪ್ರದೇಶದ ಜನರು ಬುದ್ಧಿವಂತರು. ಆದರೆ ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಗೆ ಹೋಲಿಸಿದರೆ ಇಲ್ಲಿ ನಕಲಿ ವೈದ್ಯರ ಹಾವಳಿ ಮಿತಿಮೀರುತ್ತಿದೆ. ಯಾವುದೇ ವೈದ್ಯಕೀಯ ಪದವಿ ಇಲ್ಲದೆ ರಾಜಾರೋಷವಾಗಿ ಜಿಲ್ಲೆಯ ಎಲ್ಲ ಕಡೆಯಲ್ಲೂ ಈ ನಕಲಿ ವೈದ್ಯರು ಜನರ ಶೋಷಣೆ ಮಾಡುತ್ತಿದ್ದಾರೆ. ಇದಕ್ಕೆ ವಿರುದ್ಧವಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ (ಐಎಂಎ) ಹಾಗೂ ಕುಟುಂಬ ವೈದ್ಯರ ಸಂಘ ಎಷ್ಟೇ ಪ್ರಯತ್ನ ಪಟ್ಟರೂ ಇದನ್ನು ಸಂಪೂರ್ಣ ಹತೋಟಿಯಲ್ಲಿಡಲು ಸಾಧ್ಯವಾಗಿಲ್ಲ. ಹಾಗಾಗಿ ಜಿಲ್ಲೆಯ ಜನತೆ ಎಚ್ಚೆತ್ತುಕೊಂಡಾಗ ಮಾತ್ರ ಇದನ್ನು ಸಂಪೂರ್ಣವಾಗಿ ಹತ್ತಿಕ್ಕಬಹುದಾಗಿದೆ.
* ಡಾ.ವಿಷ್ಣು ಪ್ರಭು
ಕಣ್ಣಿನ ವೈದ್ಯರು, ಮಂಗಳೂರು
ನಮ್ಮ ಸಂಸ್ಕೃತಿ ಮತ್ತು ರಕ್ಷಣೆ
ಸತ್ಯಧರ್ಮದಿಂದ ಬಾಳುವುದು, ಮಾಡಿದ ಕೆಲಸಗಳಲ್ಲಿ ತಪ್ಪುಗಳಾದಲ್ಲಿ ಮನ್ನಿಸಿ-ಅನುಗ್ರಹ ಬೇಡುವುದು, ಕುಟುಂಬ ಸದಸ್ಯರು ಒಮ್ಮನಸ್ಸಿನಿಂದ ಕೂಡಿ ಬಾಳುವುದು ಈ ನೆಲದ ವಿಶಿಷ್ಟ ಸಂಸ್ಕೃತಿ. ಕರಾವಳಿಯ ನಿಜವಾದ ಜೀವನ ಶೈಲಿ ಪ್ರಕೃತಿಯೊಂದಿಗೆ ಹೊಂದಿಕೊಂಡು ಬಿಡಿ ಬಿಡಿಯಾಗಿ ಬದುಕುವ ವಿಶಿಷ್ಟ ಸ್ವತಂತ್ರ, ಸ್ವಾಭಿಮಾನಿ ಸಂಸ್ಕೃತಿ.
ಆಧುನಿಕತೆ, ನಗರೀಕರಣ, ಜಾಗತೀಕರಣದ ಧಾವಂತ ಈ ನೆಲದ ಸೌಹಾರ್ದ, ಶಾಂತಾ ವಾತಾವರಣ ಒಳಗೊಂಡಂತೆ ಬೆಳೆಯುತ್ತಿದೆ. ಸಂಸ್ಕೃತಿ ರಕ್ಷಣೆ ಆಗಬೇಕಾಗಿದ್ದಲ್ಲಿ ವಿದ್ಯಾಸಂಸ್ಥೆಗಳು ನಿಗದಿತ ಪಠ್ಯದ ಹೊರತಾಗಿಯೂ ಸ್ಥಳೀಯ ಸಂಸ್ಕೃತಿಯನ್ನು ಅವುಗಳ ಶುದ್ಧ ಭಾವರೂಪದಲ್ಲಿ ಅಭ್ಯಸಿಸುವ, ಅರ್ಥೈಸುವ ಕೆಲಸ ಮಾಡಬೇಕು. ಶ್ರದ್ಧಾಕೇಂದ್ರಗಳಲ್ಲಿ ಆಡಂಬರ, ಪ್ರದರ್ಶನಪ್ರಿಯತೆಗಿಂತ ತಿಳಿವಳಿಕೆ ಮತ್ತು ಆಚರಣೆಯಲ್ಲಿನ ನಿಷ್ಠೆಗೆ ಪ್ರೇರಣೆ ನೀಡಬೇಕು. ಕಲಾವಿದರು, ಕಲಾಸಕ್ತರು, ಆಸ್ತಿಕರಿಗೆ ಗೌರವ ಮನ್ನಣೆ ಪ್ರೋತ್ಸಾಹ ನೀಡುವುದರಿಂದ ಸಂಸ್ಕೃತಿ ಶುದ್ಧರೂಪದಲ್ಲಿರಲು ಸಹಕಾರಿಯಾಗುತ್ತದೆ. ರೂಢಿಗತ ಮೂಢನಂಬಿಕೆ ನಯವಾಗಿ ಬದಿಗೆ ಸರಿಸಿ ಕೌಟುಂಬಿಕ ನಿಷ್ಠೆ, ಜೀವನ ಮೌಲ್ಯ, ಸಮಾಜಸೇವೆ, ಪರಂಪರೆ ಮುಂತಾದವುಗಳ ವ್ಯಕ್ತಿಗತ ಆಚರಣೆಗೆ ಮಹತ್ವ ಕೊಡಬೇಕು. ಕರಾವಳಿಯಲ್ಲಿ ಕಲೆ ಸಂಸ್ಕೃತಿ ಕುರಿತ ಚಟುವಟಿಕೆಗಳು ನಡೆಯುತ್ತವೆ. ಆದರೆ ಅದರಲ್ಲಿನ ಹೂರಣ ತುಂಬಾ ಕಡಿಮೆ. ಹೊರಪ್ರದರ್ಶನ ಜಾಸ್ತಿ. ಸಾಮೂಹಿಕ ಕಾರ್ಯಭಾರದ ಸಂಸ್ಕೃತಿ ನಿಷ್ಠರ ಪಡೆ ಹುಟ್ಟುಹಾಕುವ ಕೆಲಸ ತುರ್ತು ಆಗಬೇಕಾಗಿದೆ.
* ಯು.ಚಂದ್ರಶೇಖರ ಹೊಳ್ಳ
ಉಡುಪಿ ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷರು
ಪಶ್ಚಿಮಘಟ್ಟ ಅಪಾಯದಲ್ಲಿದೆ
ಒಟ್ಟಾರೆ ದೃಷ್ಟಿಕೋನದಿಂದ ಪಶ್ಚಿಮಘಟ್ಟ ಅಪಾಯದಲ್ಲಿದೆ. ಬ್ರಿಟಿಷರ ಪ್ರವೇಶಾತಿಯಾದಂದಿನಿಂದ ಪಶ್ಚಿಮಘಟ್ಟದ ಒಂದೊಂದು ಮಗ್ಗಲು ಬರಿದಾಗುತ್ತಲಿದೆ. ಇನ್ನೊಂದೆಡೆ ನಗರೀಕರಣದ ಧಾವಂತ, ಕಾಡುಗಳ ಮಧ್ಯದ ದಾರಿ, ವಿದ್ಯುತ್ ಮಾರ್ಗ ರಚನೆಯಿಂದಾಗಿ ಸಸ್ಯ ವೈವಿಧ್ಯಗಳ ನಿರ್ಮೂಲನೆ ಕೆಲಸ ನಡೆದಿದೆ, ನಡೆಯುತ್ತಲೇ ಇದೆ.
ಹಿಂದಿನಂತೆ ಪಶ್ಚಿಮಘಟ್ಟದಲ್ಲಿ ಸಸ್ಯ ವೈವಿಧ್ಯತೆ ಕಾಣಲು ಈಗ ಸಾಧ್ಯವಿಲ್ಲ. ಸರಕಾರಿ ಸಂಭೂತ ಕಾಡು ಬೆಳೆಸುವಿಕೆ ಪಶ್ಚಿಮಘಟ್ಟದ ವಾಸ್ತವತೆಯ ಮೇಲೂ ಪರಿಣಾಮ ಬೀರಿದೆ. ಕಡಿದ ಕಾಡಿನ ಬದಲಾಗಿ ಏಕಪ್ರಕಾರದ ಸಸ್ಯ ಬೆಳೆಸುವಿಕೆ ನೈಜತೆಗೆ ದಕ್ಕೆ ತಂದಿದೆ. ಕೃಷಿಯ ವಿಧಾನವೂ ಸಹ ಪಶ್ಚಿಮಘಟ್ಟದ ವಾಸ್ತವತೆಗೆ ಏಟು ನೀಡಿದೆ.
ಪಶ್ಚಿಮಘಟ್ಟದ ರಕ್ಷಣೆಗೆ ಮುಖ್ಯವಾಗಿ ಮಾಡಬೇಕಾದ ಕೆಲಸವೆಂದರೆ ಸಸ್ಯ ವೈವಿಧ್ಯತೆಗಳ ರಕ್ಷಣೆ. ಜತೆಗೆ ಕೃಷಿ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಪಶ್ಚಿಮಘಟ್ಟದ ನೈಜತೆ ರಕ್ಷಿಸದಿದ್ದಲ್ಲಿ ಭೌಗೋಳಿಕ ಅಸಮತೋಲನ ನಿಶ್ಚಿತ.
*ಶಿವಾನಂದ ಕಳವೆ
ಖ್ಯಾತ ಪರಿಸರ ಹೋರಾಟಗಾರ, ಲೇಖಕ
ಸಮಗ್ರ ರಂಗಭೂಮಿಗೆ ಪುನಶ್ಚೇತನವಾಗಬೇಕು
ವಿಪರ್ಯಾಸವೆಂದರೆ ಇಂದು ಕನ್ನಡ ರಂಗಭೂಮಿ ಉತ್ತರ ಕನ್ನಡಕ್ಕೆ ಮಾತ್ರ ಸೀಮಿತಗೊಂಡಿದ್ದರೆ, ತುಳು ರಂಗಭೂಮಿ ದಕ್ಷಿಣ ಕನ್ನಡಕ್ಕೆ ಸೀಮಿತಗೊಂಡಿದ್ದು, ಸಮಗ್ರ ರಂಗಭೂಮಿಯ ಪುನಶ್ಚೇತನ ನಡೆಯುತ್ತಿಲ್ಲ. ಈ ನಿಟ್ಟಿನಲ್ಲಿ ಆಡಳಿತದ ಅಸಡ್ಡೆಯೂ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದು ರಂಗಭೂಮಿಗೆ ಎಸಗುವ ಅಪಮಾನ.
ಕೇವಲ ಅಕಾಡೆಮಿಗಳನ್ನು ಸ್ಥಾಪಿಸಿದಲ್ಲಿಗೆ ಹೊಣೆಗಾರಿಕೆ ಮುಗಿಯುವುದಿಲ್ಲ. ಮಂಗಳೂರು ಪುರಭವನದ ಶುಲ್ಕವನ್ನು ಏರಿಕೆ ಮಾಡಿರುವುದು ಕೇವಲ ರಂಗಭೂಮಿಗೆ ಮಾತ್ರವಲ್ಲ, ಇದು ಸಾಂಸ್ಕೃತಿಕ ವಲಯಕ್ಕೆ ನುಂಗಲಾರದ ತುತ್ತಾಗಿದೆ. ಗಡಿನಾಡು ಕಾಸರಗೋಡಿನ ಸಾಂಸ್ಕೃತಿಕ ತಂಡಗಳು ನಡೆಸುವ ಪ್ರದರ್ಶನಗಳಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡಲಿ. ದಕ್ಷಿಣ ಕನ್ನಡದ ತುಳು, ಕೊಂಕಣಿ, ಕೊಡವ ಭಾಷೆಗಳ ಪ್ರದರ್ಶನಗಳಿಗೆ (ಟಿಕೆಟ್ ಇಲ್ಲದೆ) ಪುರಭವನವನ್ನು ಅರ್ಧ ಶುಲ್ಕಕ್ಕೆ ನೀಡಲಿ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕೃತಿ ರಮಣೀಯ ತಾಣಗಳಿದ್ದು, ಸೂಕ್ತ ವಸತಿ ಸೌಲಭ್ಯ ತೊಡಕುಗಳು ಇಲ್ಲಿ ಚಿತ್ರೀಕರಣ ನಡೆಸಲು ಆಗಮಿಸುವ ಸಿನಿಮಾ ತಂಡಗಳ ಸಂಕಷ್ಟಕ್ಕೆ ಕಾರಣವಾಗುತ್ತದೆ. ದಕ್ಷಿಣ ಕನ್ನಡ ಮೂಲದ ಧಾರಾಳ ಸಂಪನ್ಮೂಲ ವ್ಯಕ್ತಿಗಳು ಇಂದು ಕನ್ನಡ ಚಿತ್ರರಂಗದ ಮೇರುಸ್ಥಾನದಲ್ಲಿದ್ದು, ಇವರು ಇಂತಹ ಸಮಸ್ಯೆಗಳ ಕುರಿತು ಗಂಭೀರ ಸಮಾಲೋಚನೆ ನಡೆಸಬೇಕು. ತುಳು, ಕೊಂಕಣಿ ಸಿನಿಮಾಗಳು ಹೆಚ್ಚು ಹೆಚ್ಚು ನಿರ್ಮಾಣಗೊಳ್ಳುವ ರೀತಿ ಈ ಬಗ್ಗೆ ಶಿಬಿರಗಳು ನಾಡಿನಲ್ಲಿ ನಡೆಯಲಿದೆ. ಪ್ರಾಮಾಣಿಕ ಯತ್ನದಿಂದ ಈ ಸಮಸ್ಯೆಗಳ ಪರಿಹಾರ ಸಾಧ್ಯ.
* ಕಾಸರಗೋಡು ಚಿನ್ನಾ
* ಹೊಸತನ ಕಲೆಗೆ ಮಾರಕವೇ?
ಯಾವುದೇ ಕಲೆಯಾಗಿರಲಿ ಮೈಮನಸ್ಸುಗಳಿಗೆ ಮುದ ನೀಡುವ ಜತೆಯಲ್ಲೇ ಬದುಕಿಗೆ ಬೆಳಕನ್ನು ನೀಡಬೇಕು. ಅಂತರಂಗದ ಕುಸುಮ ವಿಕಾಸ ಕಲೆಯ ಕಾಯಕಕ್ಕೆ ಫಲಶ್ರುತಿ! ಈ ವಿಕಾಸ ಸಂಸ್ಕಾರದಿಂದ ಪರಿಮಳಗೊಳ್ಳುತ್ತದೆ. ಈ ಪರಿಮಳ ಸುತ್ತೆಲ್ಲ ಹರಡಿ ಜೀವನಾಧಾರವಾಗುತ್ತದೆ.
ಯಕ್ಷಗಾನ ಹೇಗೆ ತನ್ನ ಜನಪ್ರಿಯತೆ ಹೆಚ್ಚಿಸುತ್ತಾ ಸಾಗಿದೆಯೋ ಅದೇ ಪ್ರಮಾಣದಲ್ಲಿ ಪರಂಪರೆಯಿಂದ ದೂರ ಸರಿದಿದೆ ಎಂಬುದು ಸತ್ಯ. ಪರಂಪರೆ ಬಗ್ಗೆ ಮಾತನಾಡುವವರು ಸಂಪ್ರದಾಯವನ್ನು ಉಳಿಸುವವರಾದರೆ ಕಲಾವಿದರು ಜನಪ್ರಿಯತೆ ಬೆನ್ನು ಹತ್ತಿ ಹೋದವರು. ವಿದ್ವಾಂಸರು ಗೋಷ್ಠಿಗಳಲ್ಲಿ ವಿಚಾರಕ್ಕಾಗಿ ವಿಷಯ ಮಂಡಿಸಿದರೆ ಕಲಾವಿದರು ಪ್ರೇಕ್ಷಕರ ಮುಂದೆ ಯಕ್ಷಗಾನವನ್ನು ಪ್ರದರ್ಶಿಸುವ ಜವಾಬ್ದಾರಿ ಹೊತ್ತಿರುತ್ತಾರೆ. ಇವರಿಗೆ ಯಕ್ಷಗಾನವೆಂಬುದು ಉದ್ಯಮ ಅಥವಾ ಕಲಾ ಉದ್ಯಮ. ಹೆಚ್ಚು ಹೆಚ್ಚು ಪ್ರೇಕ್ಷಕರನ್ನು ರಂಜನೀಯವಾಗಿರುವಂತೆ ನೋಡಿಕೊಳ್ಳುವುದು ಜವಾಬ್ದಾರಿ. ಈ ಕಲೆಯ ನಿಯಂತ್ರಕ ಶಕ್ತಿ ಕಲಾವಿದರೇ ಆಗಿದ್ದು ಹೆಚ್ಚು ಪ್ರೇಕ್ಷಕರಿಗೆ ಹೆಚ್ಚು ಪ್ರಯೋಗಗಳನ್ನು ನೀಡುವವರೂ ಅವರೇ. ಕಲೆಯ ಮಾರ್ಪಾಡಿಗೆ ಅವರೇ ನೇರ ಹೊಣೆಗಾರರು. ಇದರ ಮುಂದೆ ಕಲೆಯನ್ನು ಮಾಧ್ಯಮವಾಗಿ ಸ್ವೀಕರಿಸಿದ ವಿದ್ವಾಂಸರಿಗೆ ಸಂಪ್ರದಾಯವಾದಿಗಳಿಗೆ ಈ ನಿಯಂತ್ರಣ ಶಕ್ತಿ ಇಲ್ಲವಾಗುತ್ತದೆ. ಹೀಗೆ ಕಲಾವಿದರಿಗೆ ವೃತ್ತಿಯ ಮೇಲಿನ ಪ್ರೀತಿ, ಪರಂಪರೆ, ಸಂಪ್ರಾಯವಾದಿಗಳಿಗೆ ಕೇವಲ ಕಲೆಯ ಮೇಲಿನ ಪ್ರೀತಿ ಈ ಎರಡು ಜಂಜಾಟದಲ್ಲಿ ಮೊದಲಿನವರು ಜಯಶೀಲರಾಗಿ ಕಲೆಯ ಮಾರ್ಪಾಡಾಯಿತು.
* ಎಸ್.ವಿ.ಉದಯ ಕುಮಾರ್ ಶೆಟ್ಟಿ ಮಣಿಪಾಲ
ಪ್ರಾಧ್ಯಾಪಕರು, ಎಂ.ಐ.ಟಿ. ಮಣಿಪಾಲ
ಹೊಸ ದೃಷ್ಟಿಕೋನ ಅಧ್ಯಯನ ಆಗಬೇಕಿದೆ
ಪರಂಪರೆಯಿಂದ ಯಕ್ಷಗಾನಕ್ಕೆ ಪೌರಾಣಿಕ ಮೌಲ್ಯ ಇರುವ ಕತೆಗಳೇ ಬಂದಿವೆ. ಯಕ್ಷಗಾನ ನೋಡುವುದು ಕತೆಯ ಹೊಸತನಕ್ಕೂ ಅಲ್ಲ, ಕತೆಗೆ ಸಂಬಂಧಪಟ್ಟ ರುಚಿಗಾಗಿಯೂ ಅಲ್ಲ. ಪಾತ್ರ ಚಿತ್ರಣ, ಕುಣಿತ ಮುಂತಾದ ಕಲಾತ್ಮಕ ಅಂಶಗಳನ್ನು ಗಮನಿಸಲು ಹೋಗುತ್ತಿದ್ದರು. ಈಗ ಬರುತ್ತಿರುವ ಹೊಸಕತೆಗಳಿಂದಾಗಿ ನೋಡಬೇಕಾದ ದೃಷ್ಟಿಯೇ ಬದಲಾಗುತ್ತದೆ. ಸಿನಿಮಾ ಕತೆಗಳನ್ನು ಯಕ್ಷಗಾನಕ್ಕೆ ಅಳವಡಿಸುವಾಗ ಯಕ್ಷಗಾನದ ಮೂಲಭೂತ ಅಭಿರುಚಿ ಬದಲಾಗುವ ಸಂಭವ ಇದೆ. ಈ ವಾಸ್ತವ ನೆಲೆಯಲ್ಲಿ ಸಿನಿಮಾ ಕತೆ ಯಕ್ಷಗಾನ ಸ್ವಭಾವಕ್ಕೆ ಹೊಂದಿಕೊಳ್ಳುವುದಿಲ್ಲ.
ಯಕ್ಷಗಾನಗಾನದಲ್ಲಿ ಹೊಸತನ ತರಲೇ ಬೇಕಾಗುತ್ತದೆ. ಯಕ್ಷಗಾನದ ಮೂಲಭೂತವಾದ ಕಲಾತ್ಮಕ ಚೌಕಟ್ಟಿನ ಒಳಗೆ ಮತ್ತು ಪೌರಾಣಿಕ ಕತೆಗಳಿಗೆ ಹೊಸತನದ ಅಗತ್ಯವಿದೆ. ಸಮಕಾಲೀನ ಬದುಕಿನೊಂದಿಗೆ ಅದರ ಪ್ರಸ್ತುತತೆ ಇರಬೇಕು. ಹೊಸ ವಿಚಾರ, ಹೊಸ ದೃಷ್ಟಿಕೋನಗಳ ಅಧ್ಯಯನ ಮಾಡಬೇಕು. ಪೌರಾಣಿಕ ಪ್ರಸಂಗಗಳನ್ನೇ ಹೊಸ ಸಂವಿಧಾನಕ್ಕೆ (ರೀ ಅರೆಂಜ್) ಅಳವಡಿಸಬೇಕು. ಯಕ್ಷಗಾನ ತಿಳಿದಿರುವ ನಾಟಕ ನಿರ್ದೇಶಕರಲ್ಲಿ ಅವರಿಂದ ಯಕ್ಷಗಾನ ಪ್ರಸಂಗ ನಿರ್ದೇಶಿಸುವ ಪ್ರಯತ್ನ ಮಾಡಿ, ಪರಿಣಾಮ ಹೇಗಿದೆ ಎಂದು ನೋಡಬಹುದು.
* ಎಂ.ಎಲ್.ಸಾಮಗ
ಖ್ಯಾತ ಯಕ್ಷಗಾನ ಕಲಾವಿದರು
ಸಬ್ಸಿಡಿ ಹಣ ಹೆಚ್ಚಿಸಬೇಕು
* ಇತರ ಕ್ಷೇತ್ರಗಳಲ್ಲಿ ಸಾಸಿರುವ ಯಶಸ್ಸಿಗೆ ಹೋಲಿಸಿದರೆ, ತುಳು ಸಿನಿಮಾ ರಂಗದ ಅಭಿವೃದ್ಧಿಯಲ್ಲಿ ನಾವು ಹಿಂದೆ ಉಳಿದಿದ್ದೇವೆ. ಒಳ್ಳೆಯ ತುಳು ಸಿನಿಮಾ ನೀಡಿದರೆ ಪ್ರೇಕ್ಷಕರು ಸ್ವೀಕರಿಸಬಹುದು. ಆದರೆ ಅಂತಹ ಸಿನಿಮಾ ನೀಡಲು ಒಂದಷ್ಟು ಕೊರತೆಗಳಿವೆ. ತುಳು ನಾಟಕ ರಂಗ ಸದ್ಯ ಸಮೃದ್ಧವಾಗಿದೆ. ಆದರೆ ತುಳು ಸಿನಿಮಾ ರಂಗಕ್ಕೆ ಸರಕಾರದ ಸಹಾಯ ಬೇಕಾಗಿದೆ.ಈಗ ನೀಡುತ್ತಿರುವ ಸಬ್ಸಿಡಿ ಹಣವನ್ನು ಇನ್ನಷ್ಟು ಹೆಚ್ಚಿಸುವುದು ನಮ್ಮ ಬೇಡಿಕೆ. ಸಬ್ಸಿಡಿ ದೊರೆಯುತ್ತದೆ ಎನ್ನುವ ಕಾರಣಕ್ಕಾಗಿ `ನಾಮ್ ಕೆ ವಾಸ್ತೆ' ತುಳು ಸಿನಿಮಾ ನಿರ್ಮಿಸಬಾರದು. ವ್ಯಾಪಾರ ಉದ್ದೇಶ ಬಿಟ್ಟು ಗುಣಮಟ್ಟದ ಸಿನಿಮಾ ನೀಡುವ ಹೊಣೆಗಾರಿಕೆ ಇರಬೇಕು. ಈಗ ಪ್ರತಿ ವರ್ಷ ತಲಾ ಒಂದು ತುಳು, ಕೊಂಕಣಿ, ಕೊಡವ ಭಾಷೆಯ ಚಿತ್ರಗಳಿಗೆ ಸರಕಾರ ಸಬ್ಸಿಡಿ ನೀಡುತ್ತಿದೆ. ಒಂದೊಮ್ಮೆ ಕೊಡವ, ಕೊಂಕಣಿ ಭಾಷೆಯ ಸಿನಿಮಾ ಒಂದು ವರ್ಷ ಸಾಲಿನಲ್ಲಿ ನಿರ್ಮಾಣವಾಗದಿದ್ದರೆ, ಆ ಹಣವನ್ನು ತುಳು ಸಿನಿಮಾಗಳಿಗೆ ನೀಡುವಂತೆ ಸರಕಾರವನ್ನು ವಿನಂತಿಸಿದ್ದೇವೆ.
* ತುಳು ರಂಗಭೂಮಿಗೆ ಪ್ರೇಕ್ಷಕರ ಕೊರತೆ ಇಲ್ಲ. ಆದರೆ ರಂಗ ಮಂದಿರದ ಕೊರತೆ ಇದೆ. ಮಂಗಳೂರು ನಗರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾದರೆ ಪ್ರತಿ ದಿನ ತುಳು ನಾಟಕದ ಪ್ರದರ್ಶನ ನಡೆಯಬಹುದು.
ವಿಜಯಕುಮಾರ್ ಕೊಡಿಯಾಲ್‌ಬೈಲ್
ನಾಟಕಕಾರ, ನಿರ್ದೇಶಕ
ಸಾಮಾನ್ಯ ಜನತೆ ಕೂಡಾ ಅಭಿವೃದ್ದಿ ಬಗ್ಗೆ ಚಿಂತನೆ ಮಾಡಲು `ವಿಜಯ ಕರ್ನಾಟಕ'ದ `ಮುಂದೆ ಹೋಗೋಣ ಮಂಗಳೂರು' ವೇದಿಕೆ ಒದಗಿಸಿದೆ. ನಾಡಿನ ಪ್ರಗತಿ ಹೇಗಿರಬೇಕು..? ಸಾಧನೆಯ ಹಾದಿಯಲ್ಲಿ ಆಡಳಿತ ವ್ಯವಸ್ಥೆ ಎಲ್ಲಿ ಎಡವಿದೆ..? ಸಮಸ್ಯೆಗಳಿಗೆ ಪರಿಹಾರ ಏನು..ಹೀಗೆ ಎಲ್ಲ ವಿವರ/ವಿಷಯಗಳನ್ನು ಸರಳವಾಗಿ ಓದುಗರಿಗೆ ನೀಡುವುದರ ಜತೆಗೆ, ಅಹವಾಲುಗಳನ್ನು ಸರಕಾರಕ್ಕೆ ಸಲ್ಲಿಸುವ ಕಾರ್ಯ ಸ್ತುತ್ಯಾರ್ಹ . ಪತ್ರಿಕೆಯೊಂದು ಜನಧ್ವನಿಯಾಗುವ ಮೂಲಕ ಜನತೆಯ ಅರ್ಹ ಹೋರಾಟಗಳಿಗೆ ಹೊಸ ಶಕ್ತಿ ತುಂಬಿದೆ. ತನ್ಮೂಲಕ ಸಮಸ್ತ ಕನ್ನಡಿಗರ ಹೆಮ್ಮೆ ಎಂಬ `ವಿಜಯ ಕರ್ನಾಟಕ'ದ ಧ್ಯೇಯ ವಾಕ್ಯ ಅರ್ಥಪೂರ್ಣವಾಗಿ ಸಾಕಾರಗೊಳ್ಳುತ್ತಿದೆ.
ಅಭಿವೃದ್ದಿ ಕಾರ್ಯ ಸರಕಾರದ, ಜನಪ್ರತಿನಿಗಳ ಹೊಣೆಗಾರಿಕೆ ಹೌದು. ಹಾಗೆಂದು ನಾಗರಿಕರು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಈ ಹಿನ್ನೆಲೆಯಲ್ಲಿ `ವಿಜಯ ಕರ್ನಾಟಕ' ಎಲ್ಲರನ್ನು ಎಚ್ಚರಿಸುವ ಕಾರ್ಯ ಮಾಡಿದೆ. ನಮ್ಮೂರಿನ ಪ್ರಗತಿಯನ್ನು ನಾವೇ ನಿರ್ಧರಿಸಲು ಇದು ಸಕಾಲ.
ಇತರ ಪ್ರದೇಶಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆ ಅಭಿವೃದ್ದಿ ಕಾರ್ಯಗಳಲ್ಲಿ ಒಂದಷ್ಟು ಮುಂದಿದೆ. ಆದರೆ ಇಲ್ಲಿನ ರಸ್ತೆಗಳು ಪ್ರಗತಿಗೆ ಅಡ್ಡಿಯಾಗಿರುವುದು ಹಗಲಿನಷ್ಟೇ ಸತ್ಯ. ಕೈಗಾರಿಕೆ, ಪ್ರವಾಸೋದ್ಯಮ..ಹೀಗೆ ಬಹುತೇಕ ಕ್ಷೇತ್ರಗಳ ಪ್ರಗತಿ ಕುಂಠಿತವಾಗಿದ್ದರೆ ಅದಕ್ಕೆ ಕಳಪೆ ರಸ್ತೆಗಳು ಪರೋಕ್ಷ ಕಾರಣ. ಜಿಲ್ಲೆಯ ರಸ್ತೆಗಳಿಗೆ ಆಂದೋಲನದ ರೀತಿಯಲ್ಲಿ ಕಾಯಕಲ್ಪವಾಗಬೇಕು. ಇಲ್ಲವಾದರೆ ಮುಂದೆ ಹೋಗೋಣ.. ಕನಸಾಗಿಯೇ ಉಳಿಯಬಹುದು.
. ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ, ಜಿಪಂ..ಹೀಗೆ ಜಿಲ್ಲೆಯ ಎಲ್ಲ ರಸ್ತೆಗಳ ನಿರ್ವಹಣೆಗೆ ಎಷ್ಟು ಹಣ ವ್ಯಯವಾಗುತ್ತಿದೆ..? ರಸ್ತೆಗಳ ಅಭಿವೃದ್ದಿ ಯಾಕೆ ಸಾಧ್ಯವಾಗುತ್ತಿಲ್ಲ..? ಜಿಲ್ಲೆಯ ಎಲ್ಲ ರಸ್ತೆಗಳ ಸ್ಥಿತಿ-ಗತಿ ಬಗ್ಗೆ ಒಂದು ಸಮಗ್ರ ಅವಲೋಕನ ಪತ್ರಿಕೆ ಮೂಲಕ ನಡೆಯಬೇಕೆಂದು ನನ್ನ ವಿನಂತಿ.
-ಕೆ.ಎಸ್.ದೇವರಾಜ್
ನಿರ್ದೇಶಕರು , ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್
ಅಭಿವೃದ್ಧಿ ಮಂತ್ರ ಹೇಳಲು ಶುದ್ಧ ಹಸ್ತ ಅಕಾರಿಗಳು ಬೇಕು
ಮಂಗಳೂರು ಅಭಿವೃದ್ಧಿ ವಿಶೇಷ ವಿತ್ತವಲಯ, ಐಟಿ, ಬಿಟಿಯಿಂದ ಮಾತ್ರ ಸಾಧ್ಯ ಎನ್ನವುದು ಸುಳ್ಳು. ಮೊದಲು ಮೂಲಭೂತ ಸೌಕರ್‍ಯ ಅಭಿವೃದ್ಧಿಯಾಗಬೇಕು ಮತ್ತು ನಗರದ ಸಮಸ್ಯೆಗಳನ್ನು ಬಗೆಹರಿಯಬೇಕು.
ಮಹಾನಗರ ಪಾಲಿಕೆ ಯಾಗಿ ರೂಪುಗೊಂಡು ೨೫ ವರ್ಷ ಸಂದಿದೆ. ಆದರೆ ನಗರದಲ್ಲಿ ಶೇ.೭೫ ಭಾಗದಲ್ಲಿ ಒಳಚರಂಡಿ ವ್ಯವಸ್ಥೆ ಇಲ್ಲ! ಮಳೆಗಾಲದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ರಸ್ತೆಗಳ ಸಮಸ್ಯೆ ಹೇಳುವುದೇ ಬೇಡ.
ನಗರಾಭಿವೃದ್ಧಿ ಪ್ರಾಕಾರ ಇದ್ದರೂ ಕೂಡಾ ನಗರದಲ್ಲಿ ಕಾನೂನು ಉಲ್ಲಂಘಿಸಿ ಎರ್ರಾಬಿರ್ರಿಯಾಗಿ ಕಟ್ಟಡಗಳು ನಿರ್ಮಾಣವಾಗಿದೆ. ಮೊದಲು ಇದರತ್ತ ಗಮನಿಸಬೇಕು. ಅನೇಕ ಅಭಿವೃದ್ಧಿ ಪ್ರಾಕಾರಗಳು ಮಂಗಳೂರಿನಲ್ಲಿ ಇವೆ. ಬೇಸರದ ವಿಷಯವೆಂದರೆ ಇವುಗಳಿಂದ ಮಂಗಳೂರು ಅಭಿವೃದ್ಧಿ ಮಾತ್ರ ಆಗಿಲ್ಲ.
ಸರಕಾರ ಕೋಟಿಗಟ್ಟಲೆ ಅನುದಾನ ಬಿಡುಗಡೆಯ ಹೇಳಿಕೆ ನೀಡುತ್ತಿದೆ. ಇದರಿಂದ ಅಭಿವೃದ್ಧಿಯಾಗದು. ಮುಖ್ಯವಾಗಿ ಸರಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಅಕಾರಿಗಳು ಶುದ್ಧ ಹಸ್ತರಾಗಿರಬೇಕು. ಭ್ರಷ್ಟಾಚಾರದಲ್ಲಿ ಮಂಗಳೂರು ಕರ್ನಾಟಕದಲ್ಲಿಯೇ ನಂ.೧ ನಿವೃತ್ತ ಲೋಕಾಯುಕ್ತ ನ್ಯಾ.ವೆಂಕಟಾಚಲ ಹೇಳಿದ್ದರು.
ಇದಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಅಮಾನತಾಗಿರುವ ಅಕಾರಿಗಳು ಮತ್ತೆ ಸೇರ್ಪಡೆಗೊಳ್ಳುತ್ತಿದ್ದಾರೆ. ಹಲವು ವರ್ಷಗಳಿಂದ ಬೀಡುಬಿಟ್ಟಿರುವ ಅಕಾರಿಗಳನ್ನು ಮೊದಲು ಬದಲಾವಣೆ ಮಾಡಬೇಕು. ಯೋಜನೆ ಫಲಪ್ರದವಾಗದಿದ್ದಲ್ಲಿ ಅಕಾರಿಗಳನ್ನು ಹೊಣೆಗಾರರನ್ನಾಗಿಸಬೇಕು ಆಗ ಮಾತ್ರ ಅಭಿವೃದ್ಧಿ ಸಾಧ್ಯ.
ವಿಜಯ ಕರ್ನಾಟಕ ಕೇವಲ ಪತ್ರಿಕೆಯಾಗಿ ಮಾತ್ರವಲ್ಲದೆ ಶಕ್ತಿಯಾಗಿ ಕೆಲಸ ಮಾಡುತ್ತಿದೆ. ಮಂಗಳೂರು ಅಭಿವೃದ್ಧಿಗೆ ಹೊಸ ಅಭಿಯಾನದ ಮೂಲಕ ತನ್ನ ಕಾಣಿಕೆ ನೀಡುತ್ತಿದೆ, ಇದನ್ನು ಮುಂದುವರಿಸಿಕೊಂಡು ಹೋಗಿ ಮಾದರಿ ಪತ್ರಿಕೆಯಾಗಲಿ.
ಜಿ. ಹನುಮಂತ ಕಾಮತ್
ನಾಗರಿಕ ಹಿತರಕ್ಷಣೆ ಸಮಿತಿ ಅಧ್ಯಕ್ಷ
ಫೋಟೊ ಇದೆ ೨೪ಎಂ-ಹನುಮಂತ

ತುಳುವಿನಲ್ಲಿ ಕಮರ್ಷಿಯಲ್ ಸಿನಿಮಾ ಬರಲಿ
* ಸಾಂಸ್ಕೃತಿಕ ರಂಗದ ಪ್ರಗತಿಯೂ ನಾಡಿನ ಅಭ್ಯುದಯಕ್ಕೆ ನಾಂದಿ. ಈ ಹಿನ್ನೆಲೆಯಲ್ಲಿ `ವಿಜಯ ಕರ್ನಾಟಕ'ದ `ಮುಂದೆ ಹೋಗೋಣ ಮಂಗಳೂರು' ಅಭಿಯಾನದಲ್ಲಿ ಎಲ್ಲ ರಂಗದ ಅಭಿವೃದ್ಧಿಯ ಜತೆಗೆ ಜಿಲ್ಲೆಯ ಸಾಂಸ್ಕೃತಿಕ ರಂಗದ ಪ್ರಗತಿ ಬಗ್ಗೆ ಚಿಂತನೆ ನಡೆಸಿದ್ದು ಮೆಚ್ಚುಗೆಯಾಯಿತು.
* ಇತರ ಕ್ಷೇತ್ರಗಳಲ್ಲಿ ಸಾಸಿರುವ ಯಶಸ್ಸಿಗೆ ಹೋಲಿಸಿದರೆ, ತುಳು ಸಿನಿಮಾ ರಂಗದ ಅಭಿವೃದ್ಧಿಯಲ್ಲಿ ನಾವು ಹಿಂದೆ ಉಳಿದಿದ್ದೇವೆ. ಒಳ್ಳೆಯ ತುಳು ಸಿನಿಮಾ ನೀಡಿದರೆ ಪ್ರೇಕ್ಷಕರು ಸ್ವೀಕರಿಸಬಹುದು. ಆದರೆ ಅಂತಹ ಸಿನಿಮಾ ನೀಡಲು ಒಂದಷ್ಟು ಕೊರತೆಗಳಿವೆ. ತುಳು ನಾಟಕ ರಂಗ ಸದ್ಯ ಸಮೃದ್ಧವಾಗಿದೆ. ಆದರೆ ತುಳು ಸಿನಿಮಾ ರಂಗಕ್ಕೆ ಸರಕಾರದ ಸಹಾಯ ಬೇಕಾಗಿದೆ.ಈಗ ನೀಡುತ್ತಿರುವ ಸಬ್ಸಿಡಿ ಹಣವನ್ನು ಇನ್ನಷ್ಟು ಹೆಚ್ಚಿಸುವುದು ನಮ್ಮ ಬೇಡಿಕೆಯಾಗಿದೆ. ಸಬ್ಸಿಡಿ ದೊರೆಯುತ್ತದೆ ಎನ್ನುವ ಕಾರಣಕ್ಕಾಗಿ `ನಾಮ್ ಕೆ ವಾಸ್ತೆ' ತುಳು ಸಿನಿಮಾ ನಿರ್ಮಿಸಬಾರದು. ವ್ಯಾಪಾರ ಉದ್ದೇಶ ಬಿಟ್ಟು ಗುಣಮಟ್ಟದ ಸಿನಿಮಾ ನೀಡುವ ಹೊಣೆಗಾರಿಕೆ ಇರಬೇಕು. ಈಗ ಪ್ರತಿ ವರ್ಷ ತಲಾ ಒಂದು ತುಳು, ಕೊಂಕಣಿ, ಕೊಡವ ಭಾಷೆಯ ಚಿತ್ರಗಳಿಗೆ ಸರಕಾರ ಸಬ್ಸಿಡಿ ನೀಡುತ್ತಿದೆ. ಒಂದೊಮ್ಮೆ ಕೊಡವ, ಕೊಂಕಣಿ ಭಾಷೆಯ ಸಿನಿಮಾ ಒಂದು ವರ್ಷ ಸಾಲಿನಲ್ಲಿ ನಿರ್ಮಾಣವಾಗದಿದ್ದರೆ, ಆ ಹಣವನ್ನು ತುಳು ಸಿನಿಮಾಗಳಿಗೆ ನೀಡುವಂತೆ ಸರಕಾರವನ್ನು ವಿನಂತಿಸಿದ್ದೇವೆ.
* ತುಳು ರಂಗಭೂಮಿಗೆ ಪ್ರೇಕ್ಷಕರ ಕೊರತೆ ಇಲ್ಲ. ನಾಟಕ ತಂಡಗಳ ಸಂಖ್ಯೆ ಹೆಚ್ಚುತ್ತಿರುವುದೇ ಇದಕ್ಕೆ ನಿದರ್ಶನ. ಆದರೆ ರಂಗಮಂದಿರದ ಕೊರತೆ ಎಲ್ಲ ನಾಟಕ ತಂಡಗಳನ್ನು ಬಾಸುತ್ತಿದೆ. ಇರುವ ಒಂದು ಪುರಭವನವನ್ನೇ ಅವಲಂಭಿಸಬೇಕಾದ ಅನಿವಾರ್ಯತೆ. ರಂಗ ಮಂದಿರದ ಕೊರತೆ ನಿವಾರಣೆಯಾಗಬೇಕು. ಮಂಗಳೂರು ನಗರವೂ ಸೇರಿದಂತೆ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸುಸಜ್ಜಿತ ರಂಗ ಮಂದಿರ ನಿರ್ಮಾಣವಾದರೆ ಪ್ರತಿ ದಿನ ತುಳು ನಾಟಕದ ಪ್ರದರ್ಶನ ನಡೆಯಬಹುದು.
-ನಾಟಕಕಾರ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್‌ಬೈಲ್.
** ವಿಜಯಕುಮಾರ್ ಕೊಡಿಯಾಲ್‌ಬೈಲ್

ಮಂಗಳೂರಿನ ಮುನ್ನಡೆಗೊಂದಿಷ್ಟು..
* ನಗರದ ಕೆಲವು ರಸ್ತೆಗಳ ಸುಸ್ಥಿತಿ ನಿರ್ವಹಣಾ ಕಾರ್ಯವನ್ನು ಅವುಗಳನ್ನು ಹೆಚ್ಚಾಗಿ ಬಳಸುವ ಬೃಹತ್ ಕಾರ್ಖಾನೆಗಳ ಸುಪರ್ದಿಗೆ ವಹಿಸಿಕೊಂಡಬೇಕು. ಉದಾ : ಮಠದಕಣಿ ಪ್ರಥಮ ಅಡ್ಡ ರಸ್ತೆಯ ನಿರ್ವಹಣೆಯನ್ನು ಬೋಳೂರಿನಲ್ಲಿರುವ ಮೆ . ಹಿಂದೂಸ್ಥಾನ ಲಿವರ್‍ಸ್ ಸಂಸ್ಥೆಗೆ ವಹಿಸಬೇಕು.
* ನಗರದ ಕೆಲವೆಡೆ ಉದ್ಯಮಿಗಳು ಹೊಂದಿರುವ ಸ್ಥಳಗಳು ದಶಕದಿಂದ ಪಾಳು ಬಿದ್ದಿದ್ದು, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಬೆಳೆಯುತ್ತಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕ ಹಿತಾಸಕ್ತಿಯ ಕಾರಣಗಳಿಗಾಗಿ ಸರಕಾರ/ಸ್ಥಳೀಯಾಡಳಿತ ವಶಕ್ಕೆ ತೆಗೆದುಕೊಳ್ಳಬೇಕು.
*ನಗರದ ಪ್ರಮುಖ ರಸ್ತೆ ಬದಿ ಹಲವು ವರ್ಷಗಳಿಂದ ಅನಾಥವಾಗಿ ಬಿದ್ದಿರುವ ವಾಹನ ಮತ್ತಿತರ ಚರ ವಸ್ತುಗಳನ್ನು ಎತ್ತಂಗಡಿ ಮಾಡಿಸಬೇಕು.
* ನಗರದ ಹೃದಯ ಭಾಗದಲ್ಲಿರುವ ವ್ಯವಹಾರ ಮಳಿಗೆಗಳ ಕಟ್ಟಡದ `ಪಾರ್ಕಿಂಗ್' ಸ್ಥಳವನ್ನು ಇತರ ಉದ್ದೇಶಗಳಿಗೆ ಬಳಸುವುದನ್ನು ನಿಷೇಸಿ ಕ್ರಮ ಕೈಗೊಳ್ಳುವುದು.
* ನಗರದ ಬೃಹತ್ ಮನೆಗಳ ಹಿತ್ತಲಿನ ನೀರು ನೇರ ಸಾರ್ವಜನಿಕ ರಸ್ತೆಗೆ ಹರಿಯ ಬಿಡುವುದನ್ನು ತಡೆಯಬೇಕು.
* ಮಣ್ಣಗುಡ್ಡೆ ಗಾಂನಗರದಲ್ಲಿ ತ್ಯಾಜ್ಯ ವಸ್ತು ಎಸೆಯುತ್ತಿರುವ ಜಾಗವನ್ನು ಸುವ್ಯವಸ್ಥಿತ ರಸ್ತೆಯಾಗಿ ಪರಿವರ್ತಿಸಬೇಕು.
* ನಗರದ ಪ್ರವಾಸಿ ತಾಣಗಳಲ್ಲೊಂದಾದ ಸುಲ್ತಾನ್ ಬತ್ತೇರಿ ಪ್ರದೇಶವನ್ನು ಅಭಿವೃದ್ದಿ ಪಡಿಸಿ, ದೋಣಿ ವಿಹಾರ ಕೇಂದ್ರವಾಗಿಸಬೇಕು.
* ಮಂಗಳೂರು ಮುನ್ನಡೆಗಾಗಿ `ವಿಜಯ ಕರ್ನಾಟಕ` ದಲ್ಲಿ ಬರುವ ಎಲ್ಲ ಗುಣಾತ್ಮಕ ಸಲಹೆಗಳಿಗೆ ಆಡಳಿತ ವ್ಯವಸ್ಥೆ ಸೂಕ್ತವಾಗಿ ಸ್ಪಂದಿಸಲಿ. ನಗರ ಅಭಿವೃದ್ದಿ ಹೊಂದಲಿ .
- ಮ.ಯೋಗೀಶ್ ಆಚಾರ್ ,ಮಠದಕಣಿ , ಮಂಗಳೂರು

ಶುಕ್ರವಾರ, ಅಕ್ಟೋಬರ್ 24, 2008
ಮಂಗಳೂರಿಗೆ ಒಂದು ಆರ್ಟ್ ಗ್ಯಾಲರಿ ಬೇಕು..
ಎಲ್ಲ ದಿಕ್ಕಿನಲ್ಲೂ ಶರ ವೇಗದಲ್ಲಿ ಬೆಳೆಯುತ್ತಿರುವ ಮಂಗಳೂರಿಗೆ ಒಂದು ಆರ್ಟ್ ಗ್ಯಾಲರಿ ಬೇಕು. ಕಳೆದ ೨೦ ವರ್ಷಗಳಿಂದ ಇಲ್ಲಿನ ಕಲಾವಿದರು ಇಂಥದ್ದೊಂದು ವೇದಿಕೆಗಾಘಿ ಕಾಯುತ್ತಿದ್ದು, ಇನ್ನೂ ಕನಸು ನನಸಾಗಿಲ್ಲ.
ಪ್ರತೀ ವರ್ಷವೂ ಜಿಲ್ಲಾಡಳಿತ ಹಾಗೂ ಮಂತ್ರಿಗಳು ಆರ್ಟ್ ಗ್ಯಾಲರಿಯ ಬಗ್ಗೆ ಆಶ್ವಾಸನೆ ಕೊಡುತ್ತಲೇ ಇದ್ದಾರೆ. ಇನ್ನೇನು ಮುಂದಿನ ತಿಂಗಳು ಆರ್ಟ್ ಗ್ಯಾಲರಿ ಉದ್ಘಾಟನೆಯಾಗುತ್ತದೆ ಎಂಬ ಆಶ್ವಾಸನೆ ಕೂಡ ಒಂದೆರಡು ಬಾರಿ ಸಿಕ್ಕಿದೆ. ಆದರೆ ನಿಜದಲ್ಲಿ ಕನಸು ಕನಸಾಗಿಯೇ ಇದೆ.
ಕದ್ರಿಯಲ್ಲಿನ ಜಿಂಕೆ ಉದ್ಯಾನದ ಸಮೀಪ ಜಿಲ್ಲಾ ರಂಗಮಂದಿರದಲ್ಲಿ ಆರ್ಟ್ ಗ್ಯಾಲರಿಗೆ ಜಾಗ ಕೊಡುವುದಾಗಿ ಹೇಳಲಾಗಿತ್ತು. ಆದರೆ ಕೊನೆಗೆ ಜಿಲ್ಲಾ ರಂಗಮಂದಿರದ ವಿಷಯವೇ ನೆನೆಗುದಿಗೆ ಬಿದ್ದಿರುವುದರಿಂದ ಇದೀಗ ಆರ್ಟ್ ಗ್ಯಾಲರಿಯ ಬಗ್ಗೆ ಕೇಳುವವರೇ ಇಲ್ಲವಾಗಿದ್ದಾರೆ.
ವಿಜಯ ಕರ್ನಾಟಕದ `ಮುಂದೆ ಹೋಗೋಣ ಮಂಗಳೂರು' ಆಶಯದಲ್ಲಿ ಇದನ್ನೂ ಸೇರಿಸಿ ಸರಕಾರವನ್ನು ಎಚ್ಚರಿಸಬೇಕು.
ಗಣೇಶ್ ಸೋಮಯಾಜಿ,
ಕಾರ್ಯದರ್ಶಿ, ಆರ್ಟಿಸ್ಟ್ ಕಂಬಾಯಿನ್, ಮಂಗಳೂರು.

ಕಾಂಕ್ರೀಟ್ ರಸ್ತೆಗಳನ್ನು ಶುಚಿಯಾಗಿಡೋಣ
ಮಂಗಳೂರಿನ ಎಲ್ಲ ರಸ್ತೆಗಳು ಕಾಂಕ್ರೀಟೀಕರಣಗೊಳ್ಳುತ್ತಿರುವುದು ಸ್ವಾಗತಾರ್ಹ. ಆದರೆ ಕಾಂಕ್ರೀಟ್ ಹಾಸಿದ ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಬಹಳ ಬೇಸರದ ಸಂಗತಿ. ಉದಾಹರಣೆಗೆ ಕೊಟ್ಟಾರ ಚೌಕಿಯಿಂದ ಬಂಟ್ಸ್ ಹಾಸ್ಟೆಲ್ ವರೆಗಿನ ರಸ್ತೆ ಸಂಪೂರ್ಣ ಕಾಂಕ್ರೀಟೀಕರಣಗೊಂಡಿದೆ. ಎಷ್ಟೋ ಕೋಟಿ ರೂಪಾಯಿ ಖರ್ಚು ಮಾಡಿರುವ ಈ ರಸ್ತೆಗಳನ್ನು ಒಮ್ಮೆ ಬಂದು ನೋಡಿ, ರಸ್ತೆ, ಫುಟ್‌ಫಾತ್‌ಗಳು ಪೂರ್ತಿ ಕಸ ಕಡ್ಡಿ , ಕಲ್ಲು, ಮಣ್ಣುಮಯವಾಗಿದೆ. ರಸ್ತೆ ಮಧ್ಯದಲ್ಲಿ ಹಾಗೂ ಫುಟ್‌ಪಾತ್‌ನಲ್ಲಿ ಹುಲ್ಲು ಗಿಡಗಳನ್ನು ಶುಚಿಮಾಡದೆ ವರುಷಗಳೇ ಸಂದಿವೆ. ರಸ್ತೆಯ ಶೋಭೆ ಹೆಚ್ಚಿಸಲು ಬೆಳೆಸಿರುವ ಗಿಡಗಳೂ ಸರಿಯಾದ ಆರೈಕೆಯಿಲ್ಲದೆ ಒಟ್ಟಾರೆಯಾಗಿ ಬೆಳೆದು ನಿಂತಿವೆ. ಕಟ್ಟಡ ಕಾಮಗಾರಿಯ ಮಣ್ಣು, ಕಲ್ಲು, ಮರಳು ಎಲ್ಲವೂ ಫುಟ್‌ಪಾತ್‌ಗಳಲ್ಲಿ ರಾಶಿಯಾಗಿ ಬಿದ್ದಿವೆ. ಜನಸಾಮಾನ್ಯರು ತಮ್ಮ ಮನೆ ಅಥವಾ ಅಂಗಡಿಯ ತ್ಯಾಜ್ಯಗಳನ್ನು ಕಸದ ಬುಟ್ಟಿಯಲ್ಲಿ ಬಿಸಾಡದೆ ರಸ್ತೆಯ ಬದಿ ಎಸೆಯುವುದರಿಂದ ರಸ್ತೆಯ ಅಂದ ಕೆಡಿಸುವಲ್ಲಿ ಎತ್ತಿದ ಕೈಯಾಗಿರುತ್ತಾರೆ. ಆದ್ದರಿಂದ ಕಾಂಕ್ರೀಟೀಕರಣಗೊಂಡ ರಸ್ತೆಗಳನ್ನು ಸಂಬಂಧಪಟ್ಟ ಅಕಾರಿಗಳು, ನಾಗರಿಕರು, ಸಂಘಸಂಸ್ಥೆಗಳು, ಅಂಗಡಿ ಮಾಲೀಕರು ಎಲ್ಲರೂ ಸೇರಿ ಶುಚಿಯಾಗಿಡುವಲ್ಲಿ ಸಹಕರಿಸಬೇಕು.
ಮಂಗಳೂರಿನ ಮುನ್ನಡೆಗೆ-
* ಕಾಂಕ್ರೀಟ್ ರಸ್ತೆಗಳಲ್ಲಿ ಬಿದ್ದಿರುವ ಕಸಕಡ್ಡಿಗಳನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಇದಕ್ಕಾಗಿ ಕಾಯಂ ನೆಲೆಯಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು.
* ಫುಟ್‌ಪಾತ್‌ಗಳನ್ನು ಕಲ್ಲುಮಣ್ಣುಗಳ ರಾಶಿಯಿಂದ ಮುಕ್ತಗೊಳಿಸಬೇಕು.
* ಪ್ರತಿಯೊಂದು ಅಂಗಡಿ, ಕಟ್ಟಡದೆದುರು ಣ್ಣದಾದರೂ ಕಸದ ತೊಟ್ಟಿಯನ್ನು ಇಡುವಂತೆ ಒತ್ತಾಯಿಸಬೇಕು.
* ಯಾರಿಗೂ ತೊಂದರೆಯಾಗದಂತೆ ರಾತ್ರಿವೇಳೆ ರಸ್ತೆಗಳನ್ನು ಸ್ವಚ್ಛಗೊಳಿಸುವುದು ಸೂಕ್ತ.
* ಈ ಕಾರ್ಯಕ್ಕೆ ನಾಗರಿಕರು, ಸಂಘಸಂಸ್ಥೆಗಳು, ಜಾಹೀರಾತುದಾರರು ಮುಂದೆಬಂದರೆ ನಮ್ಮ ರಸ್ತೆಗಳು ಸುಂದರವಾಗಿಯೂ, ಶುಚಿಯಾಗಿಯೂ ಸುಸ್ಥಿತಿಯಲ್ಲಿರಬಹುದು.
ನಾಗರಾಜ್ ಶೆಟ್ಟಿ,
ಶ್ರೀಸಾಯಿ ವೈಂಡರ್‍ಸ್
ಇನ್‌ಫೋಸಿಸ್ ಎದುರುಗಡೆ
ಕೊಟ್ಟಾರ, ಮಂಗಳೂರು

ಮುನ್ನಡೆಯ ಹೆಜ್ಜೆ ಗುರುತುಗಳು
*ಸುರತ್ಕಲ್ ಎನ್‌ಐಟಿಕೆಯನ್ನು ಐಐಟಿ ಮಟ್ಟಕ್ಕೇರಿಸುವುದು. ಜತೆಗೆ ಜಿಲ್ಲೆಯಲ್ಲೊಂದು ಸರಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವುದು.
*ಜಿಲ್ಲೆಯಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳ , ಅಲ್ಲಿರುವ ವಿವಿಧ ಕೋರ್ಸ್‌ಗಳ ಮಾಹಿತಿ/ಸ್ಪಷ್ಟ ಚಿತ್ರಣ ಆಸಕ್ತರಿಗೆ ಯಾವುದೇ ಅಡೆತಡೆಯಿಲ್ಲದೆ ಒಂದೆಡೆ ಸಿಗುವಂತಿರಬೇಕು.
*ಬೆಂಗಳೂರಿನಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ಕನಿಷ್ಠ ಎರಡರಿಂದ ನಾಲ್ಕು ಗಂಟೆಗಳು ಬೇಕಾಗುತ್ತವೆ. ಮುಂದೊಂದು ದಿನ ಮಂಗಳೂರಿನಲ್ಲಿ ಹಾಗಾಗದಿರಲು ಅತ್ಯಂತ ಯೋಜಿತ ಸಾರಿಗೆ
ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು.
*ಮಂಗಳೂರು ನಗರದ ಮೂಲ ಸೌಕರ್ಯ, ಸೌಲಭ್ಯಗಳಿಗಾಗುವ ಒತ್ತಡವನ್ನು ತಪ್ಪಿಸುವುದಕ್ಕಾಗಿ ಸಮೀಪದ ಪಟ್ಟಣಗಳನ್ನು ( ಬಿ.ಸಿ.ರೋಡ್, ಪುತ್ತೂರು, ಬೆಳ್ತಂಗಡಿ, ಮೂಡುಬಿದರೆ ಇತ್ಯಾದಿ) ಅಭಿವೃದ್ಧಿಗೊಳಿಸುವುದು. ಈ ಪಟ್ಟಣಗಳಲ್ಲಿ ಬಡಾವಣೆಗಳ ನಿರ್ಮಾಣಕ್ಕೆ ಉತ್ತೇಜನ ನೀಡುವುದು.
*ಮಂಗಳೂರನ್ನು ಸುಲಲಿತವಾಗಿ ತಲುಪುವಂತಾಗಲು ಈ ಪಟ್ಟಣಗಳಿಂದ ಮಂಗಳೂರಿಗೆ ಉತ್ತಮ ಸಂಪರ್ಕ ವ್ಯವಸ್ಥೆ.
*ಧಾರ್ಮಿಕ ಮುಖಂಡರು, ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳ ಧುರೀಣರು, ರಾಜಕೀಯ ನಾಯಕರು ಒಂದೆಡೆ ಸೇರಿ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷಗಳಲ್ಲಿ ಯಾವುದೇ ರೀತಿಯ ಬಂದ್; ಮುಷ್ಕರಗಳಿಗೆ ಬಿಲ್‌ಕುಲ್ ಬೆಂಬಲ ನೀಡದಿರಲು ನಿರ್ಧರಿಸುವುದು.
*ನಗರದ ಎಲ್ಲಾ ಕಾಲೇಜ್‌ಗಳ ವಿದ್ಯಾರ್ಥಿಗಳಿಗೆ ಬೈಸಿಕಲ್ ಮಾತ್ರ ಬಳಸಲು ಅನುಮತಿಸುವುದು. (ಮಣಿಪಾಲ ಎಂಐಟಿ ಕ್ಯಾಂಪಸ್‌ನಲ್ಲಿ ಈಗಾಗಲೇ ಈ ಕ್ರಮ ಚಾಲ್ತಿಯಲ್ಲಿದೆ). ನಗರದೊಳಗೆ ಸೈಕಲ್ ಬಳಸಲು ಸಾರ್ವಜನಿಕರಿಗೆ ಉತ್ತೇಜನ ನೀಡುವುದು (ತೆರಿಗೆ ಕಡಿತ , ಮೂಲಸೌಕರ್ಯ/ಅನುದಾನಗಳನ್ನು ತಕ್ಷಣ ಒದಗಿಸುವುದು ಇತ್ಯಾದಿ). ತನ್ಮೂಲಕ ನಗರದೊಳಗೆ ವಾಹನ ದಟ್ಟಣೆ ನಿವಾರಣೆ.
*ಜಿಲ್ಲೆಯ ಎಲ್ಲಾ ಪ್ರವಾಸೀ ತಾಣಗಳಲ್ಲಿ , ತೀರ್ಥಕ್ಷೇತ್ರಗಳಲ್ಲಿ ಸಮೀಪದ ಇತರ ಸ್ಥಳಗಳ ಬಗ್ಗೆ ಮಾಹಿತಿ ನೀಡಲು ಪ್ರವಾಸೋದ್ಯಮ ಇಲಾಖೆಯ ಕೌಂಟರ್‌ಗಳನ್ನು ತೆರೆಯುವುದು.
ಇಂತಹ ಹಲವು ಉತ್ತೇಜಕ/ಅಭಿವೃದ್ಧಿ ಪೂರಕ ಅಂಶಗಳೊಂದಿಗೆ ಬುದ್ಧಿವಂತರಿರುವ ಮಂಗಳೂರು ಮಾದರಿ ನಗರ / ಮಾದರಿ ಜಿಲ್ಲೆಯಾಗಿ ರೂಪುಗೊಳ್ಳುವುದು.
-ರಾಜೇಂದ್ರ ಕೃಷ್ಣ ,
ಉಪಪ್ರಾಂಶುಪಾಲರು,
ಗೇರುಕಟ್ಟೆ, ಬೆಳ್ತಂಗಡಿ.

ಮೀನುಗಾರಿಕೆ ಅಭಿವೃದ್ಧಿ ಅಭಿಯಾನ ಮುಂದುವರಿಯಲಿ
ರಾಜ್ಯದ ಅಭಿವೃದ್ಧಿಯಲ್ಲಿ ಮೀನುಗಾರಿಕೆ ತನ್ನದೆ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಆದರೆ ಮೀನುಗಾರರು ಮತ್ತು ಮೀನುಗಾರಿಕೆ ಬಂದರುಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ನಿರ್ಲಕ್ಷ್ಯ ಮನೋಭಾವ ತಾಳಿದೆ. ಈ ನಿಟ್ಟಿನಲ್ಲಿ ಸರಕಾರದ ಗಮನ ಸೆಳೆಯಲು ಕರಾವಳಿಯ ಸಮಗ್ರ ಮೀನುಗಾರಿಕೆ ಅಭಿವೃದ್ಧಿ ದೃಷ್ಟಿಯಿಂದ ವಿಜಯ ಕರ್ನಾಟಕ ಆರಂಭಿಸಿರುವ ಅಭಿಯಾನ ಶ್ಲಾಘನೀಯ. ಪತ್ರಿಕೆಯ ಇಂತಹ ಕ್ರಾಂತಿಕಾರಕ ಅಭಿಯಾನವು ಇನ್ನು ಮುಂದುವರಿದು ಮೀನುಗಾರಿಕೆ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಸಮಗ್ರ ಚಿತ್ರಣವನ್ನು ನೀಡಿ, ಸರಕಾರ ಈ ದಿಶೆಯಲ್ಲಿ ಕೆಲವೊಂದು ದಿಟ್ಟ ನಿರ್ಧಾರವನ್ನು ಕೈಗೊಳ್ಳುವಂತಾಗಬೇಕು.
ಮೀನುಗಾರಿಕೆ ಬಂದರು ಪ್ರದೇಶಗಳ ಸಂಪರ್ಕ ರಸ್ತೆಗಳ ಸ್ಥಿತಿಗತಿ, ನೈರ್ಮಲ್ಯ ವ್ಯವಸ್ಥೆ, ಕುಡಿಯುವ ನೀರು ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಮಹಿಳಾ ಮೀನುಗಾರರ ಸಮಸ್ಯೆ, ಶೀತಲೀಕರಣ ವ್ಯವಸ್ಥೆ ಮೊದಲಾದುವುಗಳ ಬಗ್ಗೆ ಸಮಗ್ರ ಮಾಹಿತಿ ನೀಡಿ, ಈ ಸಮಸ್ಯೆಗಳ ಸುಧಾರಣೆಗೆ ಕೈಗೊಳ್ಳಬಹುದಾದ ಕ್ರಮಗಳನ್ನು ಒದಗಿಸಿದರೆ ಉತ್ತಮ ಎನ್ನುವುದು ನನ್ನ ಅಭಿಪ್ರಾಯ. ಅಲ್ಲದೆ ಸರಕಾರ ಮೀನುಗಾರಿಕೆ ಕ್ಷೇತ್ರಕ್ಕೆ ನಿಗದಿಪಡಿಸಿದ ಅನುದಾನವನ್ನು ಹೆಚ್ಚಿಸಿ ಮೀನುಗಾರಿಕೆಗೆ ಪ್ರೋತ್ಸಾಹ ನೀಡಿದರೆ ಮೀನುಗಾರರ ಬಾಳು ಹಸನಾಗಲು ಸಾಧ್ಯ. ಆಳ ಸಮುದ್ರ ಮೀನುಗಾರಿಕೆ ಬಗ್ಗೆ ಸರಕಾರ ದಿಟ್ಟ ನಿರ್ಧಾರ ಕೈಗೊಳ್ಳಬೇಕಾಗಿದೆ. ಅಳಿವೆ ಹೂಳೆತ್ತುವುದು, ಡೀಸೆಲ್ ಹಾಗೂ ಸೀಮೆ ಎಣ್ಣೆ ಸಬ್ಸಿಡಿ, ಸಂಕಷ್ಟ ಪರಿಹಾರ ನಿ ಮೊದಲಾದವುಗಳಿಗೆ ಹೆಚ್ಚಿನ ಅನುದಾನವನ್ನು ಮೀಸಲಿರಿಸಬೇಕು. ಅಲ್ಲದೆ ಸ್ಥಳೀಯ ಮೀನುಗಾರರ ಪ್ರಮುಖ ಬೇಡಿಕೆಗಳನ್ನು ಆದ್ಯತೆ ಮೇಲೆ ಈಡೇರಿಸಲು ಸರಕಾರ ಮುಂದಾಗಬೇಕಿದೆ.
ಈ ದಿಸೆಯಲ್ಲಿ ವಿಜಯ ಕರ್ನಾಟಕ ಆರಂಭಿಸಿದ ಅಭಿಯಾನ ಮುನ್ನುಡಿ ಬರೆದಿದ್ದು, ಇದು ನಿರಂತರವಾಗಿ ನಡೆದು ಮೀನುಗಾರರ ಸಮಸ್ಯೆಗಳು ಬಗೆಹರಿದು ಸಮಸ್ತ ಮೀನುಗಾರರ ಬಾಳಿನಲ್ಲಿ ಹೆಮ್ಮೆಯ ಪತ್ರಿಕೆಯಾಗಿ ವಿಜೃಂಭಿಸಲಿ ಎಂದು ಶುಭ ಹಾರೈಸುತ್ತೇನೆ.
-ಬಿ. ರಾಘವೇಂದ್ರ ಪೈ, ಗ್ರಾಮ ಪಂಚಾಯತ್ ಸದಸ್ಯರು, ಗಂಗೊಳ್ಳಿ.

ಮುಂದೆ ನಡೆಯುವ ಮಂಗಳೂರು
ಕರ್ನಾಟಕದ ಆರ್ಥಿಕ ರಾಜಧಾನಿಗೆ ಮೂಲ ಸೌಕರ್‍ಯಗಳ ಕೊರತೆ ಇದೆ. ಜೊತೆಗೆ ಪ್ರವಾಸಿ ತಾಣಗಳಿಗೆ ಪ್ರೋತ್ಸಾಹ ಕಡಲ ಕಿನರೆಗಳ ಆಧುನೀಕರಣ ಮಾಡಬೇಕಾಗಿದೆ. ಮೊದಲನೆಯದಾಗಿ ಮೂಲ ಸೌಕರ್‍ಯಗಳ ಅಭಿವೃದ್ಧಿ ಚತುಷ್ಪಥ ರಸ್ತೆಗಳ, ರಸ್ತೆಗಳ ಅಗಲೀಕರಣ , ಉನ್ನತೀಕರಣ ಆಧುನೀಕರಣ ಮಾಡಬೇಕು.
ಪ್ರತಿಯೊಂದು ನಗರವೂ ವೇಗವಾಗಿ ಬೆಳೆಯಬೇಕಾಗಿದೆ. ಮೂಲ ಸೌಕರ್‍ಯಗಳನ್ನು ಪೂರೈಸಿದರೆ ಅಭಿವೃದ್ಧಿಯಾಗುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಘಟಿಸುವ ಕೋಮು ಗಲಭೆ, ಬಂದ್, ಉಗ್ರರ ಹಾವಳಿಯಿಂದ ಅನೇಕ ಕೈಗಾರಿಕೋದ್ಯಮಿಗಳು ಹಿನ್ನಡೆಯುತ್ತಿದ್ದಾರೆ. ಇದು ಕಪ್ಪು ಚುಕ್ಕೆಯಾಗಿದೆ. ಇದಕ್ಕೆ ಕೋಮು ಸಾಮರಸ್ಯ, ಸಮಾನತೆ, ಸೌಹಾರ್ದತೆಯ ಕಾಪಾಡಬೇಕು. ಸಕಾಲದ ಪೊಲೀಸ್ ವ್ಯವಸ್ಥೆ ಬೇಕು.
ಕರ್ನಾಟಕದಲ್ಲಿ ವೇಗವಾಗಿ ಮುನ್ನಡೆದ ನಗರದ ಪೈಕಿ ಮಂಗಳೂರು ಮೊದಲನೆಯದಾಗಿದೆ. ದೇಶದ ಶ್ರೇಷ್ಠ ಹತ್ತು ಬಂದರುಗಳ ಪೈಕಿ ಮಂಗಳೂರು ಸೇರಿದೆ. ಈ ನಗರಕ್ಕೆ ಸಂಚಾರ ದಟ್ಟಣೆಗೆ ರೈಲ್ವೆಯನ್ನು ಸುಧಾರಣೆಗೊಳಿಸಬೇಕು.
ಒಂದು ಆರ್ಥಿಕ ಚೌಕಟ್ಟಿನ ನೆಲೆಯಲ್ಲಿ ಕಲ್ಪಿಸಿದಾಗ ಈ ನಗರದ (ಕರಾವಳಿ ಜಿಲ್ಲೆಗಳು) ಶೈಕ್ಷಣಿಕವಾಗಿ ಮುಂದುವರೆದಿದೆ.
ಈ ಸಾಲಿನ ಜನರ ಭಾಷೆ, ಶೈಲಿ, ಸಂಸ್ಕೃತಿಯಿಂದ ಹಾಗೂ ಹೊಟೇಲ್ ಉದ್ಯಮಿಗಳ ಮೂಲಕ ಜಗತ್ತಿದನ್ನು ಗುರುತಿಸುವಂತೆ ಮಾಡುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದ ಸಾಧನೆಯಿಂದ ಇಡೀ ದೇಶಕ್ಕೆ ದೇಶ ಗುರುತಿಸುತ್ತಿದೆ.
ಮೂಲ ಸೌಕರ್‍ಯಗಳನ್ನು ಕಲ್ಪಿಸಿ , ಅಡೆತಡೆಗಳನ್ನು ಶಾಶ್ವತವಾಗಿ ನಿವಾರಿಸಿದಾಗ ಬಂಡವಾಳದಾರರು, ಕೈಗಾರಿಕೋದ್ಯಮಿಗಳ ಆಗಮನದಿಂದ ಪ್ರವಾಸಿತಾಣಗಳು, ಸೇವಾ ಕ್ಷೇತ್ರ ಕೈಗಾರಿಕಾ ರಂಗದ ಅಭಿವೃದ್ಧಿಯಾಗುತ್ತಿದೆ. ಆದರೆ ಜಗತ್ತಿನ ಭೂಪಟದಲ್ಲಿ ಸ್ಥಾನ ಪಡೆಯುತ್ತದೆ.
ಕರ್ನಾಟಕದ ಪತ್ರಿಕೆಗಳ ಪೈಕಿ ಸಮಗ್ರ ಜ್ಞಾನಕ್ಕೆ ....ನೀಡುವ ವಿಜಯಕರ್ನಾಟಕ ವೊಂದಿದ್ದರೆ ನಗರ ಮುಂದುವರೆಯುತ್ತಿದೆ ಎಂಬ ಮಾತನ್ನು ಹೇಳಲೇ ಬೇಕು.
ಏಕೆಂದರೆ ಈ ಪತ್ರಿಕೆಯ ಸಕಾಲದ ಕಾರ್‍ಯಪ್ರವೃತ್ತತೆಯಿಂದ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆಯಿಂದಾಗಿ ಹೂಡಿಕೆದಾರರನ್ನು ಆಹ್ವಾನಿಸುವಂತೆ ಮಾಡುತ್ತಿದೆ. ಜೊತೆಗೆ ಕುಂದುಕೊರತೆಗಳನ್ನು ಪರಿಹರಿಸುವಲ್ಲಿ ದಿಟ್ಟ ಕಾರ್‍ಯತನದಿಂದ, ಚಾಣಕ್ಷತನ ಹೊಂದಿದೆ. ವಿಜಯ ಕರ್ನಾಟಕ ನಿಮಗೊಂದು ಅಭಿನಂದನೆಗಳು.
-ರಮಾನಂದ ಅಜೆಕಾರು.

ಮಂಗಳವಾರ, ಅಕ್ಟೋಬರ್ 21, 2008
ಕೃಷಿ ತೋ ನಾಸ್ತಿ ದುರ್ಭಿಕ್ಷಂ
ಶ್ರೀ ಪಡ್ರೆ (ಅಡಕೆ ಪತ್ರಿಕೆ ಸಂಪಾದಕ )
ಬಹುತೇಕ ಗ್ರಾಮಗಳಲ್ಲಿ ತೋಟಗಳು ಮಾರಾಟಕ್ಕಿವೆ. ಕೃಷಿ ಮತ್ತು ಹಳ್ಳಿಗಳ ಬಗ್ಗೆ ಅಪ್ಪಟ ಪ್ರೀತಿ ಇರುವ ರೈತರನ್ನೂ ಕೂಡ ನಗರಗಳ ದಾರಿ ಹಿಡಿಸುವ ಈ ಸ್ಥಿತಿ ವಿಶೇಷ. ದೇಶಕ್ಕೆ ಎದುರಾಗಲಿರುವ ಗಂಡಾಂತರಕಾರಿ ಕಾಯಿಲೆಯ ದಿಕ್ಸೂಚಿ.
ಉದ್ಯೋಗಾವಕಾಶ ಮತ್ತು ಅಭಿವೃದ್ಧಿಯ ಹೆಸರು ಹೇಳಿ ಬೃಹತ್ ಉದ್ದಿಮೆಗಳಿಗೆ ರತ್ನ ಕಂಬಳಿ ಹಾಸುವ ಸರಕಾರ ಇದರ ಅದೆಷ್ಟೋ ಪಟ್ಟು ಜನರಿಗೆ ನೆಮ್ಮದಿಯಲ್ಲಿ ಅನ್ನ ಕೊಡಬಲ್ಲ ಕೃಷಿ ಮತ್ತು ಹಳ್ಳಿಗಳ ಕಡೆ ಅದರ ಒಂದಂಶ ಗಮನ ಕೊಡದಿರುವುದು ಈ ಕಾಯಿಲೆ ಹಿಂದಿನ ಮೂಲ ಕಾರಣ.
ಏನಾಗಬೇಕು
೧. ಕೃಷಿಕರಿಗೆ ಸಬ್ಸಿಡಿಗಿಂತ ಬೆಳೆದ ಉತ್ಪನ್ನಗಳಿಗೆ ನ್ಯಾಯಬೆಲೆ ಸಿಗಲಿ.
೨. ಗ್ರಾಮೀಣ ಆರ್ಥಿಕತೆ ಹೆಚ್ಚಿಸುವ ಒಳ್ಳೆಯ ಉದ್ಯೋಗಾವಕಾಶ ಸೃಷ್ಟಿಸುವ ಕೃಷಿ ಸಂಬಂಧ ಕಿರುಉದ್ದಿಮೆ ಹೆಚ್ಚಿಸಬೇಕು.
೩. ನಮ್ಮ ಯೋಜನೆಗಳು ಪ್ರಮುಖವಾಗಿ ಹಳ್ಳಿಕೇಂದ್ರಿತವಾಗಿರಬೇಕು.
೪. ಹಳ್ಳಿಗಳು ಕಂಗೆಟ್ಟರೆ ಅನಂತರದ ಫಲವಾಗಿ ನಗರಗಳ ತಲೆನೋವು ಇನ್ನೆಷ್ಟೋ ಪಟ್ಟು ಹೆಚ್ಚುತ್ತದೆ ಎಂಬುದು ನೆನಪಿರಲಿ.
ಆಶಯಗಳು
೧. ಕೃಷಿ ಸಂಶೋಧನೆ ರೈತರ ಅಗತ್ಯವನ್ನು ಬಹುತೇಕ ಪರಿಗಣಿಸ್ತಾ ಇಲ್ಲ. ಇದು ಕೃಷಿ ಸ್ನೇಹಿಯಾಗಬೇಕಾಗಿದೆ.
೨. ರೈತರ ಕೃಷಿ ಭೂಮಿಯಲ್ಲಿ ಸಂಶೋಧನೆಗಳು ಆರಂಭವಾಗಲಿ.
೩. ನಮ್ಮ ಕೃಷಿ ಸಂಶೋಧನಾ ಕೇಂದ್ರಗಳ ಸಾರ್ಥಕತೆಗೆ ಸರಕಾರದಿಂದ ಬೇಸಿಕ್ ಸಂಬಳ ಕೊಟ್ಟು ಉಳಿದಿದ್ದನ್ನು ಸಂಶೋಧನೆಯ ತೋಟದಿಂದ ಬಂದ ಉತ್ಪನ್ನಗಳಿಂದ ಐನ್ ಆದಾಯ ಹಂಚಿಕೊಳ್ಳುವಂತೆ ವ್ಯವಸ್ಥೆ ಯಾಗಲಿ.
೪. ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟು, ನದಿ ತಡೆಯುವ ಕುರಿತು ಹೆಚ್ಚು ಆಲೋಚನೆಗಳು ನಡೆಯುತ್ತಿವೆ. ಇದಕ್ಕೆ ಮುಂಚೆ ನಮ್ಮ ಗುಡ್ಡ, ಜಮೀನು, ಮನೆಯಂಗಳದಲ್ಲಿ ತತ್‌ಸ್ಥಳದಲ್ಲಿ ನೀರಿಂಗಿಸುವ ಕುರಿತು ಆದ್ಯತೆ ಕೊಡಬೇಕು. ನೀತಿ ಮತ್ತು ಅನುಷ್ಠಾನ ಈ ನಿಟ್ಟಿನಲ್ಲಿ ನಡೆಯಬೇಕು.
೫. ತೆರೆದ ಬಾವಿಗಳ (ಓಪನ್ ವೆಲ್) ಕಾಲ ಆಗಿಹೋಗಿದೆ ಎಂಬ ಭ್ರಮೆ ಹಲವರಿಗಿದೆ. ಇದು ತಪ್ಪು. ಬಾವಿಗಳಿಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ.ರುವ ಇಲ್ಲಿ ಬೀಳುವ ಮಳೆಯಲ್ಲಿ ನೀರು

ಪ್ರಗತಿಯನ್ನು ಹಿಂದಕ್ಕೆ ಜಗ್ಗಿದ ಫೈನಾನ್ಸ್‌ಗಳು
ಕಳೆದ ದಶಕದಲ್ಲಿ ಕರಾವಳಿಯ ಬಡವರು ಹಾಗೂ ಮಧ್ಯಮ ವರ್ಗದ ಜನರು ಬೆವರು ಸುರಿಸಿ ಗಳಿಸಿದ ಹಣವನ್ನೆಲ್ಲ ಕೆಲವರು ಫೈನಾನ್ಸ್ ಹೆಸರಲ್ಲಿ ನುಂಗಿ ನೀರು ಕುಡಿದಿದ್ದಾರೆ.
`ಮುಂದೆ ಹೋಗೋಣ ಮಂಗಳೂರು' ಲೇಖನ ಮಾಲೆಯಲ್ಲಿ ಇಂಥ ವಿಷಯದ ಬಗ್ಗೆ ಒಂದಿಷ್ಟು ಗಮನ ಸೆಳೆಯಬೇಕು. ಖಾಸಗಿ ಫೈನಾನ್ಸ್ ಹೆಸರಿನಲ್ಲಿ ಪ್ರತಿಷ್ಠಿತರ ಮುಖವಾಡದಲ್ಲಿ ಇರುವ ಕೆಲವು ಲೇವಾದೇವಿ ವ್ಯವಹಾರಸ್ಥರು ಬಡವರ ಹಣವನ್ನು ನುಂಗಿ ಈಗಲೂ ಪ್ರತಿಷ್ಠಿತರಾಗಿಯೇ ಇದ್ದಾರೆ. ಇಂಥವರಿಗೆ ಕೆಲವು ಪತ್ರಿಕೆಗಳ ಬೆಂಬಲ ಕೂಡ ಇದೆ.
ಹಣಕಾಸು ಸಂಸ್ಥೆಗಳು ಮಾಡಿದ ವಂಚನೆ ಎಷ್ಟು ತೀವ್ರವಾಗಿದೆ ಎಂದರೆ ಮಗಳ ಮದುವೆಗೆಂದು ಜೀವಮಾನವಿಡೀ ಸಂಪಾದಿಸಿದ ಹಣವನ್ನು ಫೈನಾನ್ಸ್‌ಗಳಲ್ಲಿ ಹೂಡಿದವರು ಕೊನೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ವಿಆರ್‌ಎಸ್ ಪಡೆದು ಬಂದ ಹಣವನ್ನು ಫೈನಾನ್ಸ್‌ಗಳಿಗೆ ಹಾಕಿ ನಿವೃತ್ತಿ ಜೀವನದಲ್ಲಿ ನ್ಯಾಯಾಲಯಕ್ಕೆ ಓಡಾಟ ಮಾಡುವುದನ್ನೇ ಹೊಸ ಕಾಯಕವನ್ನಾಗಿಸಿಕೊಂಡವರೂ ಇದ್ದಾರೆ.
ಠೇವಣಿ ಪಡೆದುಕೊಳ್ಳುವಾಗ ಸುಂದರ ಕನಸುಗಳನ್ನು, ಏನೆಲ್ಲ ಆಶ್ವಾಸನೆಗಳನ್ನು ನೀಡಿದ ಫೈನಾನ್ಸ್ ಮಾಲೀಕರು ಕೊನೆಗೆ ಲಾಸ್ ಆಯಿತು ಎಂದು ಕೈ ಎತ್ತಿಬಿಟ್ಟರು. ಕೆಲವೇ ಕೆಲವು ಮಠಾಶರು, ಶ್ರೀಮಂತರ ಹಣವನ್ನು ರಾತ್ರೋರಾತ್ರಿ ಹಿಂದಿರುಗಿಸಿದರೂ ಬಡವರ ಹಣವನ್ನು ಸಂಪೂರ್ಣ ಹಿಡಿಸಿದ್ದಾರೆ.
ಬಡವರ ಬಗ್ಗೆ ಕಣ್ಣೀರು ಸುರಿಸುವ ರಾಜಕೀಯ ಪಕ್ಷಗಳು ಇಂಥದ್ದೊಂದು ಮಹಾ ವಂಚನೆಯ ಬಗ್ಗೆ ಚಕಾರ ಮಾತಾಡುವುದಿಲ್ಲ. ಗ್ರಾಹಕರ ನ್ಯಾಯಾಲಯದ ತೀರ್ಪುಗಳು ಅನುಷ್ಠಾನಗೊಳ್ಳುತ್ತಿಲ್ಲ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸುವ ವೇದಿಕೆಗಳೇ ಇಲ್ಲವಾಗಿವೆ.
ಕರಾವಳಿಯ ಬ್ಯಾಂಕ್‌ಗಳು ಉತ್ತಮ ಹೆಸರನ್ನು ಮಾಡಿದರೂ, ಫೈನಾನ್ಸ್ ಎಂಬುದು ಈಗಲೂ ಸಜ್ಜನರು ಚರ್ಚೆ ಮಾಡುವ ಸಂಗತಿಯಾಗಿಲ್ಲ. `ಮುಂದೆ ಹೋಗೋಣ ಮಂಗಳೂರು' ಆಂದೋಲನದಲ್ಲಿ ಈ ವಿಷಯದ ಮೇಲೂ ಬೆಳಕು ಚೆಲ್ಲಿದರೆ ಜನರಿಗೆ ಒಂದು ಉಪಯಕ್ತ ಎಚ್ಚರಿಕೆಯಾದೀತು.
-ಕೆ. ಎಸ್.ಎ. ಪೈ
ಮಂಗಳೂರು
ಮೆಗಾ ಊರು ಆಗಲಿ
ನಮ್ಮ ಮಂಗಳೂರು ನಮ್ಮ ಬೆಂಗಳೂರು ಆಗಿ ಮುನ್ನಡೆ ಸಾಸಿ ಮೆಗಾ ಊರು ಆಗಬೇಕಾದರೆ ಕರಾವಳಿ ಪ್ರದೇಶ ಅಭಿವೃದ್ಧಿಗೆ ಪೂರಕವಾಗಿ ಪಡುಬಿದ್ರೆ ಬಳಿ ಎಲ್ಲ ಸೌಕರ್ಯಗಳಿರುವ ಸುಂದರ ವಿಶಾಲ ಖಾಸಗಿ ಮತ್ತು ಸರಕಾರಿ ಬಸ್ ನಿಲ್ದಾಣ ಸ್ಥಾಪಿಸುವುದು ತುರ್ತು ಅಗತ್ಯ. ಅಲ್ಲಿಂದಲೇ ಮುಂದೆ ಹೋಗೋಣ- ಮಂಗಳೂರಿಗೆ, ಮೆಗಾ ಊರಿಗೆ. ಈ ಸುದ್ದಿ ಮೊದಲು ತಲುಪಲಿ ಬೆಂಗಳೂರಿಗೆ.
-ಪಿ. ಬಾಲಕೃಷ್ಣ ರಾವ್, ಮುದರಂಗಡಿ

ಸೋಮವಾರ, ಅಕ್ಟೋಬರ್ 20, 2008
ವಿಶಾಲ ರಸ್ತೆಗಳ ಅಗತ್ಯವಿದೆ
ತುಂಬೆ ಬಳಿ ನೇತ್ರಾವತಿ ನದಿಗೆ ೪೦ ಕೋಟಿ ರೂ. ವೆಚ್ಚದ ಹೊಸ ವೆಂಟೆಡ್ ಡ್ಯಾಂಗೆ ಅಣೆಕಟ್ಟು ನಿರ್ಮಿಸುವ ಕಾಮಗಾರಿ ಶೀಘ್ರ ಆರಂಭಿಸಲಾಗುವುದು.
ಹೊಸ ಪ್ರಯೋಗಗಳನ್ನು ಮಾಡಿ ನಾಡಿನ ಜನತೆಯ ಮನೆ ಮಾತಾಗಿರುವ ವಿಜಯ ಕರ್ನಾಟಕ ಪತ್ರಿಕೆಯು ಕರಾವಳಿ ಜನಜೀವನದ ಅವಿಭಾಜ್ಯ ಅಂಗವಾಗಿ ಬೆಳೆಯುತ್ತಿದೆ. ಇದೀಗ ಕರಾವಳಿಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ÊÜááí¨æ ÖæãàWæãà ÊÜáíWÜÙÜãÃÜáಯೋಜನೆ ರೂಪಿಸಿರುವುದು ಅದರ ಸಾಮಾಜಿಕ ಬದ್ಧತೆಯನ್ನು ತೋರಿಸುತ್ತದೆ.
ಮಂಗಳೂರಿನ ಅಭಿವೃದ್ಧಿಗೆ ಮುಖ್ಯವಾಗಿ ಆಗಬೇಕಿರುವುದೇ ಮೂಲ ಸೌಲಭ್ಯ ಹೆಚ್ಚಳ. ಬೆಂಗಳೂರಿನಂತೆ ಮಂಗಳೂರನ್ನು ಅಭಿವೃದ್ಧಿಪಡಿಸಲು ಮೊದಲು ವಿಶಾಲ ರಸ್ತೆಗಳ ಅಗತ್ಯವಿದೆ. ಆದರೆ ಹಳೆಯ ರಸ್ತೆಗಳು ಅಭಿವೃದ್ಧಿ ಗೆ ಹಲವಾರು ಅಡಚಣೆಗಳಿವೆ. ಇನ್ನಾದರೂ ನಾವೆಲ್ಲಾ ಸೇರಿ, ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು, ಜಿಲ್ಲಾ ಮುಖ್ಯ ರಸ್ತೆಗಳು, ಗ್ರಾಮೀಣ ರಸ್ತೆಗಳ ಅಭಿವೃದ್ಧಿ ನಡೆಸಬೇಕಾಗಿದೆ.
ಕರಾವಳಿ ಪ್ರದೇಶದಲ್ಲಿ ವರ್ಷಕ್ಕೆ ೪೦೦ ಸೆಂ.ಮೀ.ನಷ್ಟು ಮಳೆಯಾದರೂ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಬರವಿರುತ್ತದೆ. ಆದ್ದರಿಂದ ಮುಂದಿನ ೫೦ ವರ್ಷಗಳ ದೃಷ್ಟಿಯಿಂದ ಮಂಗಳೂರಿಗೆ ಹಾಗೂ ಜಿಲ್ಲೆಗೆ ಕುಡಿಯುವ ನೀರಿನ ಯೋಜನೆ ರೂಪಿಸಬೇಕಾಗಿದೆ. ಮರೋಳಿ ಗ್ರಾಮದ ಪಂಪ್‌ವೆಲ್ ಬಳಿ ವಿಸ್ತಾರವಾದ ಸರ್ವಿಸ್ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಬಿಜೈ ಮಾರುಕಟ್ಟೆ, ದೇರೆಬೈಲು ಮಾರುಕಟ್ಟೆ, ಉರ್ವ ಮಾರುಕಟ್ಟೆ, ಸುರತ್ಕಲ್ ಮಾರುಕಟ್ಟೆ, ಕೇಂದ್ರ ಮಾರುಕಟ್ಟೆಯನ್ನು ಆಧುನಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಹಂಪನಕಟ್ಟೆ ಹಳೆ ಬಸ್ ನಿಲ್ದಾಣದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ಮತ್ತು ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಾಂಪ್ಲೆಕ್ಸ್ ನಿರ್ಮಿಸಲಾಗುತ್ತಿದೆ.
ಮಂಗಳೂರು ನಗರಾಭಿವೃದ್ಧಿ ಪ್ರಾಕಾರದಿಂದ ಪದವು ಗ್ರಾಮದಲ್ಲಿ ೯.೮೧ ಎಕರೆ ಜಮೀನಿನಲ್ಲಿ ೧೨೭ ಮನೆ ನಿವೇಶನ ಹಾಗೂ ಮದ್ಯ ಮತ್ತು ಚೇಳಾರು ಗ್ರಾಮದಲ್ಲಿ ೬೫೦ ಎಕರೆ ಪೈಕಿ ೨೦೦ ಎಕರೆಯಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿತರಿಸಲಾಗುವುದು. ದೇರೆಬೈಲ್ ಗ್ರಾಮದ ಮುಡಾ ಕಚೇರಿ ಬಳಿ ಮೂರು ಕೋಟಿ ರೂ. ವೆಚ್ಚದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಿಸಲಾಗುವುದು.
ಕೃಷ್ಣ ಜೆ.ಪಾಲೆಮಾರ್,
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು.
.............................
ಮಂಗಳಾ ಕಾರ್ನಿಶ್ ರಸ್ತೆ ಶೀಘ್ರ ಅನುಷ್ಠಾನ ಅಗತ್ಯ
ಮಂಗಳೂರಿನ ಅಭಿವೃದ್ಧಿ ದೃಷ್ಟಿಯಲ್ಲಿ ÊÜááí¨æ ÖæãàWæãà ÊÜáíWÜÙÜãÃÜá ಪ್ರಯತ್ನ ಶ್ಲಾಘನೀಯ. ನಾನು ಈ ಮೊದಲೇ ಹೇಳಿದಂತೆ ನಗರದ ಅಭಿವೃದ್ಧಿಗೆ ಮೊದಲು ಇಲ್ಲಿಯ ವಾಹನ, ಜನ ನಿಬಿಡತೆ ಕಡಿಮೆ ಮಾಡಲೇಬೇಕು. ಎಲ್ಲ ಅಭಿವೃದ್ಧಿಯೂ ವ್ಯವಸ್ಥಿತವಾಗಿಯೇ ನಡೆಯಬೇಕು. ನಗರವನ್ನು ಹೊರ ವಲಯಕ್ಕೆ ವಿಸ್ತರಿಸಿದರೆ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ.
ಟ್ರಾಫಿಕ್ ಜಾಮ್ ಎಂಬುದು ಮಂಗಳೂರಿನ ಸದ್ಯದ ದೊಡ್ಡ ಸಮಸ್ಯೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ಮಂಗಳಾ ಕಾರ್ನಿಶ್ ರಸ್ತೆ ಯೋಜನೆ ಶೀಘ್ರ ಅನುಷ್ಠಾನಕ್ಕೆ ತರಬೇಕು. ಯಾವ ಕಾರಣಕ್ಕೂ ವಿಳಂಬವಾಗಬಾರದು. ಇದರ ಜತೆಗೆ ರಾಜ್ಯ ಸರಕಾರ ಪ್ರಸ್ತಾಪಿಸಿರುವ ಮೋನೊ ರೈಲು ಸಂಚಾರ ಆರಂಭಗೊಂಡರೆ, ಈಗಿನ ಬಸ್ಸುಗಳ ಜನ ಜಂಗುಳಿ ಕೂಡ ಕಡಿಮೆಯಾಗಬಹುದು. ಜನರು ಶೀಘ್ರ ಹಾಗೂ ನೆಮ್ಮದಿಯಾಗಿ ಪ್ರಯಾಣ ಬೆಳೆಸಬಹುದು.
ಮತ್ತೊಮ್ಮೆ ಹೇಳುತ್ತೇನೆ, ಮಂಗಳೂರು ನಗರ ಬೆಳೆದರಷ್ಟೇ ಸಾಲದು, ವ್ಯವಸ್ಥಿತವಾಗಿ ಬೆಳೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಸಹಕಾರದಿಂದ ರಸ್ತೆ, ಕುಡಿಯುವ ನೀರು, ಒಳಚರಂಡಿ, ಕಸ ವಿಲೇವಾರಿ, ನಗರದ ಸುಂದರೀಕರಣಕ್ಕೆ ಆದ್ಯತೆ ನೀಡುತ್ತಿದ್ದೇವೆ. ನಗರದ ಸರ್ವತೋಮುಖ ಅಭಿವೃದ್ಧಿ ನಿಟ್ಟಿನಲ್ಲಿ ಬಿ-೨ ನಗರವಾಗಿ ಅಭಿವೃದ್ಧಿಪಡಿಸಲು ಸರಕಾರಕ್ಕೆ ಮನವಿ ಮಾಡಿದ್ದೇವೆ.
ಗಣೇಶ ಹೊಸಬೆಟ್ಟು, ಮೇಯರ್, ಮಂಗಳೂರು
..........................
ಕಾರಿಡಾರ್ ಯೋಜನೆ ಕಲ್ಪನೆ ಅದ್ಭುತ
ವಿಜಯ ಕರ್ನಾಟಕದ ÊÜááí¨æ ÖæãàWæãà ÊÜáíWÜÙÜãÃÜá ಯೋಜನೆ ಗಮನಿಸಿದೆ. ಜಿಲ್ಲೆಯ ಸಮಗ್ರ ಮಾಹಿತಿ ಕೊಟ್ಟಿದ್ದೀರಿ. ಜತೆಗೆ ಮಂಗಳೂರಿನ ಅಭಿವೃದ್ಧಿ ಹೇಗೆ ಮಾಡಬಹುದು ಎಂಬ ಸಲಹೆ ನೀಡಿದ್ದೀರಿ. ಮಂಗಳೂರನ್ನು ಉತ್ತುಂಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಪತ್ರಿಕೆ ವಹಿಸಿರುವ ಜವಾಬ್ದಾರಿ, ಬದ್ಧತೆ ಅಭಿನಂದನೀಯ.
ಮಂಗಳೂರು- ಮಣಿಪಾಲ ಕಾರಿಡಾರ್ ಯೋಜನೆ ಕಲ್ಪನೆ ಅದ್ಭುತ. ಇದು ಅನುಷ್ಠಾನಕ್ಕೆ ಬಂದರೆ ಎರಡು ಪ್ರಮುಖ ಕೇಂದ್ರಗಳ ನಡುವಿನ ದೂರ ಕಡಿಮೆಯಾಗಲಿದೆ. ಈಗ ಮಂಗಳೂರಿನಿಂದ ಮಣಿಪಾಲಕ್ಕೆ ಹೋಗಲು ಒಂದೂವರೆಯಿಂದ ಎರಡು ಗಂಟೆ ಬೇಕಾಗಿದ್ದರೆ, ನೇರ ರಸ್ತೆ ಮಾಡಿದಲ್ಲಿ ಮುಕ್ಕಾಲು ಗಂಟೆಯಲ್ಲಿ ತಲುಪಬಹುದು. ಜತೆಗೆ, ನಡುವೆ ಬರುವ ಪ್ರದೇಶಗಳ ಅಭಿವೃದ್ಧಿಯೂ ಸಾಧ್ಯವಾಗಲಿದೆ.
ಈಗಾಗಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಕಾರದ ಪ್ರಥಮ ಸಭೆ ನಡೆಸಿದ್ದೇವೆ. ಡಿಸೆಂಬರ್‌ನೊಳಗೆ ಸಮಗ್ರ ಅಭಿವೃದ್ಧಿ ತಯಾರಿಸಿ ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇವೆ. ಡಿಸೆಂಬರ್ ಅಂತ್ಯದೊಳಗೆ ಕರಾವಳಿಯ ಎಲ್ಲ ರಸ್ತೆಗಳ ದುರಸ್ತಿಗೆ ಸೂಚನೆ ನೀಡಿದ್ದು, ಸ್ಥಳೀಯಾಡಳಿತಗಳು ಸಕಾರಾತ್ಮಕವಾಗಿ ಸ್ಪಂದಿಸಿ ಕಾರ್ಯೋನ್ಮುಖವಾಗಿವೆ.
ಮುಂದಿನ ದಿನಗಳಲ್ಲಿ ಮಂಗಳೂರು, ಉಡುಪಿ, ಕಾರವಾರದಲ್ಲಿ ಪ್ರಾಕಾರದ ಕಚೇರಿಗಳನ್ನು ತೆರೆಯುತ್ತೇವೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕರಾವಳಿಯನ್ನು ಪ್ರಗತಿ ಪಥದಲ್ಲಿ ಕೊಂಡೊಯ್ಯುತ್ತೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ.
ಬಿ.ನಾಗರಾಜ ಶೆಟ್ಟಿ, ಅಧ್ಯಕ್ಷರು, ಕರಾವಳಿ ಅಭಿವೃದ್ಧಿ ಪ್ರಾಕಾರ.

ಶನಿವಾರ, ಅಕ್ಟೋಬರ್ 18, 2008
ಮಂಗಳೂರಿನ ಮುನ್ನಡೆಗೆ ವಿ.ಕ. ನಡೆ
ಬನ್ನಿ ನಮ್ಮ ಜತೆ ಕೈ ಜೋಡಿಸಿ
೧೪-೧೦-೨೦೦೮ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಸಂಪಾದಕೀಯ
ನಮ್ಮ ಮಂಗಳೂರನ್ನು ನಾವಲ್ಲದೆ ಇನ್ನಾರು ಮುನ್ನಡೆಸಲು ಸಾಧ್ಯ?
ಬನ್ನಿ, ನಾವೆಲ್ಲರೂ ಸೇರಿ ಮಂಗಳೂರನ್ನು ಬದಲಾಯಿಸೋಣ. ಉತ್ತಮ ಮಂಗಳೂರಿನ ನಿರ್ಮಾಣಕ್ಕಾಗಿ, ನಿಮ್ಮ ಅಮೂಲ್ಯವಾದ ಸಲಹೆ ಹಾಗೂ ಪರಿಹಾರ ಸೂತ್ರಗಳನ್ನು ನಮಗೆ ಕಳುಹಿಸಿ. ಮಂಗಳೂರಿನ ಮುನ್ನಡೆಗೆ ವಿಜಯ ಕರ್ನಾಟಕದ ನಡೆ.
`ವಿಜಯ ಕರ್ನಾಟಕ'ದ ಕರೆಗೆ ಕರಾವಳಿಯ ಪ್ರಜ್ಞಾವಂತರು ಯಾವ ಪರಿ ಪ್ರತಿಕ್ರಿಯಿಸಲಾರಂಭಿಸಿದ್ದಾರೆಂದರೆ, ನಮ್ಮ ಫೋನ್, ಫ್ಯಾಕ್ಸ್, ಈ ಮೇಲ್‌ಗಳೆಲ್ಲ ಫುಲ್ ಎಂಗೇಜ್!
ಓದುಗರ ಸ್ಪಂದನವೆಂದರೇ ಹಾಗೆ. ಪತ್ರಿಕೆಯ ಮೇಲಿನ ನಿಮ್ಮ ಅಭಿಮಾನವೋ, ನೀವಿಟ್ಟಿರುವ ವಿಶ್ವಾಸವೋ, ಜನಮುಖಿ ಆಂದೋಲನಕ್ಕೆ ಬೆಂಬಲವೋ... ಅಂತೂ ಅದನ್ನು ಒಂದು ಪದದಲ್ಲಿ ವ್ಯಾಖ್ಯಾನಿಸಲಾಗುವುದಿಲ್ಲ. ನಮ್ಮ ಒಂದೊಂದು ಪ್ರಯತ್ನವನ್ನೂ ಅಷ್ಟೇ ಬೆರಗಿನಿಂದ ನೀವು ಸ್ವೀಕರಿಸುವ ಪ್ರೀತಿಯಿದೆಯಲ್ಲ. ಅದಕ್ಕೆ ಈ ವರೆಗೆ ಬೇರೆ ಸಾಟಿ ಸಿಕ್ಕಿಲ್ಲ.
ಈ ಬಾರಿಯೂ ಅದೇ ಪುನರಾವರ್ತನೆ.
ಹೌದು, ಸರಕಾರದ ಮುಂದೆ ನಾವು ಇಡುತ್ತಿರುವ `ಮುಂದೆ ಹೋಗೋಣ ಮಂಗಳೂರು' ಲೇಖನ ಸರಣಿಗೆ ಹಿಂದೆಂದೂ ಕಂಡರಿಯದ ರೀತಿಯ ಬೆಂಬಲ ವ್ಯಕ್ತವಾಗಿದೆ. ಮಂಗಳೂರು ಅಭಿವೃದ್ಧಿ ಬಗೆಗಿನ ಜನರ ನಿರೀಕ್ಷೆಗಳು ಅಷ್ಟಿರಬಹುದು. ಮಂಗಳೂರನ್ನು ಕಾಡುತ್ತಿರುವ ಸಮಸ್ಯೆಗಳು ಅಷ್ಟು ಗಾತ್ರದ್ದಿರಲೂಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಮೌಲ್ಯವನ್ನು ಸಾಬೀತುಪಡಿಸುವ ಹಂಬಲವೂ ಆಗಿರಬಹುದು. ಒಟ್ಟಾರೆ ಕರಾವಳಿ ಜನತೆಯ ಆಶಯ ಬೆಟ್ಟದಷ್ಟಿದೆ ಎಂಬುದಂತೂ ಸತ್ಯ.
ಅಂಥ ಆಶಯಗಳು ನಮ್ಮದೂ ಆಗಿವೆ. ಜವಾಬ್ದಾರಿಯುತ ಮಾಧ್ಯಮವಾಗಿ ಪ್ರಜೆಗಳ ಮನದಿಂಗಿತವನ್ನು ಪ್ರಭುತ್ವಕ್ಕೆ ತಲುಪಿಸುವ ಹೊಣೆಯ ಭಾಗವೇ ಈ ಸರಣಿ. ನಿರಂತರ ಹತ್ತು ದಿನ ಪ್ರಕಟವಾಗುವ ಪೂರ್ಣ ಪುಟದ ಈ ಸರಣಿಯಲ್ಲಿ ನಿಮ್ಮ ಆಶಯಗಳನ್ನು ಹೊಸ ಸರಕಾರಕ್ಕೆ ತಲುಪಿಸುವ, ಅದಕ್ಕೊಂದು ಉತ್ತರ ದೊರಕಿಸಿಕೊಡುವ ಗುರಿ ನಮ್ಮದು.
ಇದಕ್ಕಾಗಿಯೇ ಮಂಗಳೂರನ್ನು ಸುದೀರ್ಘ ಕಾಲದಿಂದ ಕಾಡುತ್ತಿರುವ ಸಂಕಷ್ಟಗಳ ಪಟ್ಟಿ ಮಾಡಲಾರಂಭಿಸಿದ್ದೇವೆ. ಸಮಸ್ಯೆಗಳು ನೂರಾರು. ಸಮಾಜವೆಂದ ಮೇಲೆ ಅದು ಸಹಜ. ಅದರಲ್ಲೂ ತುರ್ತಾಗಿ ಆಗಲೇಬೇಕಾದದ್ದು ಕೆಲವಿರಬಹುದು. ಅಂಥ ತುರ್ತುಗಳ ಬಗ್ಗೆ ಆಡಳಿತ, ಅಕಾರಶಾಹಿಯ ಗಮನ ಸೆಳೆದರೆ ಪರಿಹಾರ ಕಾರ್ಯಕ್ಕಿಳಿಯಲು ಸುಲಭವಾಗಬಹುದು.
ನಮ್ಮ ಅರಿವಿಗೆ ನಿಲುಕಬಹುದಾದದ್ದರ ಜತೆಗೆ ನೀವು ಗುರುತಿಸಿಕೊಡುವ ಅಂಶಗಳನ್ನೂ ಅಳವಡಿಸಲು ನಾವು ಬದ್ಧ. ನಿಮ್ಮದೇ ಆಶಯ, ನಿಮ್ಮದೇ ನಿರೀಕ್ಷೆಗಳು. ನಾವು ಧ್ವನಿಯಷ್ಟೆ. ನಾವು-ನೀವು ಸೇರಿ ಮಂಡಿಸುವ ಹಕ್ಕೊತ್ತಾಯವನ್ನು ಖಂಡಿತಾ ಸರಕಾರ ಮಾನ್ಯ ಮಾಡಬೇಕು, ಮಾಡುತ್ತದೆ. ಜನಾಶಯವನ್ನು ಆಧರಿಸಿಯೇ ಸರಕಾರದ ಕಾರ್ಯಯೋಜನೆ ರೂಪುಗೊಳ್ಳಬೇಕು. ಆಗ ಮಾತ್ರ ಅಭಿವೃದ್ಧಿಗೊಂದು ಸ್ಪಷ್ಟ ದಿಕ್ಕು ದೊರೆಯಲು ಸಾಧ್ಯ. ಹಾಗಾದರಷ್ಟೇ ಸಮಸ್ಯೆಗಳಿಂದ ಕರಾವಳಿ ಮುಕ್ತವಾಗುತ್ತದೆ ಎಂಬ ನಂಬುಗೆ ನಮ್ಮದು.
`ಮುಂದೆ ಹೋಗೋಣ ಮಂಗಳೂರು' ಈ ಸಂಕಲ್ಪಕ್ಕೆ ನಿಮ್ಮದೇ ಉಕ್ತಿ, ನೀವೇ ಶಕ್ತಿ.
ಬನ್ನಿ ಜನಮುಖಿ ಈ ಆಂದೋಲನದೊಂದಿಗೆ ಸರಕಾರಕ್ಕೆ ನಮ್ಮ ಅಹವಾಲು ಸಲ್ಲಿಸೋಣ.
-ಸಂಪಾದಕ

ಮುನ್ನಡೆಗೆ ನಿಮ್ಮ ಕೊಡುಗೆ
೧೩-೧೦-೨೦೦೮ರಂದು ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಸಂಪಾದಕೀಯ
ಮಂಗಳೂರು ಇಂದು ದೇಶದ ನಕಾಶೆಯಲ್ಲಿ ಕಂಗೊಳಿಸುತ್ತಿರುವ ಕರಾವಳಿ ಪ್ರದೇಶ. ದಕ್ಷಿಣ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜಧಾನಿಯೇತರ ಮಹಾನಗರ. ಮಂಗಳೂರಿಗೆ ಇನ್ನೊಂದು ಬೆಂಗಳೂರಾಗಿ ರೂಪುಗೊಳ್ಳುವ ಅಥವಾ ಅದಕ್ಕಿಂತ ದೊಡ್ಡದಾಗಿ ಬೆಳೆಯುವ ಎಲ್ಲಾ ಸಾಮರ್ಥ್ಯವೂ ಇದೆ. ಪ್ರವರ್ಧಮಾನಗೊಳ್ಳುತ್ತಿರುವ ಐಟಿ ಉದ್ಯಮ, ಅಂತಾರಾಷ್ಟ್ರೀಯ ಪ್ರತಿಭೆಗಳ ಮಹಾಪೂರ, ಉತ್ಕೃಷ್ಟ ವೈದ್ಯಕೀಯ ಸೌಲಭ್ಯಗಳು, ಉನ್ನತ ಶಿಕ್ಷಣ ಸಂಸ್ಥೆಗಳು, ಹೇರಳ ಬಂದರು ಸಂಪನ್ಮೂಲಗಳು, ಧಾರಾಳ ಪ್ರವಾಸೋದ್ಯಮ ಸದವಕಾಶಗಳು, ಬ್ಯಾಂಕಿಂಗ್ ಹೋಟೇಲ್‌ಗಳ ತವರೂರಲ್ಲಿ ಏನುಂಟು ಏನಿಲ್ಲ? ಇಲ್ಲಿ ಎಲ್ಲವೂ ಪುಷ್ಕಳ ಎಲ್ಲವೂ ಸಮೃದ್ಧ.
ಹಾಗಾದರೆ ನಮ್ಮನ್ನು ತಡೆಯುತ್ತಿರುವುದೇನು?
ದುರದೃಷ್ಟವಶಾತ್, ಮಂಗಳೂರು ಇತ್ತೀಚಿನ ದಿನಗಳಲ್ಲಿ ಬೇರೆಯದೇ ಕಾರಣಗಳಿಗಾಗಿ ದೇಶದ ಗಮನ ಸೆಳೆಯುತ್ತಿದೆ. ನಮ್ಮದೇ ನಾಡನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಬೇಕಾದ ನಾವು ಪರಸ್ಪರ ಅಪನಂಬುಗೆಯ ಕಾದಾಟದಲ್ಲಿ ಸಮಯ ಪೋಲು ಮಾಡುತ್ತಿದ್ದೇವೆ. ಈ ಗದ್ದಲ ಈ ಗೊಂದಲ ಈ ಗಲಿಬಲಿಗಳಿಗೆಲ್ಲ ಇನ್ನು ಪೂರ್ಣ ವಿರಾಮ ಬೀಳಬೇಕಾಗಿದೆ.
ನಮ್ಮ ಮಂಗಳೂರನ್ನು ನಾವಲ್ಲದೆ ಇನ್ನಾರು ಮುನ್ನಡೆಸಲು ಸಾಧ್ಯ?
ಈ ಭಾಗದ ಅಭಿವೃದ್ಧಿ ಅಜೆಂಡಾ ಮುಂದಿಟ್ಟು ವಿಜಯ ಕರ್ನಾಟಕ ನಿರಂತರವಾಗಿ ಸರಕಾರದ ಗಮನ ಸೆಳೆಯುತ್ತಲೇ ಬಂದಿದೆ. ಅದಕ್ಕೊಂದು ಸಮಗ್ರತೆ ಮತ್ತು ತಾರ್ಕಿಕ ಅಂತ್ಯ ಕೊಡುವ ನಿಟ್ಟಿನಲ್ಲಿ ಇದೊಂದು ನಮ್ಮ ಪ್ರಾಮಾಣಿಕ ಪ್ರಯತ್ನ. ಇದಕ್ಕೆ ನಿಮ್ಮ ಕೊಡುಗೆಯೇ ಮುಖ್ಯವಾಗುತ್ತದೆ. ಹೊಸದಾಗಿ ಬಂದ ಸರಕಾರವೂ ಕರಾವಳಿ ಅಭಿವೃದ್ಧಿಯ ಉತ್ಸಾಹ ತೋರಿಸುತ್ತಿರುವುದು ಉತ್ತಮ ಬೆಳವಣಿಗೆ. ಆದರೆ ಎಲ್ಲೋ ಒಂದು ಕಡೆ ಇದು ಆರಂಭ ಶೂರತ್ವ ಆಗುವ ಆತಂಕವೂ ಇದೆ. ಹಾಗೆಂದು ಕೈ ಕಟ್ಟಿ ಕುಳಿತರೆ ಬದಲಾವಣೆ ತನ್ನಿಂತಾನೆ ಆಗುವುದಿಲ್ಲ. ಬನ್ನಿ ನಮ್ಮೆಲ್ಲ ವೈಮನಸ್ಸುಗಳನ್ನು ಬದಿಗೊತ್ತಿ ಮಂಗಳೂರಿನ ಮುನ್ನಡೆಯ ಚಿಂತನೆ ಮಾಡೋಣ. ಸರಕಾರ ನಮಗಾಗಿ ಏನು ಮಾಡಬೇಕು ಎನ್ನುವುದನ್ನು ಹೇಳೋಣ.
ಇದಕ್ಕಾಗಿ `ವಿಜಯ ಕರ್ನಾಟಕ' ಸೃಷ್ಟಿಸುತ್ತಿರುವ ವೇದಿಕೆಯೇ `ಮುಂದೆ ಹೋಗೋಣ ಮಂಗಳೂರು'. ಇಲ್ಲಿ ಆಶಯ ನಮ್ಮೆಲ್ಲರದು. ಈ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ಮಾತ್ರ ಸರಕಾರದ್ದು. ವಿಜಯ ಕರ್ನಾಟಕದ ಈ ಮಹತ್ವಾಕಾಂಕ್ಷಿ ಮಾಲಿಕೆಯ ಹಿಂದೆ ಜನರಿಂದ ಬಂದ ಸರಕಾರ ಜನರಿಗಾಗಿ ಕೆಲಸ ಮಾಡಲು ಪ್ರೇರಕ ಶಕ್ತಿಯಾಗಬೇಕು ಎನ್ನುವ ಆಶಯ ಇದೆ. ಮಂಗಳೂರಿನ ಮೂಲಸೌಕರ್ಯ ಅಭಿವೃದ್ಧಿ, ಸ್ವಾಸ್ತ್ಯ, ಶಿಕ್ಷಣ, ಕೈಗಾರಿಕೆ, ಮೀನುಗಾರಿಕೆ, ಪ್ರವಾಸೋದ್ಯಮ, ಉದ್ಯಮ ಕ್ಷೇತ್ರಗಳಲ್ಲಿನ ಸಮಸ್ಯೆಗಳು, ನಕ್ಸಲ್, ಭಯೋತ್ಪಾದನೆಯ ಪಿಡುಗು ಮತ್ತು ಸೌಹಾರ್ದತೆ-ಸುಭದ್ರತೆ ಬಗ್ಗೆ ಸರಕಾರದ ಗಮನ ಸೆಳೆಯುವುದು ಇದರ ಉದ್ದೇಶ.
ಹಾಗೆ ನೋಡಿದರೆ ಇದೆಲ್ಲ ನಿಮ್ಮದೇ ಹಕ್ಕೊತ್ತಾಯ. ಇಲ್ಲಿ ನಮ್ಮ ಕೆಲಸ ಕಡಿಮೆ. ಇಲ್ಲೇನಿದ್ದರೂ ನಿಮ್ಮ ಧ್ವನಿಯೇ ಕೇಳಬೇಕು. ನಿಮ್ಮ ಅಹವಾಲು ವಿಧಾನಸೌಧದ ಬಾಗಿಲು ತಟ್ಟಬೇಕು. ಇದನ್ನು ಆಧರಿಸಿ ಮಂಗಳೂರಿನ ಸಮೃದ್ಧಿಗೆ ಸರಕಾರದಿಂದ ಸ್ಪಷ್ಟ ಯೋಜನೆಗಳು ರೂಪುಗೊಳ್ಳಬೇಕು ಎನ್ನುವುದು ನಮ್ಮ ಒತ್ತಾಸೆ. ಮಂಗಳೂರಿನ ಪ್ರಮುಖ ಸಮಸ್ಯೆಗಳು ಮತ್ತು ಅವುಗಳ ನಿವಾರಣೆಗೆ ಸರಕಾರಕ್ಕೆ ಮಾರ್ಗದರ್ಶಿ ಆಗಬಲ್ಲ ಸಮಗ್ರ ವರದಿಗಳು ಹತ್ತು ದಿನಗಳ ಪರ್ಯಂತ ಪ್ರಕಟವಾಗಲಿದೆ. ನೀವೂ ನಮ್ಮೊಂದಿಗೆ ಕೈ ಜೋಡಿಸಿ. ಸರಣಿ ಮುಗಿದ ಬಳಿಕ ಇವುಗಳನ್ನು ಖುದ್ದಾಗಿ ಸರಕಾರದ ಮುಂದಿಟ್ಟು ಸ್ಪಷ್ಟ ಉತ್ತರ ಪಡೆಯುವುದು ನಮ್ಮ ಜವಾಬ್ದಾರಿ. ಇಷ್ಟೇ ಅಲ್ಲ, ಕಾಲಕಾಲಕ್ಕೆ ಸರಕಾರ ಈ ಸಮಸ್ಯೆಗಳ ನಿವಾರಣೆಗೆ ಏನು ಮಾಡಿತು? ಎಂದು ಪ್ರಶ್ನಿಸುವ ಹೊಣೆಗಾರಿಕೆಯನ್ನೂ ನಾವು ಹೊರುತ್ತಿದ್ದೇವೆ. ಮಂಗಳೂರಿನ ಮುನ್ನಡೆಗೆ ಇದೊಂದು ವಿಜಯ ಕರ್ನಾಟಕದ ನಡೆ.
ಬನ್ನಿ, ನಾವೆಲ್ಲರೂ ಸೇರಿ ಮಂಗಳೂರನ್ನು ಬದಲಾಯಿಸೋಣ. ಉತ್ತಮ ಮಂಗಳೂರಿನ ನಿರ್ಮಾಣಕ್ಕಾಗಿ, ನಿಮ್ಮ ಅಮೂಲ್ಯವಾದ ಸಲಹೆ ಹಾಗೂ ಪರಿಹಾರ ಸೂತ್ರಗಳನ್ನು ನಮಗೆ ಕಳುಹಿಸಿ. ಮುಂದೆ ಹೋಗೋಣ ಮಂಗಳೂರು.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)