ಮಂಗಳವಾರ, ಅಕ್ಟೋಬರ್ 21, 2008

ಕೃಷಿ ತೋ ನಾಸ್ತಿ ದುರ್ಭಿಕ್ಷಂ

ಶ್ರೀ ಪಡ್ರೆ (ಅಡಕೆ ಪತ್ರಿಕೆ ಸಂಪಾದಕ )
ಬಹುತೇಕ ಗ್ರಾಮಗಳಲ್ಲಿ ತೋಟಗಳು ಮಾರಾಟಕ್ಕಿವೆ. ಕೃಷಿ ಮತ್ತು ಹಳ್ಳಿಗಳ ಬಗ್ಗೆ ಅಪ್ಪಟ ಪ್ರೀತಿ ಇರುವ ರೈತರನ್ನೂ ಕೂಡ ನಗರಗಳ ದಾರಿ ಹಿಡಿಸುವ ಈ ಸ್ಥಿತಿ ವಿಶೇಷ. ದೇಶಕ್ಕೆ ಎದುರಾಗಲಿರುವ ಗಂಡಾಂತರಕಾರಿ ಕಾಯಿಲೆಯ ದಿಕ್ಸೂಚಿ.
ಉದ್ಯೋಗಾವಕಾಶ ಮತ್ತು ಅಭಿವೃದ್ಧಿಯ ಹೆಸರು ಹೇಳಿ ಬೃಹತ್ ಉದ್ದಿಮೆಗಳಿಗೆ ರತ್ನ ಕಂಬಳಿ ಹಾಸುವ ಸರಕಾರ ಇದರ ಅದೆಷ್ಟೋ ಪಟ್ಟು ಜನರಿಗೆ ನೆಮ್ಮದಿಯಲ್ಲಿ ಅನ್ನ ಕೊಡಬಲ್ಲ ಕೃಷಿ ಮತ್ತು ಹಳ್ಳಿಗಳ ಕಡೆ ಅದರ ಒಂದಂಶ ಗಮನ ಕೊಡದಿರುವುದು ಈ ಕಾಯಿಲೆ ಹಿಂದಿನ ಮೂಲ ಕಾರಣ.
ಏನಾಗಬೇಕು
೧. ಕೃಷಿಕರಿಗೆ ಸಬ್ಸಿಡಿಗಿಂತ ಬೆಳೆದ ಉತ್ಪನ್ನಗಳಿಗೆ ನ್ಯಾಯಬೆಲೆ ಸಿಗಲಿ.
೨. ಗ್ರಾಮೀಣ ಆರ್ಥಿಕತೆ ಹೆಚ್ಚಿಸುವ ಒಳ್ಳೆಯ ಉದ್ಯೋಗಾವಕಾಶ ಸೃಷ್ಟಿಸುವ ಕೃಷಿ ಸಂಬಂಧ ಕಿರುಉದ್ದಿಮೆ ಹೆಚ್ಚಿಸಬೇಕು.
೩. ನಮ್ಮ ಯೋಜನೆಗಳು ಪ್ರಮುಖವಾಗಿ ಹಳ್ಳಿಕೇಂದ್ರಿತವಾಗಿರಬೇಕು.
೪. ಹಳ್ಳಿಗಳು ಕಂಗೆಟ್ಟರೆ ಅನಂತರದ ಫಲವಾಗಿ ನಗರಗಳ ತಲೆನೋವು ಇನ್ನೆಷ್ಟೋ ಪಟ್ಟು ಹೆಚ್ಚುತ್ತದೆ ಎಂಬುದು ನೆನಪಿರಲಿ.
ಆಶಯಗಳು
೧. ಕೃಷಿ ಸಂಶೋಧನೆ ರೈತರ ಅಗತ್ಯವನ್ನು ಬಹುತೇಕ ಪರಿಗಣಿಸ್ತಾ ಇಲ್ಲ. ಇದು ಕೃಷಿ ಸ್ನೇಹಿಯಾಗಬೇಕಾಗಿದೆ.
೨. ರೈತರ ಕೃಷಿ ಭೂಮಿಯಲ್ಲಿ ಸಂಶೋಧನೆಗಳು ಆರಂಭವಾಗಲಿ.
೩. ನಮ್ಮ ಕೃಷಿ ಸಂಶೋಧನಾ ಕೇಂದ್ರಗಳ ಸಾರ್ಥಕತೆಗೆ ಸರಕಾರದಿಂದ ಬೇಸಿಕ್ ಸಂಬಳ ಕೊಟ್ಟು ಉಳಿದಿದ್ದನ್ನು ಸಂಶೋಧನೆಯ ತೋಟದಿಂದ ಬಂದ ಉತ್ಪನ್ನಗಳಿಂದ ಐನ್ ಆದಾಯ ಹಂಚಿಕೊಳ್ಳುವಂತೆ ವ್ಯವಸ್ಥೆ ಯಾಗಲಿ.
೪. ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟು, ನದಿ ತಡೆಯುವ ಕುರಿತು ಹೆಚ್ಚು ಆಲೋಚನೆಗಳು ನಡೆಯುತ್ತಿವೆ. ಇದಕ್ಕೆ ಮುಂಚೆ ನಮ್ಮ ಗುಡ್ಡ, ಜಮೀನು, ಮನೆಯಂಗಳದಲ್ಲಿ ತತ್‌ಸ್ಥಳದಲ್ಲಿ ನೀರಿಂಗಿಸುವ ಕುರಿತು ಆದ್ಯತೆ ಕೊಡಬೇಕು. ನೀತಿ ಮತ್ತು ಅನುಷ್ಠಾನ ಈ ನಿಟ್ಟಿನಲ್ಲಿ ನಡೆಯಬೇಕು.
೫. ತೆರೆದ ಬಾವಿಗಳ (ಓಪನ್ ವೆಲ್) ಕಾಲ ಆಗಿಹೋಗಿದೆ ಎಂಬ ಭ್ರಮೆ ಹಲವರಿಗಿದೆ. ಇದು ತಪ್ಪು. ಬಾವಿಗಳಿಗೆ ಐದು ಸಾವಿರ ವರ್ಷಗಳ ಇತಿಹಾಸವಿದೆ.ರುವ ಇಲ್ಲಿ ಬೀಳುವ ಮಳೆಯಲ್ಲಿ ನೀರು

ಕಾಮೆಂಟ್‌ಗಳಿಲ್ಲ: