* ನಗರದ ಕೆಲವು ರಸ್ತೆಗಳ ಸುಸ್ಥಿತಿ ನಿರ್ವಹಣಾ ಕಾರ್ಯವನ್ನು ಅವುಗಳನ್ನು ಹೆಚ್ಚಾಗಿ ಬಳಸುವ ಬೃಹತ್ ಕಾರ್ಖಾನೆಗಳ ಸುಪರ್ದಿಗೆ ವಹಿಸಿಕೊಂಡಬೇಕು. ಉದಾ : ಮಠದಕಣಿ ಪ್ರಥಮ ಅಡ್ಡ ರಸ್ತೆಯ ನಿರ್ವಹಣೆಯನ್ನು ಬೋಳೂರಿನಲ್ಲಿರುವ ಮೆ . ಹಿಂದೂಸ್ಥಾನ ಲಿವರ್‍ಸ್ ಸಂಸ್ಥೆಗೆ ವಹಿಸಬೇಕು.
* ನಗರದ ಕೆಲವೆಡೆ ಉದ್ಯಮಿಗಳು ಹೊಂದಿರುವ ಸ್ಥಳಗಳು ದಶಕದಿಂದ ಪಾಳು ಬಿದ್ದಿದ್ದು, ಸೊಳ್ಳೆಗಳ ಉತ್ಪಾದನಾ ಕೇಂದ್ರವಾಗಿ ಬೆಳೆಯುತ್ತಿದೆ. ಅಂತಹ ಸ್ಥಳಗಳನ್ನು ಗುರುತಿಸಿ ಸಾರ್ವಜನಿಕ ಹಿತಾಸಕ್ತಿಯ ಕಾರಣಗಳಿಗಾಗಿ ಸರಕಾರ/ಸ್ಥಳೀಯಾಡಳಿತ ವಶಕ್ಕೆ ತೆಗೆದುಕೊಳ್ಳಬೇಕು.
*ನಗರದ ಪ್ರಮುಖ ರಸ್ತೆ ಬದಿ ಹಲವು ವರ್ಷಗಳಿಂದ ಅನಾಥವಾಗಿ ಬಿದ್ದಿರುವ ವಾಹನ ಮತ್ತಿತರ ಚರ ವಸ್ತುಗಳನ್ನು ಎತ್ತಂಗಡಿ ಮಾಡಿಸಬೇಕು.
* ನಗರದ ಹೃದಯ ಭಾಗದಲ್ಲಿರುವ ವ್ಯವಹಾರ ಮಳಿಗೆಗಳ ಕಟ್ಟಡದ `ಪಾರ್ಕಿಂಗ್' ಸ್ಥಳವನ್ನು ಇತರ ಉದ್ದೇಶಗಳಿಗೆ ಬಳಸುವುದನ್ನು ನಿಷೇಸಿ ಕ್ರಮ ಕೈಗೊಳ್ಳುವುದು.
* ನಗರದ ಬೃಹತ್ ಮನೆಗಳ ಹಿತ್ತಲಿನ ನೀರು ನೇರ ಸಾರ್ವಜನಿಕ ರಸ್ತೆಗೆ ಹರಿಯ ಬಿಡುವುದನ್ನು ತಡೆಯಬೇಕು.
* ಮಣ್ಣಗುಡ್ಡೆ ಗಾಂನಗರದಲ್ಲಿ ತ್ಯಾಜ್ಯ ವಸ್ತು ಎಸೆಯುತ್ತಿರುವ ಜಾಗವನ್ನು ಸುವ್ಯವಸ್ಥಿತ ರಸ್ತೆಯಾಗಿ ಪರಿವರ್ತಿಸಬೇಕು.
* ನಗರದ ಪ್ರವಾಸಿ ತಾಣಗಳಲ್ಲೊಂದಾದ ಸುಲ್ತಾನ್ ಬತ್ತೇರಿ ಪ್ರದೇಶವನ್ನು ಅಭಿವೃದ್ದಿ ಪಡಿಸಿ, ದೋಣಿ ವಿಹಾರ ಕೇಂದ್ರವಾಗಿಸಬೇಕು.
* ಮಂಗಳೂರು ಮುನ್ನಡೆಗಾಗಿ `ವಿಜಯ ಕರ್ನಾಟಕ` ದಲ್ಲಿ ಬರುವ ಎಲ್ಲ ಗುಣಾತ್ಮಕ ಸಲಹೆಗಳಿಗೆ ಆಡಳಿತ ವ್ಯವಸ್ಥೆ ಸೂಕ್ತವಾಗಿ ಸ್ಪಂದಿಸಲಿ. ನಗರ ಅಭಿವೃದ್ದಿ ಹೊಂದಲಿ .
- ಮ.ಯೋಗೀಶ್ ಆಚಾರ್ ,ಮಠದಕಣಿ , ಮಂಗಳೂರು
ಶನಿವಾರ, ಅಕ್ಟೋಬರ್ 25, 2008
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ