ಶುಕ್ರವಾರ, ಅಕ್ಟೋಬರ್ 24, 2008

ಮುನ್ನಡೆಯ ಹೆಜ್ಜೆ ಗುರುತುಗಳು

*ಸುರತ್ಕಲ್ ಎನ್‌ಐಟಿಕೆಯನ್ನು ಐಐಟಿ ಮಟ್ಟಕ್ಕೇರಿಸುವುದು. ಜತೆಗೆ ಜಿಲ್ಲೆಯಲ್ಲೊಂದು ಸರಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವುದು.
*ಜಿಲ್ಲೆಯಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳ , ಅಲ್ಲಿರುವ ವಿವಿಧ ಕೋರ್ಸ್‌ಗಳ ಮಾಹಿತಿ/ಸ್ಪಷ್ಟ ಚಿತ್ರಣ ಆಸಕ್ತರಿಗೆ ಯಾವುದೇ ಅಡೆತಡೆಯಿಲ್ಲದೆ ಒಂದೆಡೆ ಸಿಗುವಂತಿರಬೇಕು.
*ಬೆಂಗಳೂರಿನಲ್ಲಿ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗಲು ಕನಿಷ್ಠ ಎರಡರಿಂದ ನಾಲ್ಕು ಗಂಟೆಗಳು ಬೇಕಾಗುತ್ತವೆ. ಮುಂದೊಂದು ದಿನ ಮಂಗಳೂರಿನಲ್ಲಿ ಹಾಗಾಗದಿರಲು ಅತ್ಯಂತ ಯೋಜಿತ ಸಾರಿಗೆ
ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವುದು.
*ಮಂಗಳೂರು ನಗರದ ಮೂಲ ಸೌಕರ್ಯ, ಸೌಲಭ್ಯಗಳಿಗಾಗುವ ಒತ್ತಡವನ್ನು ತಪ್ಪಿಸುವುದಕ್ಕಾಗಿ ಸಮೀಪದ ಪಟ್ಟಣಗಳನ್ನು ( ಬಿ.ಸಿ.ರೋಡ್, ಪುತ್ತೂರು, ಬೆಳ್ತಂಗಡಿ, ಮೂಡುಬಿದರೆ ಇತ್ಯಾದಿ) ಅಭಿವೃದ್ಧಿಗೊಳಿಸುವುದು. ಈ ಪಟ್ಟಣಗಳಲ್ಲಿ ಬಡಾವಣೆಗಳ ನಿರ್ಮಾಣಕ್ಕೆ ಉತ್ತೇಜನ ನೀಡುವುದು.
*ಮಂಗಳೂರನ್ನು ಸುಲಲಿತವಾಗಿ ತಲುಪುವಂತಾಗಲು ಈ ಪಟ್ಟಣಗಳಿಂದ ಮಂಗಳೂರಿಗೆ ಉತ್ತಮ ಸಂಪರ್ಕ ವ್ಯವಸ್ಥೆ.
*ಧಾರ್ಮಿಕ ಮುಖಂಡರು, ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳ ಧುರೀಣರು, ರಾಜಕೀಯ ನಾಯಕರು ಒಂದೆಡೆ ಸೇರಿ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮುಂದಿನ ಐದು ವರ್ಷಗಳಲ್ಲಿ ಯಾವುದೇ ರೀತಿಯ ಬಂದ್; ಮುಷ್ಕರಗಳಿಗೆ ಬಿಲ್‌ಕುಲ್ ಬೆಂಬಲ ನೀಡದಿರಲು ನಿರ್ಧರಿಸುವುದು.
*ನಗರದ ಎಲ್ಲಾ ಕಾಲೇಜ್‌ಗಳ ವಿದ್ಯಾರ್ಥಿಗಳಿಗೆ ಬೈಸಿಕಲ್ ಮಾತ್ರ ಬಳಸಲು ಅನುಮತಿಸುವುದು. (ಮಣಿಪಾಲ ಎಂಐಟಿ ಕ್ಯಾಂಪಸ್‌ನಲ್ಲಿ ಈಗಾಗಲೇ ಈ ಕ್ರಮ ಚಾಲ್ತಿಯಲ್ಲಿದೆ). ನಗರದೊಳಗೆ ಸೈಕಲ್ ಬಳಸಲು ಸಾರ್ವಜನಿಕರಿಗೆ ಉತ್ತೇಜನ ನೀಡುವುದು (ತೆರಿಗೆ ಕಡಿತ , ಮೂಲಸೌಕರ್ಯ/ಅನುದಾನಗಳನ್ನು ತಕ್ಷಣ ಒದಗಿಸುವುದು ಇತ್ಯಾದಿ). ತನ್ಮೂಲಕ ನಗರದೊಳಗೆ ವಾಹನ ದಟ್ಟಣೆ ನಿವಾರಣೆ.
*ಜಿಲ್ಲೆಯ ಎಲ್ಲಾ ಪ್ರವಾಸೀ ತಾಣಗಳಲ್ಲಿ , ತೀರ್ಥಕ್ಷೇತ್ರಗಳಲ್ಲಿ ಸಮೀಪದ ಇತರ ಸ್ಥಳಗಳ ಬಗ್ಗೆ ಮಾಹಿತಿ ನೀಡಲು ಪ್ರವಾಸೋದ್ಯಮ ಇಲಾಖೆಯ ಕೌಂಟರ್‌ಗಳನ್ನು ತೆರೆಯುವುದು.

ಇಂತಹ ಹಲವು ಉತ್ತೇಜಕ/ಅಭಿವೃದ್ಧಿ ಪೂರಕ ಅಂಶಗಳೊಂದಿಗೆ ಬುದ್ಧಿವಂತರಿರುವ ಮಂಗಳೂರು ಮಾದರಿ ನಗರ / ಮಾದರಿ ಜಿಲ್ಲೆಯಾಗಿ ರೂಪುಗೊಳ್ಳುವುದು.

-ರಾಜೇಂದ್ರ ಕೃಷ್ಣ ,
ಉಪಪ್ರಾಂಶುಪಾಲರು,
ಗೇರುಕಟ್ಟೆ, ಬೆಳ್ತಂಗಡಿ.

ಕಾಮೆಂಟ್‌ಗಳಿಲ್ಲ: